ಅಣ್ಣಿಗೇರಿಯ ಸಮಗ್ರ ಅಭಿವೃದ್ಧಿಯಾಗಬೇಕು: ಮಾಲತಿ

0
67

ಕನ್ನಡಮ್ಮ ಸುದ್ದಿ- ಅಣ್ಣಿಗೇರಿ ಪಂಪ ಉತ್ಸವದ ದ್ವಿತೀಯ ದಿನದ ಕವಿಗೋಷ್ಠಿಯಲ್ಲಿ ಹಲವಾರು ಸಾಹಿತಿಗಳು ಕವಿಗಳು ಮತ್ತು ಲೇಖಕರು ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದರು. ಅಣ್ಣಿಗೇರಿ ಸ್ವತಂತ್ರ ತಾಲೂಕು ಆಗಿ ರಚನೆಯಾಗಿರುವುದರಿಂದ ಒಂದು ರೀತಿಯ ಸ್ವತಂತ್ರ ಅಸ್ತಿತ್ವ ಹಾಗೂ ಅಸ್ಮಿತೆ ದೊರೆತಂತಾಗಿದೆ. ಈ ಮೂಲಕ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು, ಜನರಿಗೆ ಉತ್ತಮ ನ್ಯಾಯ ಆಡಳಿತ ದೊರಕಬೇಕು.
ಅಣ್ಣಿಗೇರಿಯಲ್ಲಿ ರಸ್ತೆ ಬದಿಗಳಲ್ಲಿ ಪಂಪನ ಹೆಸರಿನಲ್ಲಿ ವೃಕ್ಷ ನೆಡುವ, ಪಂಪ ಉದ್ಯಾನವನ, ಪಂಪಾಬುಧಿ ಕರೆ ನಿರ್ಮಾಣ, ಪಂಪನ ಮೂರ್ತಿ, ವಿಧ್ಯಾನಿಲಯಗಳು ಸ್ಥಾಪನೆಯಾಗುವುದರ ಮೂಲಕ ಅಣ್ಣಿಗೇರಿಯ ಸಮಗ್ರ ಅಭಿವೃದ್ಧಿಯಾಗಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿಯವರು ಇಂದಿಲ್ಲಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಣ್ಣಿಗೇರಿ ಪುರಸಭೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಆದಿಕವಿ ಪಂಪ ಉತ್ಸವ-2018ರ ಎರಡನೇ ದಿನದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕವಿಯಾದವನಿಗೆ ತನ್ನ ಸುತ್ತಲಿನ ಸಮಾಜದಲ್ಲಿನ ನೋವುಗಳನ್ನು ಆಳಿಸುವ ಹೃದಯವಿರಬೇಕು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಡಾ.ಬಾಳಣ್ಣ ಶೀಗೀಹಳ್ಳೀಯವರು ಕನ್ನಡ ಸಾಹಿತ್ಯಕ್ಕೆ ಒಂದು ವಿಶಿಷ್ಟ ಹಾಗೂ ಹೊಸ ಮಾರ್ಗವನ್ನು ಉದ್ಘಾಟಸಿದ ಕವಿಯಂದರೆ ಪಂಪ. ಪರಂಪರೆ ಹಾಗೂ ದೇಶಿಪದ್ದತಿಯನ್ನು ಮೈಗೂಡಿಸಿಕೊಂಡು ಪಂಪ ವಿಶಿಷ್ಟ ಮಾರ್ಗವೊಂದನ್ನು ಸೃಷ್ಠಿಸಿದ. ಅದು ಮುಂದಿನ ಹಲವಾರು ಕವಿಗಳಿಗೆ ದಾರಿದೀಪವಾಯಿತು. ಪ್ರತಿ ಕಾಲಘಟ್ಟ ಸಂಬಂಧಿಸಿದಂತೆ ಸಾಹಿತ್ಯ ಆಶೋತ್ತರಗಳು ಬದಲಾಗುತ್ತವೆ. ಈ ಆಶೋತ್ತರಗಳಿಗೆ ಧ್ವನಿಯಾಗಿ ಕವಿತೆ ನಿಲ್ಲಬೇಕು ಎಂದು ಹೇಳಿದರು. ಕವಿಗೋಷ್ಠಿಯಲ್ಲಿ ಮಾಜಿ ಕ್ರೆಡಲ್‌ ಅಧ್ಯಕ್ಷ ಷಣ್ಮುಕ ಗುರಿಕಾರ, ನವಲಗುಂದದ ಕ.ಸಾ.ಪಂ. ಅಧ್ಯಕ್ಷ ಪ್ರಕಾಶ್‌ ಅಂಗಡಿ, ವಿಚಾರ ಸಂಕಿರಣ ಸಮಿತಿಯ ಅಧ್ಯಕ್ಷ ಶಿವಶಂಕರ ಕಲ್ಲೂರ, ಅಣ್ಣಿಗೇರಿ ಸ್ಥಾಯಿ ಸಮಿತಿ ಅಧ್ಯಕ್ಷ ಜಟ್ಟೆಪ್ಪ ಕಲ್ಲೋಡರ, ಇತರೆ ಪುರಸಭೆ ಸದಸ್ಯರು, ತಾಲೂಕು ಹೋರಾಟಗಾರರು, ವಿಧ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

loading...