ಅಥಣಿಯಲ್ಲಿ ರೈತ ಹುತಾತ್ಮ ದಿನಾಚರಣೆ

0
31

ಅಥಣಿಯಲ್ಲಿ ರೈತ ಹುತಾತ್ಮ ದಿನಾಚರಣೆ

ಕನ್ನಡಮ್ಮ ಸುದ್ದಿ
ಅಥಣಿ 22: ದೇಶದ ಬೆನ್ನೆಲುಬಾದ ರೈತ, ರೈತ ಸಂಘಟನೆಗಳು ತಮ್ಮ ಬೇಡಿಕೆಗಾಗಿ ನಿರಂತರ ಹೋರಾಟ ಮಾಡುತ್ತಿದ್ದರೂ ಸರಕಾರ ಗಮನ ಹರಿಸುತ್ತಿಲ್ಲ. ರೈತರ ಗೋಳು ನಿಲ್ಲುತ್ತಿಲ್ಲ ಎಂದು ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕಾಧ್ಯಕ್ಷ ಮಹಾದೇವ ಮಡಿವಾಳ ವಿಷಾದ ವ್ಯಕ್ತಪಡಿಸಿದರು.
ಅಥಣಿಯಲ್ಲಿ ಹಮ್ಮಿಕೊಂಡಿದ್ದ ರೈತ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ರೈತರ ಹೆಸರಿನಲ್ಲಿ ಪ್ರಮಾಣ ಮಾಡುವ ಜನಪ್ರತಿನಿಧಿಗಳು ರೈತಪರ ಕಾಳಜಿ ವಹಿಸುತ್ತಿಲ್ಲ ಎಂದರು.
ಈ ಸಮಯದಲ್ಲಿ ಕರವೇ ಅಧ್ಯಕ್ಷ ಅಣ್ಣಾಸಾಹೇಬ ತೆಲಸಂಗ, ಸಿದ್ಧಾರ್ಥ ಸೀಮಗೆ, ಪ್ರಕಾಶ ಪೂಜಾರಿ ಮಾತನಾಡಿದರು. ಇಲ್ಲಿಯ ಶಿವಯೋಗಿ ಸರ್ಕಲ್‍ದಿಂದ ಆರಂಭಗೊಂಡ ಪಾದಯಾತ್ರೆ ಅಂಬೇಡ್ಕರ ವೃತ್ತದಲ್ಲಿ ಸಮಾವೇಶಗೊಂಡು, ಹುತಾತ್ಮ ರೈತ ಮುಖಂಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಸಿ ವಿತರಣೆ ಮಾಡಲಾಯಿತು.
ಲಸೋಮಲಿಂಗ ಗುಡ್ಡಾಪೂರ, ಅಶೋಕ ಗೌರಗೊಂಡ, ರಾಜು ಪೂಜಾರಿ, ಜಗನ್ನಾಥ ಭಾಮನೆ, ಅನ್ನಪ್ಪ ಉದ್ದಾನಗೋಳ, ಸಿವಾನಂದ ಹಾವರೆಟಟಿ, ಭೆಬಿಜಾನ ಮುಲ್ಲಾ ಅಡಿವೆಪ್ಪ ಆಜೂರ, ಸುಭಾಸ ಮಾಧರ , ಗಂಗವ್ವ ಕೋಳಿ, ಮೊದಲಾದವರು ಭಾಗವಹಿಸಿದ್ದರು.
..

loading...