ಅಣಬೆ ಖರೀದಿಗೆ ಮುಗಿಬಿದ್ದ ಗ್ರಾಹಕರು

0
65

ಕನ್ನಡಮ್ಮ ಸುದ್ದಿ-ಕುಮಟಾ: ಪಟ್ಟಣದ ಗಿಬ್ ಸರ್ಕಲ್‍ನಲ್ಲಿ ಶುಕ್ರವಾರ ಅಣಬೆ ಲಗ್ಗೆ ಇಟ್ಟಿದ್ದು, ಗ್ರಾಹಕರು ಅಣಬೆ ದರವನ್ನು ಚೌಕಾಸಿ ಮಾಡದೇ ಖರೀಧಿಸಲು ಮುಗಿಬಿದ್ದ ದೃಶ್ಯ ಕಂಡುಬಂತು.
ತಾಲೂಕಿನ ಬಡಾಳ, ಸಂತೇಗುಳಿ, ಸಾಂತಗಲ್, ಕಡ್ನೀರು, ಕತಗಾಲ ಹಾಗೂ ಇತರೆ ಗ್ರಾಮೀಣ ಭಾಗಗಳ ಅರಣ್ಯ ಪ್ರದೇಶದಲ್ಲಿ ಹುತ್ತದ ಹೂವೆಂದೆ ಕರೆಯುವ ಅಣಬೆಗೆ ಎಲ್ಲಿಲ್ಲದ ಬೇಡಿಕೆ. ಮಳೆಗಾಲದ ಆಷಾಡ ಮಾಸದಲ್ಲಿ ಮಾತ್ರ ದೊರೆಯುವ ಈ ಅಣಬೆಯ ಖರೀಧಿಯಲ್ಲಿ ಜನ ಮುಗಿಬೀಳುತ್ತಾರೆ. ತುಂಬಾ ರುಚಿಕರ ಹಾಗೂ ಆರೋಗ್ಯಕ್ಕೆ ಹಿತಕರವಾದ ಅಣಬೆಗೆ ಉತ್ತಮ ಬೆಲೆ ದೊರೆಯುವುದರಿಂದ ಗ್ರಾಮೀಣ ಭಾಗದ ಜನರು ಅರಣ್ಯ ಪ್ರದೇಶದ ಹುತ್ತದಲ್ಲಿ ದೊರೆಯುವ ಈ ಅಣಬೆಯನ್ನು ಕಿತ್ತುಕೊಂಡು ಪಟ್ಟಣಕ್ಕೆ ತಂದು ಮಾರಾಟ ಮಾಡುತ್ತಾರೆ.
25ರಿಂದ 35 ಅಣಬೆಗಳ ಪೆÇಟ್ಟಣಕ್ಕೆ 100 ರಿಂದ 150 ರೂ ಬೆಲೆ ನಿಗದಿ ಪಡಿಸಿದ್ದರೂ ಗ್ರಾಹಕರು ಪೈಪೆÇೀಟಿಗೆ ಬಿದ್ದಂತೆ ಖರೀಧಿಸುತ್ತಾರೆ. ಅಲ್ಲದೇ ಅಣಬೆ ಸಾಂಬಾರು ತುಂಬಾ ರುಚಿಕರವಾಗಿರುವುದರಿಂದ ಪ್ರತಿ ವರ್ಷ ಖರೀಧಿಸುವ ಜೊತೆಗೆ ಬೃಹತ್ ಶಹರಗಳಲ್ಲಿರುವ ನಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೂ ಈ ಅಣಬೆಗಳನ್ನು ಕಳುಹಿಸಿಕೊಡುತ್ತೇವೆ ಎಂದು ಗ್ರಾಹಕರ ಅಭಿಪ್ರಾಯವಾಗಿದೆ. ಪಟ್ಟಣದ ಗಿಬ್ ಸರ್ಕಲ್‍ಗೆ ವ್ಯಾಪಾರಸ್ಥರು ಆಗಮಸಿದ ಒಂದೇ ಗಂಟೆಯಲ್ಲಿ ಅಣಬೆ ಮಾರಾಟವಾಗುವ ಮಟ್ಟಿಗೆ ಬೇಡಿಕೆ ಇರುವುದರಿಂದ ಬೆಲೆ ಜಾಸ್ತಿಯಾದರೂ ಅಣಬೆ ಮಾರಾಟ ಮಾತ್ರ ಜೋರಾಗಿ ನಡೆಯುತ್ತದೆ.
ಗ್ರಾಮೀಣ ಭಾಗದ ಅರಣ್ಯ ಪ್ರದೇಶದಲ್ಲಿ ದೊರಕುವ ಅಣಬೆಎ ಬೇಡಿಕೆ ಜಾಸ್ತಿಯಿದೆ. ಆದರೆ, ಈ ಭಾರಿ ಅಣಬೆಯ ಪ್ರಮಾಣ ತೀರಾ ಕಡಿಮೆಯಾಗಿದ್ರೂ ವ್ಯಾಪಾರ ಉತ್ತಮವಾಗಿದೆ ಎಂದು ಅಣಬೆ ವ್ಯಾಪಾರಸ್ತರಾದ ಬಂಗಣೆಯ ವೆಂಕು ಗಣೇಶ ಮರಾಠಿ, ಜಾನು ತಿಮ್ಮು ಮರಾಠೆ, ಬಡಾಳದ ತಿಮ್ಮು ನಾಗು ಭಂಡಾರಿ, ಶಂಕರ ಭಂಡಾರಿ ಹಾಗೂ ಕುಮಟಾದ ಸುರೇಶ ನಾಯ್ಕ ತಿಳಿಸಿದ್ದಾರೆ.

loading...