ಅಂಪೈರ್ ಕೈಯಿಂದ ಟೆೋಪಿ ಕಸಿದ ಟಿಮ್ ಬ್ರೆಸ್ನಾನ್ಗೆ ದಂಡ

0
21

ನವದೆಹಲಿ,22-ಅಂಪೈರ್ ತೀರ್ಪು ಬಗ್ಗೆ ಅಸಹನೆ ವ್ಯಕ್ತಪಡಿಸಿ ಅಂಪೈರ್ ಟೆೋಪಿ ಕಸಿದುಕೊಂಡ ಇಂಗ್ಲೆಂಡ್ ವೇಗಿ ಟಿಮ್ ಬ್ರೆಸ್ನಾನ್ ಅವರಿಗೆ ಮೊಹಾಲಿ ಪಂದ್ಯದ ಶುಲ್ಕದ ಶೇ.7.5ರಷ್ಟು ದಂಡ ವಿಧಿಸಲಾಗಿದೆ.

ಮೊಹಾಲಿಂುುಲ್ಲಿ ಗುರುವಾರ ನಡೆದ ಏಕದಿನ ಪಂದ್ಯದಲ್ಲಿ ಭಾರತವು ಪ್ರವಾಸಿ ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಅಂತರದಿಂದ ಜಂುು ಸಾಧಿಸಿ ಪಾರಮ್ಯ ಮೆರೆದಿತ್ತು. 18ನೇ ಓವರ್ ಅಂದರೆ ತಮ್ಮ ಐದನೇ ಓವರ್ ಎಸೆದು ಮುಗಿಸಿದ ಬಳಿಕ ಬ್ರೆಸ್ನಾನ್ ಅವರು ಅಸ್ನಾನ ಕೈಗೆ ಕೊಟ್ಟಿದ್ದ ತಮ್ಮ ಕ್ಯಾಪ್ ಅನ್ನು ಬಲವಂತವಾಗಿ ಕಸಿದುಕೊಂಡಿದ್ದರು.

ಬ್ರೆಸ್ನಾನ್ ಅಸಭ್ಯ ವರ್ತನೆ ಕುರಿತು ಆನ್ ಫೀಲ್ಡ್ ಅಂಪೈರುಗಳಾದ ಬಿಲ್ಲಿ ಬೌಡೆನ್ ಮತ್ತು ಸುಧೀರ್ ಅಸ್ನಾನ ಹಾಗೂ ಥರ್ಡ ಅಂಪೈರ್ ಎಸ್.ರವಿ ದೂರು ನೀಡಿದ್ದಾರೆ. ಅಂತಾರಾಷ್ಟ್ರೀಂುು ಪಂದ್ಯದಲ್ಲಿ ಅಂಪೈರ್ ನದುಾರ್ರಕ್ಕೆ ಅಸಮ್ಮತಿ ಪ್ರದರ್ಶಿಸುವ ಮೂಲಕ ಬ್ರೆಸ್ನಾನ್ ಅವರು ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ದೂರು ನೀಡಲಾಗಿತ್ತು.

ಪಂದ್ಯದ ಬಳಿಕ ಮೂವರು ಅಂಪೈರುಗಳು ಹಾಗೂ ರೆಪ್ರಿ ರೋಶನ್ ಮಹಾನಾಮ ಹಾಗೂ ಕ್ರಿಕೆಟಿಗ ಬ್ರೆಸ್ನಾನ್, ಇಂಗ್ಲೆಂಡ್ ಕೋಚ್ ಆಂಡಿ ಪ್ಲವರ್, ಇಂಗ್ಲೆಂಡ್ ಟೀಂ ಮ್ಯಾನೇಜರ್ ಪಿಲ್ ನೀಲ್ ಎಲ್ಲರನ್ನೂ ಕರೆಸಿ ವಿಚಾರಣೆೆ ನಡೆಸಲಾದ ಬಳಿಕ ದಂಡ ವಿಧಿಸಲಾಯಿತು.

 

loading...

LEAVE A REPLY

Please enter your comment!
Please enter your name here