ಅಂಗನವಾಡಿ, ದೇವಸ್ಥಾನದಲ್ಲಿದವರಿಗೆ ಎರಡು ದಿನದಲ್ಲಿ ಸೂಕ್ತ ಸೌಲಭ್ಯ: ಡಿಸಿ

0
16

ಪ್ರವಾಹಭಾದಿತ ಕುಟುಂಬಗಳಿಗೆ ರೂ. ೧೧೫ ಕೋಟಿ ಪರಿಹಾರ ಬಿಡುಗಡೆ
ಅಂಗನವಾಡಿ, ದೇವಸ್ಥಾನದಲ್ಲಿದವರಿಗೆ ಎರಡು ದಿನದಲ್ಲಿ ಸೂಕ್ತ ಸೌಲಭ್ಯ: ಡಿಸಿ
ಬೆಳಗಾವಿ: ಅಂಗನವಾಡಿ, ದೇವಸ್ಥಾನದಲ್ಲಿ ತಂಗಿದ್ದ, ಪ್ರವಾಹಭಾದಿತ ಕುಟುಂಬಗಳಿಗೆ ಎರಡು ದಿನಗಳಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಲಾಗುವುದು. ಅದಕ್ಕಾಗಿ, ರಾಜ್ಯದಿಂದ ರೂ. ೧೧೫ ಕೋಟಿ ಪರಿಹಾರ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್ ಬಿ ಬೋಮ್ಮನಹಳ್ಳಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಅಂಗನವಾಡಿ ಹಾಗೂ ಪ್ರತಿಯೊಂದು ಶಾಲಾ ಕೊಠಡಿಗೆ ಐದು ಲಕ್ಷ ಪರಿಹಾರ ನೀಡಲಾಗುವುದು.
ಜಿಲ್ಲೆಯ ೫೦ ಸಾವಿರ ಮನೆಗಳ ಪೈಕಿ ೩೪ ಸಾವಿರ ಮನೆಗಳಿಗೆ ಪರಿಹಾರ ಕಲ್ಪಿಸಲಾಗಿದೆ. ಒಟ್ಟು ೧೧೫ ಕೋಟಿ ಹಣ ಸಂದಾಯವಾಗಿದೆ.
ಒಟ್ಟಾಗಿ ಸಮೀಕ್ಷೆಯಲ್ಲಿ ೨.೨೧ ಲಕ್ಷ ಕೃಷಿ ಭೂಮಿಯಲ್ಲಿನ ಬೆಳೆ ಹಾನಿಯಾಗಿದೆ. ಜತಗೆ೧೬೭ ಕೋಟಿ ಅನುದಾನ ಪಡೆಯಲಾಗಿದೆ. ತಾತ್ಕಾಲಿಕ ಶೆಡ್ ನಿರ್ಮಾಣವದರಿಗೆ ೫೦ ಸಾವಿರ ನೀಡಲಾಗುತ್ತಿದೆ, ಅದರಂತೆ ಮನೆ ಬಾಡಿಗೆ ಪಡೆದುಕೊಳ್ಳವವರಿಗೆ ಮಾಸಿಕವಾಗಿ ೫ ಸಾವಿರ ಪರಿಹಾರ ನೀಡಲಾಗುತ್ತಿದೆ.
ರಾಜ್ಯ ಸರಕಾರದಿಂದ ಮತ್ತೆÃ ಅನುದಾನ ಬಿಡುಗಡೆಯಾದ ಮೇಲೆ ಸಮೀಕ್ಷೆ ತಕ್ಕ ಪರಿಹಾರ ನೀಡಲಾಗುವುದು.
ಚುನಾವಣೆ ಸಮಯಲ್ಲಿ ಮತದಾರರಿಗೆ ಗೊಂದಲಗಳು ಸೃಷ್ಟಿಯಾಗುತ್ತಿದೆ, ಅದಕ್ಕಾಗಿ ತಮ್ಮ ಹೆಸರು ತಿದ್ದುಪಡಿ ಮಾಡಿಕೊಳ್ಳಬೇಕು. ಡಿ. ೩೧ ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ ಮಾಡಲಾಗುವುದು. ಮತದಾನ ಯಾರೊಬ್ಬರು ಹೊರಗೆ ಉಳಿಬಾರದೆಂದು ಹೆಚ್ಚಿನ ಪರಿಶೀಲನೆ ಮೊಬೈಲ್ ಆಪ್ ಬಿಡುಗಡೆಮಾಡಲಾಗಿದೆ, ಇದರ ಮೂಲಕ ಮತದಾರರು ಸರಿಪಡಿಸಿಕೊಳ್ಳಬೇಕೆಂದರು. ಮತದಾರರ ಹೆಸರು, ವಿಳಾಸ, ವಯಸ್ಸು ಗುರುತಿನ ಚೀಟಿಯಲ್ಲಿ ಗೊಂದಲವಾದರೆ, ಶೀಘ್ರದಲ್ಲೆ ಸ್ಪಷ್ಟಮಾಡಿಕೊಳ್ಳಬೇಕು.
ಎರಡು ದಿನ ಬಾಕಿ; ಮತದಾರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಲು ಸೂಚನೆ:
ಬೆಳಗಾವಿ ಜಿಲ್ಲೆಯ ೧೮ ವಿಧಾನ ಸಭಾ ಮತಕ್ಷೇತ್ರಗಳ ಮತದಾರರ ಪರಿಶೀಲನಾ ಕಾರ್ಯಕ್ರಮ ಇನ್ನೂ ಮೂರು ದಿನ ಬಾಕಿ ಇದೆ. ಕೊನೆಯ ದಿನ ಅ.೧೫ ರಂದು ಮತದಾರರ ಪಟ್ಟಿ ಪರಿಷ್ಕಾರ ಕಾರ್ಯವನ್ನು ಆಯೋಜಿಸಲಾಗಿದೆ ಎಂದರು.
ಗೊಂದಲ ಸರಿದುಗಿಸಲು ಭೂತಮಟ್ಟದ ಅಧಿಕಾರಿಗಳ ನೇಮಕ ಮಾಡಲಾಗಿದೆ, ಇದರ ಮೂಲಕ ಮತದಾರರ ಪಟ್ಟಿ ಸಮಸ್ಯೆ ಪರಿಹಾರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಡಾ. ರಾಜೇಂದ್ರ ಕೆ.ವ್ಹಿ, ಎಡಿಸಿ ಅಶೋಕ  ದುಡಗುಂಟಿ ಇನ್ನಿತ್ತರು ಇದರು.
೦೭

loading...