ಬೆಳಗಾವಿ

Belgaum city and district news

ಬೆಳೆಯು ಚೈತನ್ಯದಾಯಕವಾಗಿರಲಿ – ದೇಶಪಾಂಡೆ

ಯಮಕನಮರಡಿ 15: ರೈತರು ತಮ್ಮ ಜಮೀನುಗಳಲ್ಲಿ ಬೆಳೆಯು ಚೈತನ್ಯದಾಯಕವಾಗಿರಲು ಗೊಬ್ಬರ ಎಲೆ ಕಷಾಯ ಉಪಯೋಗಿಸಬೇಕು. ಒಂದು ಎಕರೆಗೆ ಬೇಕಾಗುವ ಸಾಮಗ್ರಿ ಬಳಸಿಕೊಂಡು ಉತ್ತಮ ಬೆಳೆ ಬೆಳೆಸಬೇಕೆಂದು ಕುಂದರಗಿಯ ನೈಸರ್ಗಿಕ ಕೃಷಿತಜ್ಞ, ಗಡಿನಾಡು ಅಭಿವೃದ್ದಿ ಹಾಗೂ ಕನ್ನಡ ಸಾಹಿತ್ಯ ಸಂಘದ ನಿರ್ದೇಶಕ ಮಹೇಶ ಮೋಹನರಾವ ದೇಶಪಾಂಡೆ ತಿಳಿಸಿದರು. ಅವರು ಯಮಕನಮರಡಿಯಲ್ಲಿ ದಿ.15 ರಂದು ಆಯೋಜಿಸಿದ ಹೋಬಳಿ ಮಟ್ಟದ ಕೃಷಿ ಜಾಗೃತಿ ಆಂದೋಲನದಲ್ಲಿ ರೈತರಿಗೆ ಬೆಳೆ ಪ್ರಚೋದಕ ವಿಷಯ ಕುರಿತು. ಉಪನ್ಯಾಸ ನೀಡಿ ಮಾತನಾಡಿದರು. ಅವರು ಮಾತನಾಡಿ ಒಂದು ಎಕರೆಗೆ ಬೇಕಾಗುವ ಸಾಮಗ್ರಿ 10 ಲೀಟರ ಗೋಮೂತ್ರ...

ಕಡ್ಡಾಯ ಮತದಾನಕ್ಕೆ ಮನವಿ

ರಾಮದುರ್ಗ: ಮೇ 5 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿರುವ ಎಲ್ಲ ಮತದಾರರು ಕಡ್ಡಾಯ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಬಲ ಪಡಿಸಲು ರಾಮದುರ್ಗ ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿ ಬಿ. ಸುರೇಶರಾವ್ ಮತದಾರರಿಗೆ ಕರೆ ನೀಡಿದರು. ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಆಯೋಜಿಸಿರುವ ಮತದಾರರ ಜಾಗೃತಿಗಾಗಿ ಬೀದಿ ನಾಟಕ ಕಾರ್ಯಕ್ರಮಕ್ಕೆ ಮಂಗಳವಾರ ಮಿನಿ ವಿಧಾನಸೌಧ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಹಿಂದಿನ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದ್ದು ಈ ಭಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಮತ್ತು ಸಂಘ , ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ಸದಸ್ಯರು ಜನರಲ್ಲಿ ಜಾಗೃತಿ ಮೂಡಿಸಬೇಕು...

ರಾಜ್ಯ ಸರಕಾರದಿಂದ ಉತ್ತರವಿಲ್ಲ: ಜೋಶಿ ಸ್ಪಷ್ಟನೆ

ಬೆಳಗಾವಿ 14: ಮಹದಾಯಿ ಹಾಗೂ ಕಳಸಾಬಂಡೂರಿ ನದಿ ಜೋಡಣೆಗೆ ಬಿಜೆಪಿ ಸದಾ ಸಿದ್ಧವಿದೆ. ಗೋವಾ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದಿಂದ ಅಲ್ಲಿಯ ಬಿಜೆಪಿಯನ್ನು ಮನವೊಲಿಸಲಾಗುವುದು. ಅದೇ ರೀತಿ ಅಲ್ಲಿನ ವಿರೋಧ ಪಕ್ಷವಾಗಿರುವ ಕಾಂಗ್ರೆಸಿನ ಮನವೊಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆಯಲಾಗಿತ್ತು. ಆದರೇ ಈ ಪತ್ರಕ್ಕೆ ಯಾವುದೇ ರೀತಿಯ ಉತ್ತರ ರಾಜ್ಯ ಸರಕಾರದಿಂದ ತಮಗೆ ಬಂದಿಲ್ಲ ಎಂದು ಸಂಸದ ಪಹ್ಲಾದ್ ಜೋಶಿ ಸ್ಪಷ್ಟಪಡಿಸಿದರು. ರವಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿವಾದ ಈಗಿಂದಲ್ಲ ಯುಪಿಎ ಸರ್ಕಾರದ ಅವಧಿಯಲ್ಲೂ...

ಸಮುದಾಯ ಭವನ ಮಂಜೂರು-ಕತ್ತಿ

ಬೆಳಗಾವಿ 24: ಸಾಂಸ್ಕ್ಕತಿಕ, ಧಾರ್ಮಿಕ ಮತ್ತು ಸಾಹಿತ್ಯ ಚಟುವಟಿಕೆಗಳ ಅನುಕೂಲವಾಗುವ ನಿಟ್ಟಿನಲ್ಲಿ ಸಮುದಾಯ ಭವನ ಮಂಜೂರು ಮಾಡಲಾಗುವುದು ಎಂದು ಸಂಸದ ರಮೇಶ ಕತ್ತಿ ಅವರು ಭರವಸೆ ನೀಡಿದರು. ಹುಕ್ಕೇರಿ ತಾಲೂಕು ಸಾರಾಪುರ ಗ್ರಾಮದ ಜೈನ ಮಂದಿರದಲ್ಲಿ ನಡೆಯುತ್ತಿರುವ ದಶಲಕ್ಷಣ ವೃತ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂದಿರದ ಆವರಣದಲ್ಲಿ ವಿವಿಧ ರೀತಿಯ ಚಟುವಟಿಕೆಗಳಿಗೆ ಪೂರಕವಾಗುವ ಸುಮಾರು 15-20 ಲಕ್ಷ ವೆಚ್ಚದ ಸಮುದಾಯ ಭವನವನ್ನು ಶೀಘ್ರವೇ ಮಂಜೂರಾತಿ ಮಾಡಲಾಗುವುದು ಎಂದರು. ಮೂಲಭೂತ ಸೌಲಭ್ಯಗಳು ಸೇರಿದಂತೆ ಕ್ಷೇತ್ರದ ಜನರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಕೋಟ್ಯಂತರ...

ಮರಾಠಿ ಸಮಾವೇಶಕ್ಕೆ ನಿಷೇಧಕ್ಕೆ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ

ಚಿಕ್ಕೌಡಿ:18: ಬೆಳಗಾವಿಯಲ್ಲಿ ಎಂ.ಇ.ಎಸ್. ನಡೆಸಲು ಉದ್ದೇಶಿಸಿರುವ ಮರಾಠಿ ಸಮಾವೇಶಕ್ಕೆ ನಿಷೇಧ ಹೇರಬೇಕೆಂದು ಪಟ್ಟಣದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಪ್ರೀಯಂಕಾ ಮೇರಿ ಫ್ರಾನ್ಸಿಸ್ ಅವರಿಗೆ ಮನವಿ ಸಲ್ಲಿಸಿದರು. ನೇತೃತ್ವ ವಹಿಸಿದ್ದ ಕರವೇ ತಾಲೂಕು ಘಟಕದ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ಬೆಳಗಾವಿಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರು ಅನ್ಯೂನ್ಯವಾಗಿದ್ದು ಯಾವುದೇ ಭೇದ ಭಾವವಿಲ್ಲದೇ ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಕರ್ನಾಟಕ ವಿರೋಧಿ ನೀತಿ ಅನುಸರಿಸುತ್ತಿರುವ ಎಂ.ಇ.ಎಸ್. ಪದೆ ಪದೇ ಗಡಿ ವಿಷಯ ಮುಂದಿಟ್ಟುಕೊಂಡು ಚುನಾವಣೆ ಸಮೀಪ ಬಂದಾಗ ಮಾತ್ರ ಈ ರೀತಿ...

ಎಲ್ಲ ಶರಣರಿಗೆ ಬಸವಣ್ಣನವರು ಮಾರ್ಗದರ್ಶಕರು – ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು

ಯಮಕನಮರಡಿ: ಬಸವ ಪುರಾಣ ಶ್ರೇಷ್ಟವಾದುದು ಅದರಲ್ಲಿ ಬರುವ ಎಲ್ಲ ಶರಣರ ಜೀವನವು ನಮಗೆಲ್ಲ ಮಾದರಿಯಾಗಿದೆ ನಾವು ಕೂಡ ಅವರಂತೆ ಆಧ್ಯತ್ಮಿಕ ಜೀವನ ನಡೆಸಬೇಕು ಸಂಸಾರದಲ್ಲಿದ್ದು ಆಧ್ಯಾತ್ಮಿಕ ಸುಖವನ್ನು ಕಂಡವರು ನಮ್ಮ ಶರಣರು. ಈ ಎಲ್ಲ ಶರಣರಿಗೆ ಬಸವಣ್ಣನವರು ಮಾರ್ಗದರ್ಶಕರಾಗಿದ್ದರು ಎಂದು ಯಕ್ಕುಂಡಿ ಕುಮಾರೇಶ್ವರ ಸಂಸ್ಥಾನಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಮಾತನಾಡಿದರು. ಅವರು ರವಿವಾರ ದಿ 13 ರಂದು ಯಮಕನಮರಡಿ ಸುಕೇತ್ರ ಹುಣಸಿಕೊಳ್ಳಮಠದಲ್ಲಿ ಜರುಗಿದ ಬಸವ ಪುರಾಣ ಮುಕ್ತಾಯ ಸಮಾರಂಬದಲ್ಲಿ ಮಾತನಾಡಿದರು. ಮಠಾಧೀಶರಾದ ಯಮಕನಮರಡಿ ಹುಣಸಿಕೊಳ್ಳಮಠದ ಶ್ರೀ ರಾಚೋಟಿ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮನುಷ್ಯನು ಜೀವನದಲ್ಲಿ...

ಸಾರ್ವಜನಿಕ ಶೌಚಾಲಯ ಶುಚಿಗೊಳಿಸಿದ ಮಹಿಳೆಯರು

ಕನ್ನಡಮ್ಮ ಸುದ್ದಿ ಚಿಕ್ಕೋಡಿ 24: ಸದಲಗಾ ಪಟ್ಟಣದ ಅಂಬೇಡ್ಕರ ನಗರದಲ್ಲಿರುವ ಮಹಿಳೆಯರು ಸಾರ್ವಜನಿಕ ಶೌಚಾಲಯ ಸ್ವಚ್ಛ ಮಾಡುವ ಮೂಲಕ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು. ಮಹಿಳೆಯರು ಸ್ವಯಂ ಪ್ರೇರಣೆಯಿಂದ ಸಾರ್ವಜನಿಕ ಶೌಚಾಲಯ ಸ್ವಚ್ಛ ಮಾಡಿ ಮಳೆಗಾಲದಲ್ಲಿ ಶೌಚಾಲಯಗಳು ಗಬ್ಬು ವಾಸನೆ ಹರಡುವುದು ಮತ್ತು ರೋಗ ರುಜಿನುಗಳು ಹರಡುವುದರಿಂದ ಕಾಯಿಲೆಗೆ ತುತ್ತಾಗುವ ಸಂಭವ ಇರುತ್ತದೆ. ಅದಕ್ಕಾಗಿ ಮಹಿಳೆಯರು ಒಗ್ಗಟ್ಟಿನಿಂದ ಒಂದುಗೂಡಿ ಸಾರ್ವಜನಿಕ ಶೌಚಾಲಯ ತಮ್ಮ ಮನೆಯ ಸ್ವಂತ ಶೌಚಾಲಯ ಅಂತಾ ತಿಳಿದು ಸ್ವಚ್ಛ ಮಾಡಿದರು. ಸ್ವಚ್ಚತೆಯಲ್ಲಿ ಪಾಲ್ಗೊಂಡ ಮಹಿಳೆಯರು...

ಅನುರಾಧಾ ಪೂಜಾರ ಅವರಿಗೆ ಪ್ರಶಸ್ತಿ

ಬೆಳಗಾವಿ, ಡಿ.17 : ಪ್ರಸಕ್ತ ಸಾಲಿನ ಶ್ರೀಮತಿ ಸುಮನ ಹುದಲಿ ಸ್ಮಾರಕ ದತ್ತಿನಿಧಿ ಪ್ರಶಸ್ತಿಯನ್ನು  ಅನುರಾಧಾ ರಾಘವೇಂದ್ರ ಪೂಜಾರ ಅವರಿಗೆ ಲಭಿಸಿದೆ. ಇವರು ಬುದ್ದಿಮಾಂದ್ಯ ಮಕ್ಕಳ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು  ಡಿ 25 ರಂದು ಹಿಂದವಾಡಿಯ ಐಎಂಇಆರ್ ಸಭಾಭವನದಲ್ಲಿ ಬೆಳಿಗ್ಗೆ 10 ಗಂಟೆ ನೀಡಲಾಗುವುದೆಂದು ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ಕಾರ್ಯದರ್ಶಿ ಶೀರೀಷ ಜೋಶಿ ತಿಳಿಸಿದ್ದಾರೆ

ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದಿರಲಿ: ಪ್ರಕಾಶ

ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದಿರಲಿ: ಪ್ರಕಾಶ ಕನ್ನಡಮ್ಮ ಸುದ್ದಿ-ಮುಗಳಖೋಡ: ಇಂದಿನ ವಿದ್ಯಾರ್ಥಿಗಳು ಕೇವಲ ಅಂಕಗಳಿಸುವತ್ತ ಗಮನಹರಿಸುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಮಾಸಿಕ ಒತ್ತಡ ಹೆಚ್ಚಾಗುತ್ತಿವೆ. ಇಂದು ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗಿರದೇ ಆಟೋಟಗಳಿಗೆ ಕೂಡಾ ಆದ್ಯತೆಯನ್ನು ನೀಡಿದರೆ ಮಕ್ಕಳ ಬೆಳವಣಿಗೆ ಸಮೃದ್ದಿಯಿಂದ ಕೂಡಿರುತ್ತದೆ. ಆಟಗಳನ್ನು ಆಟುವದರ ಮೂಲಕ ದೇಹವನ್ನು ಸಧೃಢಗೋಳಿಸಿಕೊಳ್ಳಬಹುದು. ನಮ್ಮ ಆರೋಗ್ಯವನ್ನು ಉತ್ತಮ ಪಡಿಸಿಕೊಳ್ಳಬಹುದೆಂದು ಹೇಳುವುದರೊಂದಿಗೆ ಹಾಕಿ ಮಾಂತ್ರಿಕ ಧ್ಯಾನಚಂದ ಒಬ್ಬ ವಿಶ್ವ ಶ್ರೆÃಷ್ಠ ಆಟಗಾರ. ಅವರ ತಮ್ಮ ಆಟದ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೋಳಿಸಿ ತಮ್ಮ ವಿಶ್ವಶ್ರೆÃಷ್ಠ ವ್ಯಕ್ತಿತ್ವವನ್ನು ಪರಿಚಯಿಸಿದರೆಂದು ಪ್ರೊÃ. ಪ್ರಕಾಶ...

ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಬೆಳಗಾವಿ 29: ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಜುಲೈ 29 ರಂದು ಬೆಳಗಾವಿಗೆ ಆಗಮಿಸಿ, ಗೋಕಾಕದಲ್ಲಿ ವಾಸ್ತವ್ಯ ಮಾಡುವರು. ಜುಲೈ 30 ಹಾಗೂ 31 ರಂದು ಗೋಕಾಕ ತಾಲೂಕಿನ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಅಗಸ್ಟ 1 ರಂದು ಬೆಳಿಗ್ಗೆ 10-30 ಗಂಟೆಗೆ ಪರಿವೀಕ್ಷಣಾ ಮಂದಿರದಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ, 12-30 ಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಹಾಗೂ ಮಧ್ಯಾಹ್ನ 3 ಗಂಟೆಗೆ ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸುವರು. ಮಂಗಳವಾರ, ಆಗಸ್ಟ 2 ರಂದು ಗೋಕಾಕ ತಾಲೂಕಿನ...
loading...