ಅಕ್ರಮವಾಗಿ ಆಮೆ ಮಾರುತ್ತಿದ್ದ ವ್ಯಕ್ತಿ ಬಂಧನ

0
13

ಬೆಳಗಾವಿ
ಕಾನೂನು ಬಾಹಿರವಾಗಿ ಅಕ್ರಮವಾಗಿ ಆಮೆಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬೆಳಗಾವಿ ಅರಣ್ಯಾಧಿಕಾರಿಗಳು ಸೋಮವಾರ ತಡರಾತ್ರಿ ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಬಿಜಗರಣಿ ಮತ್ತು ರಾಕಸಕೊಪ್ಪ ಮದ್ಯದಲ್ಲಿ ವಲಯ ಅರಣ್ಯಾಧಿಕಾರಿ ಆರ್.ಎಚ್. ಡೊಂಬರಗಿ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿ ತಪಾಸಿಸಿ ವಶಕ್ಕೆ ಪಡೆದರು.
ಆಮೆ ಕೊಳ್ಳುವವರ ಸೋಗಿನಲ್ಲಿ ಅರಣ್ಯಾಧಿಕಾರಿ ವಿನಯ ಗೌಡರ, ರಮೇಶ ಗಿರಿಯಪ್ಪನವರ ಮತ್ತು ಅರಣ್ಯ ಸಿಬ್ಬಂಧಿ ಮೊಹಮ್ಮದ ಕಿಲ್ಲೇದಾರ ತಪಾಸಣೆ ನಡೆಸಿದಾಗ ಪ್ರತಿ ಆಮೆಗೆ ರು. 5ಲಕ್ಷಕ್ಕೆ ಅರಣ್ಯಾಧಿಕಾರಿಗಳಿಗೇ ಮಾರಾಟ ಮಾಡಲು ಯತನ್ನಿಸಿದ್ದಾನೆ. ಆರೋಪಿಯಿಂದ ಬೈಕ್ ಮತ್ತು ಆಮೆ ವಶಕ್ಕೆ ಪಡೆಯಲಾಗಿದೆ.
ಆರೋಪಿತ ಅಮೃತ ಶಿವಾಜಿ ಬೆನಕೆ ಈತ ಮಹಾರಾಷ್ಟ್ರದ ಚಂದಗಡ ತಾಲೂಕಿನ ಡೆಕೊಳಿ ಗ್ರಾಮದವನಾಗಿದ್ದಾನೆ.

loading...