ಅಥಣಿಯಲ್ಲಿ ಕಿಚ್ಚ ಸುದೀಪ ಅಭಿನಯದ ದಿ ವಿಲನ್ ಚಿತ್ರೀಕರಣ

0
245

ಕನ್ನಡಮ್ಮ ಸುದ್ದಿ
ಚಿಕ್ಕೋಡಿ ೨೨: ಕನ್ನಡದ ಬಹು ನಿರೀಕ್ಷಿತ ಚಲನ ಚಿತ್ರ ದಿ ವಿಲನ್ ಚಿತ್ರೀಕರಣ ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದಲ್ಲಿ ನಡೆಯಿತು.
ಇದು ಈ ಗ್ರಾಮದಲ್ಲಿ ನಡೆಯಿತ್ತಿರುವ ಎರಡನೆ ಚಿತ್ರದ ಚಿತ್ರಿಕರಣವಾಗಿದ್ದು ಈ ಮೊದಲು ಪುನಿತ್ ರಾಜ್ ಕುಮಾರ್ ಅಭಿನಯದ ರಣವಿಕ್ರಮ್ ಚಿತ್ರವನ್ನು ಚಿತ್ರೀಕರಿಸಲಾಗಿತ್ತು.
ಸದ್ಯ ನಟ-ನಿರ್ದೇಶಕ ಪ್ರೇಮ್ ನಿರ್ದೇಶನದಲ್ಲಿ ನಟ ಸುದೀಪ್ ಹಾಗೂ ಶಿವ ರಾಜಕುಮಾರ ಅಭಿನಯದ ದಿ ವಿಲನ್ ಚಿತ್ರವನ್ನು ಚಿತ್ರೀಕರಿಸಲಾಗುತ್ತಿದೆ.
ಇಂದು ನಡೆದ ಚಿತ್ರೀಕರಣದಲ್ಲಿ ನಟ ಕಿಚ್ಚ ಸುದೀಪ್ ಪಾಲ್ಗೊಂಡಿದ್ದು ಚೇಜಿಂಗ್ ಮತ್ತು ಫೈಟಿಂಗ್ ದೃಶ್ಯಗಳನ್ನು ಸೆರೆಹಿಡಿಯಲಾಯಿತು.
ಕನ್ನಡದ ಬಹುನಿರೀಕ್ಷೆಯ ಚಿತ್ರ ಇದಾಗಿದ್ದು ಉತ್ತರಕರ್ನಾಟಕದಲ್ಲಿ ಅದರಲ್ಲೂ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿ ನಡೆಯುತ್ತಿರುವ ಚಿತ್ರೀಕರಣ ನೋಡಲು ಸಾರ್ವಜನಿಕರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ.
ಈ ವೇಳೆ ಮಾತನಾಡಿದ ನಿರ್ದೆಶಕ ಪ್ರೆಮ್ ಬಹುದಿನಗಳ ನಿರೀಕ್ಷೆಯಲ್ಲಿ ಚಿತ್ರ ಮೂಡಿ ಬರುತ್ತಿದ್ದು ಉತ್ತರ ಕರ್ನಾಟಕ ಜನರ ಪ್ರೀತಿ ಸಹಕಾರ ಅದ್ಬುತವಾಗಿದೆ.ಎಂದರು
ಇನ್ನೂ ಚಿತ್ರೀಕರಣ ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು ತಮ್ಮ ಸಂತಸ ಹಂಚಿಕೊಂಡು ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣ ನಡೆಸಿದ್ದು ಖುಷಿ ಕೊಟ್ಟಿದೆ.ರಾಮತಿರ್ಥ ಚಿತ್ರೀಕರಣ ಕೆಂದ್ರವಾಗಿದ್ದು ಇಷ್ಟು ಸುಂದರವಾಗಿ ಚಿತ್ರಿಕರಣ ನಡೆಸುವ ತಾಣವಾಗಿದೆ ಎಂದು ಈಗ ತಿಳಿದು ಬರುತ್ತಿದೆ ಎಂದರು.

loading...