ಅಂಗನವಾಡಿ ಮಕ್ಕಳ ಆಹಾರ ಧಾನ್ಯಕ್ಕೆ ಕಾರ್ಯಕರ್ತೆಯರ ಕಣ್ಣು

0
12

ಅಂಗನವಾಡಿ ಮಕ್ಕಳ ಆಹಾರ ಧಾನ್ಯಕ್ಕೆ ಕಾರ್ಯಕರ್ತೆಯರ ಕಣ್ಣು

ಚನ್ನಮ್ಮ ಕಿತ್ತೂರಃ
ಮಕ್ಕಳು ಸದೃಢವಾಗಿ ಬೆಳೆಯಲಿ ಎಂದು ಸರಕಾರವು ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಪೌಷ್ಟಿಕಾಂಶದ ಆಹಾರ ವಿತರಿಸಿದರೆ ಅವುಗಳನ್ನು ಸಮಪರ್ಕವಾಗಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಪೂರ್ಣ ಪ್ರಮಾಣದಲ್ಲಿ ವಿತರಿಸದೇ ಆಹಾರವನ್ನೆಲ್ಲ ಅಂಗನವಾಡಿ ಕಾರ್ಯಕರ್ತೆಯರ ಪಾಲಾಗುತ್ತಿದೆ ಎಂದು ಗ್ರಾಮ ಪಂಚಾಯತ ಅಧ್ಯಕ್ಷ ಭಿಷ್ಠಪ್ಪ ಶಿಂದೆ ಗಂಭೀರ ಆರೋಪ ಮಾಡಿದರು.
ಸಮೀಪದ ಕುಲವಳ್ಳಿ ವ್ಯಾಪ್ತಿಯಲ್ಲಿ ಬರುವ ೯ ಗ್ರಾಮಗಳ ಅಂಗನವಾಡಿ ಕೇಂದ್ರಗಳಲ್ಲಿ ಸರಕಾರ ನಿಗದಿ ಪಡಿಸಿದ ಮಾನದಂಡ ಬಿಟ್ಟು ಕಾರ್ಯಕರ್ತೆಯರು ಸಮಪರ್ಕವಾಗಿ ಆಹಾರ ದಾನ್ಯಗಳನ್ನು ವಿತರಿಸದೆ ಬೇಕಾಬಿಟ್ಟಿಯಾಗಿ ವಿತರಿಸಿದ್ದಾರೆ. ಕುಲವಳ್ಳಿ ವ್ಯಾಪ್ತಿಯ ಎಲ್ಲ ಕಾರ್ಯಕರ್ತೆಯರು ಇದೇ ಕೆಲಸವನ್ನು ಮಾಡಿದ್ದಾರೆ ಈ ಅಕ್ರಮವನ್ನು ಬಯಲಿಗೆ ತರಲು ಅಂಗನವಾಡಿ ಮೇಲ್ವಿಚಾರಕಿ ಸರೋಜಿನಿ ಹಿರೇಮಠ ನೇತೃತ್ವದಲ್ಲಿ ಪ್ರತಿಮನೆಮನೆಗೆ ಬೇಟಿ ನೀಡಿ ಪರೀಶಿಲನೆ ನಡೆಸಿದಾಗ ಈ ಅಕ್ರಮ ಸಾಭಿತಾಗಿದೆ ಎಂದು ಆರೋಪಿಸಿದ ಅವರು,
ಪ್ರತಿ ತಿಂಗಳು ಈ ಅನ್ಯಾಯ ನಡೆಯುತ್ತಿದೆ ಎಂದು ಗ್ರಾಮಸ್ಥರು ಸಹ ಸಾಕಷ್ಟು ದೂರುಗಳನ್ನು ನೀಡಿದರು ಯಾವುದೇ ಪ್ರಯೋಜನೆಯಾಗಿಲ್ಲ ಮೇಲಾಧಿಕಾರಿಗಳು ಸಹ ಇವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು. ಆಹಾರ ಧಾನ್ಯದ ಪಾಕೇಟ್ ಬಂದರೂ ಅದನ್ನು ಕಟ್ ಮಾಡಿ ಕಡಿಮೆ ಧಾನ್ಯಗಳನ್ನು ವಿತರಿಸಿದ್ದು ಕಂಡು ಬಂದಿದೆ ಇದನ್ನು ಅಧಿಕಾರಿಗಳು ಕೂಲಂಕೂಷವಾಗಿ ಪರೀಶೀಲಿಸಿ ಆಕ್ರಮ ಎಸಗಿದರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಮಹಾಂತೇಶ ಎಮ್ಮಿ ಇದ್ದರು.
ಬಾಕ್ಸ್====
ಸ್ಥಳಕ್ಕೆ ಬೇಟಿ ನೀಡಿ ಪರೀಶಿಲನೆ ಮಾಡಿ ಮೇಲಾಧಿಕಾರಿಗಳ ಗಮನಕ್ಕೆ ತಂದು ತಪ್ಪಿತಸ್ಥರ ಮೇಲೆ ಕಾನುನೂ ಕ್ರಮ ಕೈಗೊಳ್ಳಲಾಗುವದು.
ರೇವತಿ ಹೊಸಮಠ. ಸಿಡಿಪಿಓ

loading...