ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ

0
16

ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ
ಬೆಳಗಾವಿ: ಅಂಗನವಾಡಿ ಕಾರ್ಯಕರ್ತೆಯರನ್ನು ೨ ಲಕ್ಷ ರೂ. ನೀಡುವಂತೆ ಬ್ಯಾಕ್‌ಮೇಲ್ ಮಾಡಿ ಸಿಕ್ಕಿಬಿದ್ದಿರುವ ಐವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಸಮಿತಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರದ ಅಂಬೇಡ್ಕರ್ ಉದ್ಯಾನವನದಿಂದ ಜಿಲ್ಲಾಧಿಕಾರಿ ಕಚೇರಿ ಆವರಣವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಹಲಗಾ ಗ್ರಾಮದ ೭ ಅಂಗನವಾಡಿ ಕೇಂದ್ರಗಳಿಗೆ ರಾಷ್ಟಿçÃಯ ಮಾನವ ಹಕ್ಕುಗಳ ಆಯೋಗದವರೆಂದು ಹೇಳಿಕೊಂಡು ಐವರು ಪರಿಶೀಲನೆ ನಡೆಸಿದರು. ಸರಿಯಾಗಿ ಮಕ್ಕಳಿಗೆ ಆಹಾರ ನೀಡುತ್ತಿಲ್ಲö. ನಿಮ್ಮನ್ನು ಸೇವೆಯಿಂದ ವಜಾ ಮಾಡಲಾಗುವುದು ಎಂದು ಹೆದರಿಸಿದ್ದಾರೆ. ಜತೆಗೆ ೨ ಲಕ್ಷ ರೂ. ನೀಡುವಂತೆ ಬ್ಯಾಕ್‌ಮೇಲ್ ಮಾಡಿದ್ದಾರೆ.
ಹಲಗಾ ಗ್ರಾಮಸ್ಥರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಅನುಮಾನಗೊಂಡು ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ವಂಚಕರು ಎಂದು ಗೊತ್ತಾಗುತ್ತಿದಂತೆ ಪೆÇಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೆÇಲೀಸರು ಐವರನ್ನು ಬಂಧಿಸಿದ್ದಾರೆ. ಆದ್ದರಿಂದ ಈ ರೀತಿ ಸುಳ್ಳು ಹೇಳಿ ವಂಚಿಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ನಗರದ ಜಿಲ್ಲಾಧಿಕಾರಿ ಕಚೇರಿ ಆಗಮಿಸುತ್ತಿದ್ದ ನೂತನ ಸಚಿವ ಲಕ್ಷ÷್ಮಣ ಸವದಿ ಅವರು ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರನ್ನು ಕಂಡು ಕಾರಿನಿಂದ ಕೆಳಗೆ ಇಳಿದು ಅವರ ಬಳಿಗೆ ತೆರಳಿಸಿದರು. ಕಾರ್ಯಕರ್ತೆಯರನ್ನು ಬ್ಯಾಕ್‌ಮೇಲ್ ಮಾಡುತ್ತಿರುವ ಬಗ್ಗೆ ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಲಕ್ಷ÷್ಮಣ ಸವದಿ, ವಂಚಕರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.
ಸಮಿತಿ ಅಧ್ಯಕ್ಷೆ ಮಂದಾ ನೇವಗಿ, ಕಮಲ ಮೇಳಕೆ, ಸುಶೀಲಾ ಕುಟಾರೆ, ಜೆ.ಎಂ. ಜೈನೆಖಾನ್, ಜಿ.ವಿ. ಕುಲಕರ್ಣಿ, ಸಂಧ್ಯಾ ಕುಲಕರ್ಣಿ ಮೊದಲಾದವರು ಇದ್ದರು.

loading...