ಅಂತಾರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿಯ ಗುಟ್ಟು ಸ್ಪಷ್ಟಪಡಿಸಿದ ಡೆವಿಲಿಯರ್ಸ್‌

0
15

ಮೊಹಾಲಿ:-ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ಪ್ರಸ್ತುತ ರಾಯಲ್‌ ಚಾಲೆಂಜರ್ಸ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ ಎಬಿ ಡೆವಿಲಿಯರ್ಸ್‌ ಅವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿರುವ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ರಾತ್ರಿ ಪಿಸಿಎ ಅಂಗಳದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಎಂಟು ವಿಕೆಟ್‌ಗಳಿಂದ ಜಯ ಸಾಧಿಸಿದ ಬಳಿಕ ಮಾತನಾಡಿದ ಅವರು, “ ಪ್ರಪಂಚದಾದ್ಯಂತ ಕ್ರೀಡೆಯ ಬಿಟ್ಟು ಇತರ ರೂಪಗಳಲ್ಲಿಯೂ ನಾನು ಸಾಧ್ಯವಾದಷ್ಟು ಉತ್ಸಾಹಿಯಾಗಿರಬೇಕು. 15 ವರ್ಷಗಳ ಕಾಲ ಕ್ರಿಕೆಟ್‌ ವೃತ್ತಿ ಜೀವನ ಸವೆಸಿದ್ದೇನೆ. ಹಾಗಾಗಿ, ವರ್ಷದಲ್ಲಿ 10 ರಿಂದ 11 ತಿಂಗಳು ಕ್ರಿಕೆಟ್‌ ಆಡಲು ಪ್ರಸ್ತುತ ಸಾಧ್ಯವಿಲ್ಲ. ಇದೀಗ 2 ಅಥವಾ 3 ತಿಂಗಳು ಅವಧಿಯಲ್ಲಿ ಐಪಿಎಲ್‌ ನಂಥ ಟೂರ್ನಿಗಳನ್ನು ಆಡಲು ಬಯಸುತ್ತೇನೆ” ಎಂದರು.

ಎ.ಬಿ ಡೆವಿಲಿಯರ್ಸ್‌ 2018ರ ಮೇ 23 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಗೆ ವಿದಾಯ ಘೋಷಿಸಿದ್ದರು. ಪ್ರಸ್ತುತ ಅವರು ಐಪಿಎಲ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಪರ ಆಡುತ್ತಿದ್ದು, ಉತ್ತಮ ಲಯದಲ್ಲಿದ್ದಾರೆ. ಆದರೆ, ಸಹ ಆಟಗಾರರು ಪ್ರದರ್ಶನದಲ್ಲಿ ಸ್ಥಿರತೆ ಕಾಯ್ದುಕೊಳ್ಳದ ಕಾರಣ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಆರಂಭದ ಕೆಲವು ಪಂದ್ಯಗಳಲ್ಲಿ ಗೆಲುವು ಪಡೆಯಲು ಸಾಧ್ಯವಾಗಿರಲಿಲ್ಲ.

“ ಪ್ರತಿಯೊಂದು ಪಂದ್ಯದ ಬಗ್ಗೆಯೂ ಹೆಚ್ಚು ಗೌರವವಿದೆ. ಆದರೆ, ಕೆಲವು ಪಂದ್ಯಗಳ ಸೋಲಿನಿಂದ ನಿರಾಸೆಯಾಗುತ್ತದೆ. ಎಲ್ಲ ಸಂದರ್ಭಗಳಲ್ಲಿ ಉತ್ತಮ ಪ್ರದರ್ಶನ ತೋರುವುದು ಅಸಾಧ್ಯ. ಪಂದ್ಯದ ಗೆಲುವಿಗಾಗಿ ಸದಾ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ.” ಎಂದರು.

ಆಸ್ಟ್ರೇಲಿಯಾ ವೇಗಿ ನಥಾನ್‌ ಕೌಲ್ಟರ್‌ ನೈಲ್‌ ಅವರು ಗಾಯಗೊಂಡ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಆರ್‌ಸಿಬಿ ತಂಡಕ್ಕೆ ಆಗಮಿಸಿರುವ ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್‌ ಸ್ಟೈನ್‌ ಕುರಿತು ಮಾತನಾಡಿ, “ ಸ್ಟೈನ್‌ ಆರ್‌ಸಿಬಿಗೆ ಆಗಮಿಸಿರುವುದು ಬೌಲಿಂಗ್‌ ವಿಭಾಗದಲ್ಲಿ ಇನ್ನಷ್ಟು ಬಲ ಸಿಕ್ಕಂತಾಗಿದೆ. ಅವರ ಬಗ್ಗೆ ಶೇ 200 ರಷ್ಟು ಭರವಸೆ ನೀಡಬಹುದು. ಅಗತ್ಯ ಸಂದರ್ಭಗಳಲ್ಲಿ ಅವರು ತಂಡಕ್ಕೆ ಆಸರೆಯಾಗುವ ಸಾಮರ್ಥ್ಯ ಅವರಲ್ಲಿದೆ’’ ಎಂದು ಹೇಳಿದರು.

loading...