ಅಕ್ರಮ ಸೀಮೆ ಎಣ್ಣೆ : ತನಿಖೆಗೆ ಕ್ರಮ

0
22

ಕನ್ನಡಮ್ಮ ಸುದ್ದಿ
ಅಮೀನಗಡ : ಪಟ್ಟಣದ ಅಂಗಡಿಯೊಂದರಲ್ಲಿ ಸಂಗ್ರಹವಾಗಿದ್ದ ಸೀಮೆಎಣ್ಣೆ ಕುರಿತು ಸೂಕ್ತ ತನಿಖೆ ನಡೆಸುವುದಾಗಿ ಅಮೀನಗಡ ವೃತ್ತ ಆಹಾರ ನಿರೀಕ್ಷಕ ಎಂ.ಆರ್‌.ಹೆಬ್ಬಳ್ಳಿ ತಿಳಿಸಿದ್ದಾರೆ.
ಪಟ್ಟಣದ ಸೀಮೆಎಣ್ಣೆ ವಿತರಣೆಯಲ್ಲಿ ಗ್ರಾಹಕರಿಗೆ ಅನ್ಯಾಯವಾಗಿದೆ ಎಂದು ಸೀಮೆಎಣ್ಣೆ ಅಂಗಡಿ ಮುಂದೆ ನೆರೆದಿದ್ದ ಸಾರ್ವಜನಿಕರು ಪಕ್ಕದ ಅಂಗಡಿಯೊಂದರಲ್ಲಿ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದ್ದಲ್ಲದೆ ಸ್ಥಳ ವೀಕ್ಷಿಸಿದಾಗ ಅಲ್ಲಿ 2 ಕ್ಯಾನ್‌ಗಳಲ್ಲಿ ಅಂದಾಜು 50 ಲೀಟರ್‌ ಸೀಮೆಎಣ್ಣೆ ಇರುವುದು ಕಂಡು ಬಂದಿತು.
ಸಂಗ್ರಹವಾದ ಸೀಮೆಎಣ್ಣೆ ವಿತರಕರಿಗೆ ಸಂಬಂಧಿಸಿದ್ದು ಕೂಡಲೆ ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಸೀಮೆಎಣ್ಣೆ ಸಿಕ್ಕ ಸ್ಥಳದ ಮಾಲಿಕ ನಮ್ಮದು ಲಾರಿ ಇದ್ದು ಅದಕ್ಕಾಗಿ ಬೇರೆಡೆಯಿಂದ ಸಂಗ್ರಹಿಸಿದ್ದೇನೆ ಎಂದರು.
ಸಂಜೆ ಸ್ಥಳಕ್ಕೆ ಆಗಮಿಸಿದ ಆಹಾರ ನಿರೀಕ್ಷಕ ಎಂ.ಆರ್‌.ಹೆಬ್ಬಳ್ಳಿ ಸೀಮೆಎಣ್ಣೆ ವಿತರಣೆ ಕುರಿತಂತೆ ಸ್ಟಾಕ್‌ ಪರಿಶೀಲಿಸಿದರು. ಇಲಾಖೆಯಿಂದ ಸೀಮೆಎಣ್ಣೆ ವಿತರಿಸಿದ್ದಕ್ಕೂ ಹಾಗೂ ಗ್ರಾಹಕರಿಗೆ ವಿತರಿಸಿದ ಸೀಮೆಎಣ್ಣೆಗೂ ಸರಿಯಾಗಿದೆ. ಆದರೆ ಪಕ್ಕದ ಸ್ಥಳದಲ್ಲಿ ಸಂಗ್ರಹವಾಗಿದ್ದ ಸೀಮೆಎಣ್ಣೆ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದರು. ನಂತರ ಮೇಲಧಿಕಾರಿಗಳ ಸೂಚನೆ ಮೇರೆಗೆ ಸೀಮೆಎಣ್ಣೆಯನ್ನು ಸ್ಥಳೀಯ ಪೊಲೀಸ್‌ ಠಾಣೆಗೆ ಒಪ್ಪಿಸಿರುವುದಾಗಿ ತಿಳಿಸಿದರು.

loading...

LEAVE A REPLY

Please enter your comment!
Please enter your name here