Tag Archives: reddy

ಸಂಪುಟದ ಸಭೆಯಿಂದ ರೆಡ್ಡಿ ಶ್ರೀರಾಮಲು ನಿರ್ಗಮನ

ಬೆಂಗಳೂರು,11- ಬಿಕ್ಕಟ್ಟು ಶಮನದ  ನಂತರ ಸುಮಾರು ಅರ್ಧ ತಿಂಗಳ ಮೇಲೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಮತ್ತೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಭಿನ್ನಮತೀಯ ಸಚಿವರಾದ  ಜನಾರ್ಧನ ರೆಡ್ಡಿ, ಶ್ರೀ ರಾಮಲು, ನಡುವೆ ಬಿರುಸಿನ ಮಾತಿನ ಚಕಮಕಿ ನಡೆದು ಸಂಪುಟದ ಸಭೆಯಿಂದ ಅರ್ಧದಲ್ಲಿಯೇ ಉಭಯ ಸಚಿವರು ಹೊರ ನಡೆದಿರುವುದರಿಂದ ಬಿಕ್ಕಟ್ಟು ಪೂರ್ಣ  ಪ್ರಮಾಣದಲ್ಲಿ ಶಮನ ಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ.     ಮಧ್ಯಾಹ್ನ 3-15 ಕ್ಕೆ ಸಂಪುಟದ ಸಭೆ  ಆರಂಭವಾದ ನಂತರ ಭಿನ್ನಮತೀಯ ಸಚಿವರು  ಆರೋಗ್ಯ ಇಲಾಖೆಯ  ಕಾರ್ಯದರ್ಶಿ ಪೆರುಮಾಳು [...]

Leave a comment Continue Reading →

ಸರಿಯದ ಕಾರ್ಮೌಡ, ಸುರಿಯದ ಮಳೆ…!

ಬೆಂಗಳೂರು 29- ಪಟ್ಟು ಪ್ರತಿಪಟ್ಟುಗಳ ವರಸೆಯಿಂದ ಭಾಜಪದಲ್ಲಿ ರಾಜಕೀಯ ಸಂಘರ್ಷ ತಾರಕಕ್ಕೆ ಏರಿದೆ. ಬಲಾಬಲ ಪರೀಕ್ಷೆಗೆ ಎರಡೂ ಬಣಗಳು ಅಗತ್ಯ ಭೂಮಿಕೆ ಸಿದ್ಧಪಡಿಸಿಕೊಳ್ಳಲು ಮುಂದಾಗಿವೆ. ಈ ಮಧ್ಯೆ ವಿಧಾನಸಭಾ ಅಧ್ಯಕ್ಷ ಜಗದೀಶ ಶೆಟ್ಟರ್ ಅವರನ್ನು ಅನೇಕ ಶಾಸಕರು ಭೆಟ್ಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಕೆರಳಿಸಿದೆ. ಯಾವುದೆ ಒತ್ತಡಕ್ಕೆ ಬಗ್ಗುವುದಿಲ್ಲ, ಜಗ್ಗುವುದಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಬಳ್ಳಾರಿ ಸಚಿವರು ಹಾಗೂ ಅವರ ಬೆಂಬಲಿಗ ಸಚಿವರನ್ನು ಸಂಪುಟದಿಂದ ಕೈಬಿಡುವ ಇಂಗಿತವನ್ನು [...]

Leave a comment Continue Reading →

ಯಡ್ಡಿಯಿಂದ ಬಳ್ಳಾರಿಗೆ ಬ್ರೇಕ್

ಬೆಂಗಳೂರು, 28-ಬಳ್ಳಾರಿ ಗಣಿದೊರೆಗಳ ಹಾಗೂ ಮುಖ್ಯ ಮಂತ್ರಿಗಳ ನಡುವಿನ ಭಿನ್ನಾಬಿಪ್ರಾಯ ತಾರಕಕ್ಕೆ ಏರಿದ್ದು  ಹೋರಿ ಕಾಳಗದಲ್ಲಿ ಹಿರಿಯ ಅಧಿ ಕಾರಿಗಳು ಬಲಿ ಪಶು ಆಗಿದ್ದಾರೆ.           ಬಳ್ಳಾರಿ ಜಿಲ್ಲೆಯ ಪೋಲಿಸ ವರಿಷ್ಠಾಧಿಕಾರಿ ಜಿಲ್ಲಾಧಿಕಾರಿ ಮುಖ್ಯ ಸರಣ್ಯ ಸಂರಕ್ಷಣಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನು ಮುಖ್ಯ ಮಂತ್ರಿಗಳು ಎತ್ತಂಗಡಿ ಮಾಡಿ ಆದೇಶ ನೀಡಿರುವ ಮುಖ್ಯ ಮಂತ್ರಿಗಳು ಈ ವರೆಗೆ ಈ ಅಧಿಕಾರಿಗಳಿಗೆ  ಬೇರೆ ಸ್ಥಳಗಳನ್ನು ನಿಗಧಿ ಪಡಿಸಿಲ್ಲ. ಈ ಅಧಿಖಾರಿಗಳು ರೆಡ್ಡಿ ಸಹೋದರರು  ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. [...]

Leave a comment Continue Reading →