ಅಕ್ರಮ ಮದ್ಯ ಮಾರಾಟ: 16 ಜನ ಸೆರೆ

0
42

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯಾದ್ಯಂತ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿಮಾಡಿದ ಪೊಲೀಸರು 16 ಜನರನ್ನು ಬಂಧಿಸಿ, ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹಿಂಡಲಗಿಯ ಮೋಹನ ದಾವತಾರ, ಕರಿಕಟ್ಟಿ ಗ್ರಾಮದ ಪುಂಡಲೀಕ ಬೆಳ್ಳಿಕುಪ್ಪಿ, ಪಟಗುಂದಿಯ ನಾಗರಾಜ ರಘರಾಮ, ಸಹರಾಪೂರ ಪವನ ಯಾದವ, ಬೆಳಕೂಡದ ರಾಮಪ್ಪಾ ತಳವಾರ, ವಡ್ರಾಳದ ಲಗಮಣ್ಣಾ ಶಿರಗನ್ನವರ, ಚಾಂದಶಿರದವಾಡದ ಫಿರೋಜ ಚಾವುಸ, ರೂಪಿನಾಳದ ಅಜೀತ ಪವಾರ, ನಿಪ್ಪಾಣಿಯ ರಾಜು ಗೋರಡೆ, ಜತ್ರಾಟದ ಅಪ್ಪಸೋ ಪೂಜೇರಿ, ಬಾಡಗಿಯ ಕಾಸಪ್ಪ ಈಳಿಗೇರ, ಬೇಡಕಿಹಾಳದ ದತ್ತಾತ್ರೇಯ ಮೋರೆ, ಬಾಡಗಿ ಗ್ರಾಮದ ನಿಂಗಪ್ಪ ಹುದ್ದಾರ ಮತ್ತು ಮೂವರು ಬಂಧಿತರು.
ಬಂಧಿತರಿಂದ 16,197 ರೂ. ಮೌಲ್ಯದ ಅಕ್ರಮ ಮದ್ಯ ಮಾರಾಟ ಮಾಡುವ ವೇಳೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಈ ಕುರಿತು ನಂದಗಡ, ಸವದತ್ತಿ, ಮೂಡಲಗಿ, ಸದಲಗಾ, ಚಿಕ್ಕೋಡಿ, ಅಂಕಲಿ, ನಿಪ್ಪಾಣಿ ಹಾಗೂ ಐಗಳಿ ಪೊಲೀಸ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

loading...