ಬೆಳಗಾವಿ

Belgaum city and district news

ಪುರಸಭೆ ಉಪಾಧ್ಯಕ್ಷ ಆಕಾಂಕ್ಷಿ ಅಸಮಾಧಾನ

ಬೈಲಹೊಂಗಲ 20: ಪಟ್ಟಣದ ಪುರಸಭೆಯ ಉಪಾಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿದ್ದ 18 ನೇ ವಾರ್ಡಿನ ಕಾಂಗ್ರೇಸ್ ಸದಸ್ಯ ನಿಸ್ಸಾರಅಹ್ಮದ ತಿಗಡಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾದ ಘಟಣೆ ತಡವಾಗಿ ಬೆಳಕಿಗೆ ಬಂದಿದೆ. ಪುರಸಭೆ ಸಾಮಾನ್ಯ ಮೀಸಲಾತಿ ಹೊಂದಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು. ಸ್ಥಾನ ಸಿಗದ ಕಾರಣ ಅಸಮಾಧಾನಗೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾದಾಗ ಹಿರಿಯ ಸದಸ್ಯರೋರ್ವರು ಅವರಿಗೆ ತಿಳಿಹೇಳಿ ರಾಜೀನಾಮೆ ಪತ್ರವನ್ನು ತಡೆಹಿಡಿದಿದ್ದಾರೆ ಎನ್ನಲಾಗಿದೆ. 14 ನೇ ವಾರ್ಡಿನ ಬಿಜೆಪಿಯ ಸದಸ್ಯ ಬಾಬು ಹರಕುಣಿ ಅವರೂ ಸಹ ರಾಜೀನಾಮೆ ಸಲ್ಲಿಸಿದ್ದಾರೆಂದು ತಿಳಿದು ಬಂದಿದ್ದು...

ಮಾಜಿ ಸೈನಿಕರ ಗಮನಕ್ಕೆ

ಬೆಳಗಾವಿ: ಅಕ್ಟೌಬರ್:24: ರಕ್ಷಣಾ ಮಂತ್ರಾಲಯ ಕೇಂದ್ರ ಸೈನಿಕ ಕಾರ್ಯಾಲಯ ಹೊಸ ದೆಹಲಿ ಇವರ ವತಿಯಿಂದ ಮಾನ್ಯ ಪ್ರಧಾನ ಮಂತ್ರಿಗಳ ಶಿಷ್ಯವೇತನ ಯೋಜನೆಯಡಿಯಲ್ಲಿ 2010-11 ನೇ ಸಾಲಿನ ಹಾಗೂ ಅದಕ್ಕಿಂತ ಪೂರ್ವದಲ್ಲಿ ಮಂಜೂರಾದ ಪ್ರಧಾನ ಮಂತ್ರಿಗಳ ಶಿಷ್ಯವೇತನ ನವೀಕರಣದ ಅರ್ಜಿಗಳನ್ನು ಸಲ್ಲಿಸಲು ಮಾಜಿ ಸೈನಿಕರಿಗೆ ತಿಳಿಸಲಾಗಿದೆ. ಆದ್ದರಿಂದ ಈ ಶಿಷ್ಯವೇತನಕ್ಕೆ ಸಂಬಂಧಿಸಿದ ಬೆಳಗಾವಿ ಜಿಲ್ಲೆಯ ಮಾಜಿ ಸೈನಿಕರು ನವೀಕರಣ ಅರ್ಜಿಗಳನ್ನು ಅಂತರ್ಜಾಲದ ತಿತಿತಿ.ಟಠ.ಟಿಛಿ.ಟಿ ವಿಳಾಸದ ಮುಖಾಂತರ ಪಡೆದುಕೊಂಡು ಸಂಬಂಧಿಸಿದ ಅಡಕಗಳೊಂದಿಗೆ ಅಕ್ಟೌಬರ್ 31 ರೊಳಗಾಗಿ ಬೆಳಗಾವಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರನ್ನು...

ಜಲಾಶಯಗಳ ನೀರು ಕುಡಿಯಲು ಮಾತ್ರ

ಬೆಳಗಾವಿ 28-ರಾಜ್ಯ ಕಳೆದರಡು ವರ್ಷಗಳಿಂದ ತೀವ್ರ ಬರಪರಿಸ್ಥಿತಿ ಎದುರಿಸುತ್ತಿದ್ದು, ಕುಡಿಯುವ ನೀರಿನ ಅಭಾವ ಹಾಗೂ ಮೇವಿನ ಕೊರತೆ ಉಲ್ಬಣಗೊಂಡಿದ್ದು, ಜನ-ಜಾನುವಾರುಗಳು ಸಾಕಷ್ಟು ಸಂಕಷ್ಟದಲ್ಲಿ ಸಿಲುಕಿವೆ. ಈ ಹಿನ್ನಲೆಯಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಜಲಾಶಯಗಳ ನೀರಿನ ಮಟ್ಟ ಕುಸಿಯುತ್ತಿರುವ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಫೆಬ್ರುವರಿ 15 ರಿಂದ ಜಲಾಶದಲ್ಲಿನ / ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರನ್ನು ಕೃಷಿ ಬೆಳೆಗಳಿಗೆ ನೀರನ್ನು ಉಪಯೋಗಿಸುವುದನ್ನು ನಿಷೇಧಿಸಿದೆ. ಕೇವಲ ಕುಡಿಯುವ ನೀರಿಗಾಗಿ ಮಾತ್ರ ಬಳಸಲು ಜಿಲ್ಲಾಡಳಿತಕ್ಕೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ಫೆ 15 ರಿಂದ ಜಲಾಶಯಗಳಿಂದ ಬಿಡುಗಡೆಗೊಳಿಸುವ ನೀರನ್ನು ಕೇವಲ ಕುಡಿಯುವ...

ಮತದಾರರಲ್ಲಿ ಜಾಗೃತಿ ಅವಶ್ಯ

ಪಾಲಭಾಂವಿ 25- ಭಾರತ ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶವಾಗಿದೆ. ಇಲ್ಲಿ ವಾಸಿಸುವ ಪ್ರತಿಯೊಬ್ಬರು ಮತದಾನದ ಹಕ್ಕನ್ನು ಪಡೆದಿರುತ್ತಾರೆ. ಮತದಾನ ಚಲಾವಣೆಯಿಂದ ದೇಶದಲ್ಲಿ ಉತ್ತಮ ನಾಯಕರನ್ನು ಗುರುತಿಸಲು ಸಾಧ್ಯವಾಗುತ್ತದೆ. ಮತದಾರರು ಜಾಗೃತರಾಗಿ ಮತ ಚಲಾಯಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆಯೆಂದು ಹಂದಿಗುಂದ ಗ್ರಾಪಂ. ಅಭಿವೃದ್ದಿ ಅಧಿಕಾರಿ ಬಿ.ವ್ಹಿ. ಮಸಾಲಜಿ ಹೇಳಿದರು. ಅವರು ಸಮೀಪದ ಹಂದಿಗುಂದ ಗ್ರಾಮ ಪಂಚಾಯತಿ ಆವರಣದಲ್ಲಿ ಆಯೋಜಿಸಿದ ಸ್ವೀಪ್ ಕ್ರೀಯಾ ಯೋಜನೆಯಿಂದ ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರನ್ನು ಉದ್ದೇಶಿಸಿ ಮಾತನಾಡಿದರು. ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಪ್ರದಾನ ಗುರು...

ಜಿಲ್ಲೆಯಲ್ಲಿ ಉದರದರ್ಶಕ ಸಂತಾನಹರಣ ಶಸ್ತ್ತ್ರ ಚಿಕಿತ್ಸಾ ಶಿಬಿರಗಳು

ಬೆಳಗಾವಿ 9: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ಜುಲೈ ತಿಂಗಳ ಈ ಕೆಳಕಂಡ ಆರೋಗ್ಯ ಕೇಂದ್ರಗಳಲ್ಲಿ ಉದರದರ್ಶಕ ಸಂತಾನಹರಣ ಶಸ್ತ್ತ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ. ಜುಲೈ 12 ರಂದು ಬೆಳಗಾವಿ ಕ್ಯಾಂಟೋನ್ಮೆಂಟ್ನಲ್ಲಿ, ಹಿರೇಬಾಗೇವಾಡಿ, ಬೆಳಗಾವಿ, ಜುಲೈ 13 ರಂದು ಹುಕ್ಕೇರಿ, ಜುಲೈ 16 ರಂದು ಕಾಗವಾಡದಲ್ಲಿ, ಜುಲೈ 17 ರಂದು ಬೆಳಗಾವಿ ಕ್ಯಾಂಟೋನ್ಮೆಂಟ್ನಲ್ಲಿ, ನಿಡಸೋಸಿ, ಯರಗಟ್ಟಿ, ಮುನವಳ್ಳಿ, ಕಕ್ಕೇರಿ, ಜುಲೈ 18 ರಂದು ಸಂಕೇಶ್ವರ, ಬೈಲಹೊಂಗಲ, ನೇಗಿನಹಾಳ,...

ಇಂದು ಸಾಹಿತ್ಯ ದಸರಾ ಉತ್ಸವ

(ಹುಕ್ಕೇರಿ ಕಾರ್ಯಾಲಯದಿಂದ) ಹುಕ್ಕೇರಿ 7: ಪ್ರತಿ ವರ್ಷದಂತೆ ಈ ವರ್ಷವೂ ಇಲ್ಲಿಯ ಶ್ರೀ ಗುರುಶಾಂತೇಶ್ವರ ಹಿರೇಮಠದಲ್ಲಿ ನಾಳೆ ದಿನಾಂಕ 8 ಅಕ್ಟೌಬರ ರಂದು 3 ನೇ ದಿನದ ಕಾರ್ಯಕ್ರಮ ಮಠಾಧ್ಯಕ್ಷ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಸಾಹಿತ್ಯ ದಸರಾ ಉತ್ಸವ ನಡೆಯಲಿದೆ. ನಾಳೆ ಮಂಗಳವಾರದಂದು ನಿಡಸೋಸಿ ಸಿದ್ದ ಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮಿಗಳ ಸಾನಿಧ್ಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕದ ಸಹಯೋಗದಲ್ಲಿ ನಡೆಲಿರುವ ಸಾಹಿತ್ಯ ದಸರಾ ಉತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಪೋಲಿಸ ವರಿಷ್ಟಾಧಿಕಾರಿ ಡಾ. ಚಂದ್ರಗುಪ್ತ, ವಿಧಾನ ಪರಿಷತ್ ಸದಸ್ಯ ಮಹಾಂತೇಶ...

ಬೆಲ್ಲದ ಬಾಗೇವಾಡಿ ಗ್ರಾಮದೇವಿಯ ಸಂಭ್ರಮದ ಜಾತ್ರೆ

(ಹುಕ್ಕೇರಿ ಕಾರ್ಯಾಲಯದಿಂದ) ಹುಕ್ಕೇರಿ 8 : ಪ್ರತಿ 5 ವರ್ಷಗಳಿಗೊಮ್ಮೆ ಜರುಗುವ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಗ್ರಾಮ ದೇವತೆ ದ್ಯಾಮವ್ವನ ಜಾತ್ರಾ ಮಹೋತ್ಸವ ಇತ್ತೀಚೆಗೆ ಮೂರು ದಿನಗಳ ವರೆಗೆ ಸಂಭ್ರಮ, ಸಡಗರ ಹಾಗೂ ಸಾವಿರಾರು ಜನರ ಸಾಕ್ಷಿಯಾಗಿ ಅದ್ದೂರಿಯಾಗಿ ಜರುಗಿತು. ಜಾತ್ರೆಯ ಮುನಾ ದಿನ ರಾತ್ರ್ನಿ ದೇವಿಯನ್ನು ಯಮಕನಮರ್ಡಿಯ ಕುಂಬಾರ ಮನೆಯಿಂದ ತಂದ ನಂತರ ಗ್ರಾಮದ ಹಿರಿಯರು ಹಾಗೂ ಮುತೈದೆಯರು ಗ್ರಾಮದ ಅಗಸಿ ಬಾಗಿಲಿನ ಹತ್ತಿರ ಆರತಿ ಬೆಳಗಿ ಸ್ವಾಗತಿಸಿದರು. ಇಡೀ ರಾತ್ರಿ ವಾದ್ಯ, ಬಂಢಾರ ಎರಚುವದರೊಂದಿಗೆ ದೇವಿಯ ಹೊನ್ನಾಟ ನಡೆಯಿತು. ನಂತರ...

ಬೆಳಗಾವಿ ಪಾಲಿಕೆಯಿಂದ ಒಂದೇ ದಿನಕ್ಕೆ 45 ಲಕ್ಷ ತೆರಿಗೆ ಸಂಗ್ರಹಣೆ

ಬೆಳಗಾವಿ 20: ನಗರದಲ್ಲಿ ಸುಮಾರು ವರ್ಷಗಳಿಂದ ಮಹಾನಗರ ಪಾಲಿಕೆಗೆ ಆಸ್ತಿ ತೆರಿಗೆ ಕಟ್ಟದ ಮಾಲಿಕರಿಂದ ಪಾಲಿಕೆ ಅಧಿಕಾರಿಗಳು ಒಂದೇ ದಿನಕ್ಕೆ ಒಟ್ಟು 45 ಲಕ್ಷ ರೂ.ಗಳ ತೆರಿಗೆ ಹಣವನ್ನು ತುಂಬಿಸಿಕೊಂಡಿದ್ದಾರೆ. ಬುಧವಾರ ಮಹಾರ ಪಾಲಿಕೆಯ ಆಯುಕ್ತ ಜಿ. ಪ್ರಭು ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ ಅಧಿಕಾರಿಗಳು ಬೆಳಿಗ್ಗೆ ಆರ್‍ಪಿಡಿ ವೃತ್ತದಲ್ಲಿರುವ ಬಿಗ್ ಬಜಾರ್‍ಗೆ ದಾಳಿ ನಡೆಸಿ ಒಟ್ಟು 19 ಲಕ್ಷ ರೂ,ಗಳ ತೆರಿಗೆಯನ್ನು ವಸೂಲಿ ಮಾಡಿದ್ದಾರೆ. ಖಾನಾಪುರ ರಸ್ತೆಯಲ್ಲಿರುವ ಕಿರಾಣಿ ಅಂಗಡಿಯ ಮಾಲಿಕರು ಇಲ್ಲದ ಕಾರಣ ಅದನ್ನು ಸೀಜ್ ಮಾಡಿದ್ದಾರೆ. ಲೇಕವಿ ಆಸ್ಪತ್ರೆಯಿಂದ 7 ಲಕ್ಷ 71...

ಇಂದು ಲೋಕೇಶ ಬೆಳಗಾವಿಗೆ

ಬೆಳಗಾವಿ : 10ಕರ್ನಾಟಕ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಉಪಾಧ್ಯಕ್ಷ ಪಿ. ಲೋಕೇಶ ರವಿವಾರದಂದು  ಬೆಳಗಾವಿಗೆ ಬೇಟಿ ನೀಡಲಿದ್ದಾರೆ. ಜನೆವರಿ 27 ರಂದು ಬೆಂಗಳೂರಿನಲ್ಲಿ  ಜರುಗುವ ಅತಿಥಿ ಉಪನ್ಯಾಸಕರ ಅನಿರ್ಧಿಷ್ಟ ಅವಧಿ ಮುಷ್ಕರ ಕುರಿತು ಜಿಲ್ಲೆಯ ಅತಿಥಿ ಮುಖಂಡರ ಜೊತೆ ಚರ್ಚಿಸಲಿದ್ದಾರೆ. ಕಾರಣ ದಿನಾಂಕ 12/01/2014 ರಂದು ಜಿಲ್ಲೆಯ ಎಲ್ಲ ತಾಲೂಕಿನ ಮುಖಂಡರು ಉಪಸ್ಥಿತರಿರಬೇಕೆಂದು ಜಿಲ್ಲಾ ಅತಿಥಿ ಉಪನ್ಯಾಸಕರ ಕಾರ್ಯಾಧ್ಯಕ್ಷ ರಾಜು ಕಂಬಾರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ

ಮನಸ್ಸು, ಶರೀರ ಒಂದುಗೂಡಿ ಮಾಡಿರುವ ಯೋಗ ಕಾಯಿಲೆ ದೂರಮಾಡುತ್ತದೆ:ಸೋಮಶೇಖರ ಪಾಟೀಲ

ಕಾಗವಾಡ,26: ಮಹಿಳೆಯರು ತಮ್ಮ ಆರೋಗ್ಯ ಕಾಪಾಡಲು ದಿನನಿತ್ಯ ಯೋಗಾಭ್ಯಾಸ ಮಾಡುವುದು ಅಗತ್ಯ, ಮನಸ್ಸು ಮತ್ತು ಶರೀರ ಒಂದುಗೂಡಿ ಮಾಡಿರುವ ಯೋಗದಿಂದ ಅನೇಕ ಕಾಯಿಲೆಗಳು ದೂರಾಗಲು ಸಾಧ್ಯ. 5 ದಶಕದ ಹಿಂದೆ ಹಿರಿಯರು (ಮಹಿಳೆಯರು) ದಿನನಿತ್ಯದ ಕಾರ್ಯಗಳು ಮನಸ್ಸು ಮತ್ತು ಶರೀರ ಒಂದೂಗೂಡಿಸಿ ಮಾಡುತ್ತಿರುವ ಕಷ್ಟಕರಿ ಕೆಲಸಗಳಿಂದ ಕಾಯಿಲೆಗಳು ಅವರ ಬಿಟ್ಟು ದೂರ ಇದ್ದವು ಎಂದು ಮಿರಜದ ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ. ಸೋಮಶೇಖರ ಪಾಟೀಲ ಉಗಾರದಲ್ಲಿ ಹೇಳಿದರು. ಉಗಾರ ಖುರ್ದ ಗ್ರಾಮದ ಪತಂಜಲಿ ಯೋಗ ಜಾಗೃತಿ ವೇದಿಕೆ, ಶ್ರೀ ಗುರುದೇವ ಆಶ್ರಮ ಇವರ...
loading...