ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸಾಗವಾನಿ ಕಟ್ಟಿಗೆ ವಶ

0
19

ಕಲಘಟಗಿ:ತಾಲೂಕಿನ  ದೇವಿಕೊಪ್ಪ ಗ್ರಾಮದಿಂದ ಹುಬ್ಬಳ್ಳಿಗೆ ಅಕ್ರಮವಾಗಿ ಸಾಗವಾನಿ ಕಟ್ಟಿಗೆ ಸಾಗಿಸಲಾಗುತ್ತಿದ್ದ ವಾಹನವನ್ನು ಹಾಗೂ ಆರೋಪಿಯನ್ನು ಕಟ್ಟಿಗೆ ಸಮೇತ ಅರಣ್ಯ ಇಲಾಖೆಯ ಸಿಬ್ಬಂದ್ದಿ ವಶಪಡಿಸಿಕೊಂಡೊರುವ ಘಟನೆ ಶುಕ್ರವಾರ ಬೆಳಗಿನ ಜಾವಾ ಸಂಭವಿಸಿದೆ.

  ದಾಳಿಯಲ್ಲಿ ಆರೋಪಿಯಾದ ಮೌನೇಶ ಬ.ಬಡಿಗೇರ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ವಾಹನ ಚಾಲಕ ಪರಾರಿಯಾಗಿದ್ದಾನೆ.ಅಂದಾಜು 50 ಸಾವಿರೂ ಮೌಲ್ಯದ ಸುಮಾರು 20 ಸಾಗವಾನಿ ಚೌಕ ಪಟ್ಟಿಗಳನ್ನು ಹೇರಿಕೊಂಡು ಹೋಗುತ್ತಿರುವಾಗ ಖಚಿತ ಮಾಹಿತಿಯನ್ನಾದರಿಸಿ ಕಲಘಟಗಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಉದಯಕುಮಾರ ಜೋಗಿ ಹಾಗೂ ವಲಯ ಅರಣ್ಯ ಅಧಿಕಾರಿಗಳು ಬಿ ಆರ್. ಚಿಕ್ಕಮಠ ರವರ ಮಾರ್ಗದರ್ಶನದಲ್ಲಿ ಅರಣ್ಯ ರಕ್ಷಕರಾದ  ಕೆ. ವಿ. ಧನವೆ ,  ಪಿ. ಎಂ. ಕರಗುಪ್ಪಿ, ಕೆ ಆರ್. ಕುಲಕರ್ಣಿ, ಪಿ. ಪಿ. ಮೋರೆ, ಎಂ, ವೈ. ಚಲವಾದಿ ಎಸ್. ಎಚ್. ಚವ್ಹಾಣ, ವಿ. ಎನ್. ಕಾಂಬಳೆ. ಆರ್.ಕೆ ಪೂಜಾರ ಮತ್ತು ಪೋಲೀಸ್ ಸಿಬ್ಬಂದಿಯೊಂದಿಗೆ ಸೇರಿ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು.ವಶಪಡಿಸಿಕೊಂಡ ವಾಹನ ಹಾಗೂ ಕಟ್ಟಿಗೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಮ್ಮಖದಲ್ಲಿ ಹಾಜರುಪಡಿಸಲಾಗಿದ್ದು,ಪ್ರಕರಣ ದಾಖಲಾಗಿದೆ.ಚಿತ್ರ ಇದೆ ಕಲಘಟಗಿಯ ದೇವಿಕೊಪ್ಪ ದಿಂದ ಹುಬ್ಬಳ್ಳಿಗೆ ಅಕ್ರಮವಾಗಿ ಸಾಗವಾನಿ ಕಟ್ಟಿಗೆ ಸಾಗಿಸಲಾಗುತ್ತಿದ್ದ ವಾಹನವನ್ನು ಹಾಗೂ ಆರೋಪಿಯನ್ನು ಕಟ್ಟಿಗೆ ಸಮೇತ ಅರಣ್ಯ ಇಲಾಖೆಯ ಸಿಬ್ಬಂದ್ದಿ ಶುಕ್ರವಾರ ವಶಪಡಿಸಿಕೊಳ್ಳಲಾಯಿತು.

loading...

LEAVE A REPLY

Please enter your comment!
Please enter your name here