ಬೆಳಗಾವಿ

Belgaum city and district news

ಸಂಕೇಶ್ವರ ಸಮಗ್ರ ಅಭಿವೃದ್ದಿ ಸಂಸ್ಥೆಯಿಂದ ಸತ್ಕಾರ

ಸಂಕೇಶ್ವರ 15: ಸ್ಥಳೀಯ ಸಂಕೇಶ್ವರ ಸಮಗ್ರ ಅಭಿವೃದ್ದಿ ಸಂಸ್ಥೆವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಡಾ. ಜಿ. ಎಸ್. ಮರಗುದ್ದಿ, ಶ್ರೀಮತಿ ಹೇಮಾ ದೇಸಾಯಿ, ಎಸ್.ಬಿ. ಹಿರೇಮಠ, ಡಾ. ಎಸ್.ಬಿ. ಪಾಟೀಲ ಹಾಗೂ ಎಲ್.ಎ. ಬಡಿಗೇರ ಅವರನ್ನು ಎಸ್.ಡಿ.ವ್ಹಿ. ಎಸ್. ಸಂಘದ ಆಡಳಿತ ಮಂಡಳಿ ಸದಸ್ಯರಾದ ಎಸ್.ಡಿ. ಬಂಗಾರಿ ಹಾಗೂ ಶಿವಾನಂದ ಸಂಸುದ್ದಿ ಸಂಯುಕ್ತವಾಗಿ ಸತ್ಕರಿಸಿದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಜಿ.ಎಸ್. ಮರಗುದ್ದಿ ಮಾತನಾಡಿ, ಪ್ರತಿವರ್ಷ ಸಪ್ಟೆಂಬರ 5ರಂದು ಶಿಕ್ಷಕರ ದಿನಾಚರಣೆ ಆಚರಣೆಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕರಾಗಿದ್ದ...

ಹುಲಕೋಟಿಯಲ್ಲಿ ಜಾಗೃತಿ ಶಿಬಿರ

ಗದಗ, 15- ಮಹಿಳೆ ಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ ಗದಗ ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಗ್ರಾಮ ಪಂಚಾಯತಿ ಹಾತಲಗೇರಿ, ಹುಲ ಕೋಟಿ ಹಾಗೂ ಬಿಂಕದಕಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಕೌಟಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ನಿಯಮ 2006 ರ ರಡಿ ಜಾಗೃತಿ ಶಿಬಿರವು ಆಗಸ್ಟ 25 ರಂದು ಹುಲಕೋಟಿ ಸ್ವಯಂ ಸಿದ್ದ ಭವನದಲ್ಲಿ ಏರ್ಪಡಿಸಲಾಗಿತ್ತು. ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ವ.ನಿ.ಜೆ.ಎಂ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ, ಕಾರ್ಯದರ್ಶಿಗಳಾದ   ಉಮೇಶ ಮೂಲಿ...

ಮಾಹಿತಿ ಒದಗಿಸಲು ಕರೆ

ಗದಗ,  15- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಇದ್ದು, ಶಿಕ್ಷಣ ಪಡೆದು ವಿವಿಧ ಉದ್ಯೌಗಗಳಲ್ಲಿರುವ (ಖಾಸಗಿ/ಸರ್ಕಾರಿ) ಉನ್ನತ ಸ್ಥಾನಗಳಲ್ಲಿರುವ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಉನ್ನತ ಸೇವೆ ಸಲ್ಲಿಸುತ್ತಿರುವ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.  ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿದ್ದು ವ್ಯಾಸಂಗ ಮಾಡಿ ದಂತಹವರು ತಮ್ಮ ಹೆಸರು, ಹಾಲಿ ಉದ್ಯೌಗ ಮತ್ತು ವಿಳಾಸ, ದೂರ ವಾಣಿ ಸಂಖ್ಯೆ , ವಸತಿ ನಿಲಯದಲ್ಲಿದ್ದ ಅವಧಿ ಇತ್ಯಾದಿ ವಿವರಗಳನ್ನು ನಿರ್ದೇಶಕರು, ಡಿ. ದೇವರಾಜ ಅರಸು ಸಂಶೋಧನಾ ಸಂಸ್ಥೆ, ನಂ. 16-ಡಿ , ದೇವರಾಜ ಅರಸು ಭವನ, 2 ನೇ...

ಶಿಂದೋಗಿಯಲ್ಲಿ ಸೈಕಲ್ ವಿತರಣೆ

ಮುನವಳ್ಳಿ (ತಾ.ಸವದತ್ತಿ) 15-  ಸಮೀಪದ ಶಿಂದೋಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ  2011-12 ನೇ ಸಾಲಿನ 8 ನೇ ವರ್ಗದ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಜರುಗಿತು. ಕಾರ್ಯಕ್ರಮದಲ್ಲಿ ವೇ. ಮೂ. ಮಡಿವಾಳಯ್ಯ ಹಿರೇಮಠ ನೇತೃತ್ವದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಫಕ್ಕೀರಪ್ಪ ಸನದಿ ಉಪಾಧ್ಯಕ್ಷೆ ಶ್ರೀಮತಿ ಅನುಸೂಯಾ ಬನ್ನೂರ ಹಿರಿಯರಾದ ಜಿ. ಬಿ. ಕುರುಬಗಟ್ಟಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಮಾಳಪ್ಪ ಯಕ್ಕೇರಿ. ಆಯ್. ಜಿ. ದ್ಯಾಮನಗೌಡ್ರ  ಹನಮಂತ ಬೆರಗುಡ್ಡ. ಡಿ.ಡಿ. ಟೋಪೋಜಿ. ಸುರೇಶ ನಡನಳ್ಳಿ ಬಾಳಪ್ಪ ಮೇಟಿ.ಫಕ್ಕೀರಪ್ಪ ಖಾನಪ್ಪನವರ ಮುತ್ತಪ್ಪ  ಮುಶೆನ್ನವರ ಮಹಾದೇವ ಉಳ್ಳಾಗಡ್ಡಿ ಶ್ರೀಮತಿ ಶಾಂತವ್ವ...

ಮಕ್ಕಳಿಗೆ ವ್ಯವಹಾರಿಕ ಜ್ಞಾನ ಅತ್ಯಗತ್ಯ: ಯಲಿಗಾರ

ಮುನವಳ್ಳಿ (ತಾ.ಸವದತ್ತಿ) 15- ಕಲಿಯುವ ಮಕ್ಕಳಿಗೆ ವ್ಯವಹಾರಿಕ ಜ್ಞಾನ ಅತ್ಯಗತ್ಯ ಎಂದು ಜಿಲ್ಲಾ ಪಂಚಾಯತ ಸದಸ್ಯ ರವೀಂದ್ರ ಯಲಿಗಾರ ಹೇಳಿದರು. ಅವರು ಸಾರ್ವಜನಿಕ ಶಿಕ್ಷಣ ಇಲಾಖೆ,ಬೆಳಗಾವಿ, ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಾರ್ಯಾಲಯ ಸವದತ್ತಿ, ಸಮೂಹ ಸಂಪನ್ಮೂಲ ಕೇಂದ್ರ ಮುನ ವಳ್ಳಿ ಇವರ ಸಂಯುಕ್ತಾಶ್ರ ಯದಲ್ಲಿ ಸರಕಾರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ದಿ.15-9-2011 ರಂದು ಜರುಗಿದ ಟಿ.ಎಲ್.ಎಂ. ಮೇಳ ಹಾಗೂ ಸಂತೆ ಮೇಳ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತ ನಾಡಿದರು. ಕೇವಲ ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯಾಗಿಸು ವಲ್ಲಿ ಪಾಲಕರು ಪ್ರಯತ್ನ ಪಡಬೇಕು...

ನೀರು ಬಿಡಬೇಕೆಂದು ಒತ್ತಾಯಿಸಿ, ಸತ್ಯಾಗ್ರಹ

 ಚಿಕ್ಕೌಡಿ : ತಮ್ಮ ಗ್ರಾಮಗಳ ಜಮೀನುಗಳಿಗೆ ಕಾಲುವೆಗಳ ಮೂಲಕ ನೀರು ಬಿಡಬೇಕೆಂದು ಒತ್ತಾಯಿಸಿ, ರಾಯಬಾಗ ತಾಲೂಕಿನ ಮಂಟೂರ, ನಿಪನಾಳ, ಕಟಕಬಾವಿ ಹಾಗೂ ದೇವಾಪೂರಟ್ಟಿ ಗ್ರಾಮಗಳ ರೈತರು ಕಳೆದ ಹತ್ತು ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಉಗ್ರ ಸ್ವರೂಪ ತಾಳುವದನ್ನು ಮನಗಂಡ ನೀರಾವರಿ ನಿಗಮದ ಅಧಿಕಾರಿಗಳು ಮಂಗಳವಾರ ಸಂಜೆ ಕಾಲುವೆಯ ಸಮಗ್ರ ತಪಾಸಣೆ ನಡೆಸಿ ಲಿಖಿತವಾಗಿ ಬರವಸೆ ನೀಡಿದ ನಂತರ ಇಂದು ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳಲಾಗಿದೆ. ಈ ಮದ್ಯ ರೈತರು ಕಚೇರಿಯ ಸಿಬ್ಬಂದಿಯನ್ನು ಹೊರಗೆ ತೆಗೆದು ಕಚೇರಿಗೆ ಬೆಳಿಗ್ಗೆಯಿಂಗ ಸಂಜೆಯವರೆಗೆ ಬೀಗ ಜಡಿದು ಘೋಷಣೆಗಳನ್ನು ಕೊಗುತ್ತಿದ್ದರು. ನೀರಾವರಿ...

ಬದ್ರಬಾಹು ಶ್ರೀಗಳ ಜನ್ಮ ಜಯಂತಿ ಆಚರಣೆ

ಬೆಳಗಾವಿ.ಸೆ.14: ಸ್ಥಳೀಯ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದಲ್ಲಿಂದು ವಿದ್ಯಾಪೀಠದ ಸಂಸ್ಥಾಪಕ ಅಧಿಷ್ಠಾತರಾದ ಪರಮ ಪೂಜ್ಯ ಜಿನೆಕ್ಯ 105 ಶ್ರೀ. ಬದ್ರಬಾಹು ಸ್ವಾಮೀಜಿಯವರ 84 ನೇ ಜನ್ಮ ಜಯಂತಿಯನ್ನು ಭಕ್ತಿಭಾವದಲ್ಲಿ ಆಚರಿಸಲಾಯಿತು. ವಿದ್ಯಾಪೀಠದ ಅಧಿಷ್ಠಾತ ಹಾಗೂ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಶಾಸಕ ಸಂಜಯ ಪಾಟೀಲ ಅವರು ಶ್ರೀಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿದ್ಯಾಪೀಠದ ಅಂಗ ಸಂಸ್ಥೆಯ ಪ್ರಾಚಾರ್ಯಗಳಾದ ಎಸ್.ಕೆ.ಕಟ್ಟಿ, ಜೆ.ಡಿ.ದುರದುಂಡಿ, ತ.ಬಾ.ಹಮನಗೊಂಡ, ಮಂಗಲ ಕುಲಕರ್ಣಿ, ಕೆ.ಆರ್. ವ್ಯಾಹಳ, ಕಳಸೇಕರ, ಸೇ ರಿದಂತೆ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾಪೀಠದ...

68,377 ರೂ. ಗಳ ವಿಮೆಯ ಚೆಕ್ ವಿತರಣೆ

ಅಂತರರಾಷ್ಟ್ತ್ರೀಯ ಮಟ್ಟದ ಕ್ರೀಡಾಪಟುಗಳಾಗಿ ರೂಪಿಸಲು ಕರೆ  ಹಾರೂಗೇರಿ : ಭಾರತೀಯ ಜೀವ ವಿಮಾ ನಿಗಮದಲ್ಲಿ ಹಣ ತೊಡಗಿಸುವ ಗ್ರಾಹಕರಿಗೆ ಆಪತ್ಕಾಲದಲ್ಲಿ ಎದುರಾಗುವ ಸಂಕಷ್ಟಗಳಿಗೆ ನಿಗಮವು ಸಕಾಲಿಕ ಪರಿಹಾರಗಳನ್ನು ನೀಡುತ್ತ ಬಂದಿದ್ದು, ಈ ನಿಟ್ಟಿನಲ್ಲಿ ಗ್ರಾಹಕರು ನಿಗಮದ ಮೇಲೆ ಹೆಚ್ಚಿನ ವಿಶ್ವಾಸವಿಡಲು ಕಾರಣವಾಗಿದೆ ಎಂದು ಜೀವ ವಿಮಾ ನಿಗಮದ ರಾಯಬಾಗ ಸಂಪರ್ಕ ಶಾಖೆಯ ಶಾಖಾಧಿಕಾರಿ ಕೆ.ಎಸ್.ದುರ್ಗಣ್ಣವರ ಹೇಳಿದರು. ಅವರು ರಾಯಬಾಗ ಶಾಖೆಯಲ್ಲಿ ವಿಮೆ ಮಾಡಿಕೊಂಡು ಅಪಘಾತದಲ್ಲಿ ಮೃತಪಟ್ಟ ರಾಯಬಾಗ ತಾಲೂಕಿನ ಭಿರಡಿ ಗ್ರಾಮದ ದುಂಡಪ್ಪ ಅಂಕಲೆ ಅವರ ವಾರಸುದಾರಳಾದ ಪತ್ನಿ ಯಲ್ಲವ್ವ ಅಂಕಲೆ ಅವರಿಗೆ 68,377...

ಹಿಂದಿ ದಿವಸ ರದ್ದುಗೊಳಿಸಲು ಕರವೇ ಆಗ್ರಹ

 ಬೆಳಗಾವಿ, 15- ಕೇಂದ್ರ ಸರ್ಕಾರ ಒತ್ತಾಯಪೂರ್ವಕವಾಗಿ ಎಲ್ಲ ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನು ಹೇರುತ್ತಿರುವ ಕ್ರಮವನ್ನು ಖಂಡಿಸಿ ಕರವೇ ಕಾರ್ಯಕರ್ತರು ನಗರದಲ್ಲಿಂದು ಕೇಂದ್ರ ಸರ್ಕಾರದ ಪ್ರತಿಕೃತಿಯನ್ನು ದಹನ ಮಾಡಿ ಪ್ರತಿಭಟಿಸಿದರು. ಹಿಂದಿಯೇತರ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಅನಗತ್ಯವಾಗಿ ಹಿಂದಿ ಭಾಷೆಯನ್ನು ಹೇರುವುದರ ಜೊತೆಗೆ ರಾಜ್ಯ ಮಟ್ಟದ ಸರ್ಕಾರಿ ಕಛೇರಿಗಳಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕಲಿಯುವಂತೆ ಕೇಂದ್ರ ದಬ್ಬಾಳಿಕೆ ನಡೆಸಿದೆ. ಕೇಂದ್ರ ಸರ್ಕಾರ ಹಿಂದಿಯನ್ನು ತುರುಕಿ ಪ್ರಾದೇಶಿಕ ಭಾಷೆಗಳು ಸಾಯುವಂತೆ ಕ್ರಮ ಕೈಗೊಂಡಿದ್ದು, ಕೇಂದ್ರ ಕೂಡಲೇ ಸೆಪ್ಟೆಂಬರ್ 14 ರಂದು ನಡೆಸುವ ಹಿಂದಿ ದಿವಸ ಕಾರ್ಯಕ್ರಮವನ್ನು ರದ್ದು ಮಾಡಬೇಕೆಂದು...

ಜಿಲ್ಲಾಮಟ್ಟದ ದಸರಾ ಮಹಿಳಾ (ಪೈಕಾ) ಕ್ರೀಡಾಕೂಟಕ್ಕೆ ಚಾಲನೆ

 ಬೆಳಗಾವಿ: ಸೆಪ್ಟೆಂಬರ್: 14:ವಿದ್ಯಾರ್ಥಿಗಳನ್ನು ಅಂತರರಾಷ್ಟ್ತ್ರೀಯ ಮಟ್ಟದ ಕ್ರೀಡಾಪಟುಗಳನ್ನಾಗಿ ರೂಪಿಸುವ ದಿಸೆಯಲ್ಲಿ ಅವರಿಗೆ ಕ್ರೀಡೆಯ ಮಹತ್ವದ ಬಗ್ಗೆ ಅವಶ್ಯಕ ಮಾರ್ಗದರ್ಶನ ನೀಡಬೇಕೆಂದು ಕ್ರೀಡಾ ತರಬೇತಿದಾರರಿಗೆ ಹಾಗೂ ಅಧಿಕಾರಿಗಳಿಗೆ ಸಂಸದರಾದ. ಸುರೇಶ ಅಂಗಡಿ ಅವರು ಸಲಹೆ ನೀಡಿದ್ದಾರೆ. ನಗರದ ಸಿ.ಪಿ.ಎಡ್. ಕಾಲೇಜು ಮೈದಾನದಲ್ಲಿಂದು ಜಿಲ್ಲಾಮಟ್ಟದ ದಸರಾ/ ಮಹಿಳಾ (ಪೈಕಾ) ಕ್ರೀಡಾಕೂಟವನ್ನು ಕ್ರೀಡಾಪಟುಗಳಿಂದ ಕ್ರೀಡಾ ಜ್ಯೌತಿ ಸ್ವೀಕರಿಸಿ ಪಾರಿವಾಳಗಳನ್ನು ಹಾರಿಬಿಡುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಆರೋಗ್ಯವಂತ ಸದೃಢ ಯುವಕರು ಸದೃಢ ರಾಷ್ಟ್ತ್ರದ ಪ್ರತೀಕವಾಗಿರುತ್ತಾರೆ. ಕಾರಣ ಯುವಕರಲ್ಲಿ ಕ್ರೀಡಾ ಮಹತ್ವದ ಬಗ್ಗೆ ಅರಿವನ್ನು ಮೂಡಿಸುವ ಜೊತೆಗೆ ಅವರನ್ನು ಅಂತರರಾಷ್ಟ್ತ್ರೀಯ...
loading...