ಅಕ್ರಮ ಸಂಬಂಧಕ್ಕಾಗಿ ಮಗನನ್ನೇ ಕೊಂದ ಮಹಾಮಾರಿ* ! || *ಎರಡು ಕೊಲೆ ಮಾಡಿ ಸಿಕ್ಕಿ ಬಿದ್ದ ಜೋಡಿ||ಪ್ರಕರಣ ಬೇಧಿಸುವಲ್ಲಿ ಹುಕ್ಕೇರಿ ಪೊಲೀಸರು ಯಶಸ್ವಿ* ||

0
254

ಕನ್ನಡಮ್ಮ ಸುದ್ದಿ
ಹುಕ್ಕೇರಿ ೧೪: ವಿವಾಹಿತ ಮಹಿಳೆಯೊಬ್ಬಳು ತನ್ನ ಲಾಲಸೆ ತೀರಿಸಿಕೊಳ್ಳಲು ಅಕ್ರಮ ಸಂಬಂಧ ಬೇಡವೆಂದು ತಿಳುವಳಿಕೆ ಹೇಳಿದ ಮಹಿಳೆಯ ಜೊತೆಗೆ ಸ್ವಂತ ಮಗನನ್ನೇ ಬಾವಿಗೆ ನೂಕಿ ಕೊಲೆ ಮಾಡಿ ಇದೀಗ ಹುಕ್ಕೇರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಹೌದು, ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಸುಧಾ ಸುರೇಶ ಕರಿಗಾರ ಹಾಗೂ ರಾಮ ಬಸ್ತವಾಡೆ ಎಂಬುವರೇ ಪ್ರಕರಣ ಪ್ರಮುಖ ಆರೋಪಿಗಳಾಗಿದ್ದು, ಸುಧಾ ನಡೆಸುತ್ತಿರುವ ಅಕ್ರಮ ಚಟುವಟಿಕೆ ಬಗ್ಗೆ ಅನುಮಾನ ಪಟ್ಟು ತಾಕೀತು ಮಾಡುವಂತೆ ತಿಳಿಸಿದ್ದ
ಭಾಗ್ಯಶ್ರೀ ಎಂಬ ಮಹಿಳೆಯ ಮೇಲೆ ಸೇಡು ತೀರಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದ ಸುಧಾ ರಾತ್ರಿ ಯಾರೂ ಮನೆಯಲ್ಲಿಲ್ಲದ ಸಮಯ ನೋಡಿ ಭಾಗ್ಯಶ್ರೀ ಎಂಬ ಮಹಿಳೆಯನ್ನು ಸೀಮೆ ಎಣ್ಣೆ ಹಾಕಿ ಸುಟ್ಟು ಹಾಕಿದ್ದು, ಈ ಕೃತ್ಯಕ್ಕೆ ಸುಧಾ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ರಾಮ ಸಹ ಕುಮ್ಮಕ್ಕು ನೀಡಿದ್ದಾನೆಂದು ಪೊಲೀಸರು ತನಿಖೆಯಲ್ಲಿ ಗೊತ್ತಾಗಿದೆ.

*ಮಗನನ್ನೆ ಕೊಂದ ಮಹಾಮಾರಿ:*
ದೇಶದಲ್ಲಿ ಮಾತೃ ದೇವೋಭವ ಎಂದು ತಾಯಿಯನ್ನು ದೇವರಿಗೆ ಹೋಲಿಸುತ್ತಾರೆ. ಈ ತಾಯಿ ಅದಕ್ಕೆ ಕಳಂಕ ಎಂದರೆ ತಪ್ಪಾಗಲಾರದು. ತಾನು ಪರ ಪುರುಷನ ಜೊತೆಗೆ ಅಕ್ರಮ ಸಂಬಂಧ ಮಗನಿಗೆ ಗೊತ್ತಾದ ಸುದ್ದಿ ತಿಳಿದು, ಮಗ ಎಲ್ಲಿ ತಂದೆಗೆ ತಿಳಿಸಿಬಿಡುತ್ತಾನೋ ಎಂಬ ಆತಂಕದಿಂದ ಹೆತ್ತ ಮಗನನ್ನೆ ಬಾವಿಗೆ ನೂಕಿ ಕೊಲೆ ಮಾಡಿದ್ದಾಳೆಂಬ ಅನುಮಾನದಲ್ಲಿ ಪ್ರಕರಣದ
ಬೆನ್ನು ಹತ್ತಿದ ಪೊಲೀಸರು ಪ್ರಕರಣ ಬೇಧಿಸಿ ಸುಧಾ ಸುರೇಶ ಕರಿಗಾರ ಹಾಗೂ ರಾಮ ಕೆಂಚಪ್ಪಾ ಬಸ್ತವಾಡೆ ಎಂಬುವರೇ ಕೊಲೆಯ ಪ್ರಮುಖ ಆರೋಪಿಗಳೆಂದು ಪತ್ತೆ ಹಚ್ಚಿದ್ದಾರೆ.
ಈ ಕುರಿತು ಸುರೇಶ ಕರಿಗಾರ ನೀಡಿದ ದೂರಿನ ಆಧಾರದಲ್ಲಿ ಪ್ರಕರಣದ ಬೆನ್ನು ಹತ್ತಿದ್ದ ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ, ಹುಕ್ಕೇರಿ ಪಿಎಸ್‌ಐ ನೇತೃತ್ವದ ೧೮ ತಂಡ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣ ಬೇಧಿಸಿದ ತಂಡಕ್ಕೆ ಪೊಲೀಸ ವರಿಷ್ಠಾಧಿಕಾರಿಗಳು ಬಹುಮಾನ ಘೋಷಿಸಿದ್ದಾರೆ.

loading...