ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಿ: ಡಾ.ಕಂಬಾರ

0
9

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಿ: ಡಾ.ಕಂಬಾರ
ಬೆಳಗಾವಿ: ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ಖಾಯಮಾತಿ , ಇತರ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಒತ್ತಾಯಿಸಲಾಗುತ್ತಿದೆ ಜಿಲ್ಲಾ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ನೂತನ ಅಧ್ಯಕ್ಷ ಡಾ.ರಾಜು ಕಂಬಾರ ಹೇಳಿದರು .
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಅವರು ಮಾತನಾಡಿ, ರಾಜ್ಯಮಟ್ಟದಲ್ಲಿ ಹಿರಿಯ ವಿಧಾನ ಪರಿಷತ್ ಸದಸ್ಯ ಆಯನೂರ ಮಂಜುನಾಥ ಅವರ ಗೌರವಾಧ್ಯಕ್ಷತೆ ಹಾಗೂ ಎಚ್.ಕೊಟ್ರೇಶ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಅಸ್ತಿತ್ವದಲ್ಲಿ ತರಲಾಗಿದೆ ಎಂದರು.
ರಾಜ್ಯಾದ್ಯAತ ಹಿತರಕ್ಷಣಾ ಸಮಿತಿಯನ್ನು ಸಕ್ರೀಯಗೊಳಿಸುವ , ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಲು ಬೆಳಗಾವಿ ಜಿಲ್ಲಾ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯನ್ನು ರಚಿಸಲಾಗಿದೆ.
ಜಿಲ್ಲೆಯಲ್ಲಿ ಸುಮಾರು ೨೩ ಸರ್ಕಾರಿ ಕಾಲೇಜುಗಳಿದ್ದು, ಸುಮಾರು ೮೦೦ ಕ್ಕಿಂತಲೂ ಹೆಚ್ಚಿಗೆ ಜಿಲ್ಲೆಯಲ್ಲಿ ಅತಿಥಿ ಉಪನ್ಯಾಸಕರು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕರು ನೌಕರರು ವಯೋಮಿತಿ ಕಳೆದುಕೊಂಡಿದ್ದು , ಕೇವಿಡ್ -೧೯ ರ ಹಿನ್ನೆಲೆಯಲ್ಲಿ ಹಲವಾರು ಅತಿಥಿ ಉಪನ್ಯಾಸಕರು ಕಾಲೇಜು ಬಂದ್ ಆಗಿ ಕೆಲಸವಿಲ್ಲದೆ ಸಾವನಪ್ಪಿದ್ದಾರೆ. ಕೂಲಿ ನಾಶ ಕಲಸ ಮಾಡುತ್ತಿದ್ದಾರೆ. ಇವರೆಲ್ಲರ ಹಿತಕಾಪಾಡುವ ನಿಟ್ಟಿನಲ್ಲಿ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಂತ ಹಾಗೂ ರಾಜ್ಯಾಧ್ಯಂತ ಕಾರ್ಯೋನ್ಮುಖವಾಗಲಿದೆ ಎಂದ ಜಿಲ್ಲಾಧ್ಯಕ್ಷರು , ಜಿಲ್ಲೆಯಲ್ಲಿ ಎಲ್ಲ ಅತಿಥಿ ಉಪನ್ಯಾಸಕರು ಒಕ್ಕಟ್ಟಿನಿಂದ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಹೋರಾಟಗಳನ್ನು ಕೈಗೊಳ್ಳಲಿದ್ದೇವೆ. ಕಾಲೇಜು – ತಾಲೂಕು ಮಟ್ಟದಿಂದ ಆತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯನ್ನು ಬಲಪಡಿಸಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ರವಿ ಮೆಟಗೇರಿ, ನಿಂಗಪ್ಪ ಸಂಗ್ರೇಜಿಕೊಪ್ಪ , ವಿಠ್ಠಲ ಮಾಳವದೆ, ಡಾ. ಜಯಶ್ರೀ ಹಂಚಿನಮನಿ, ನೀಲಕಂಠ ಬೂಮನ್ನವರ, ಅಡಿವೇಶ ಇಟಗಿ ಹಾಗೂ ಇತರರು ಇದ್ದರು.

loading...