ಅಥಣಿ : 18 ರಂದು ಅದ್ದೂರಿ ವಾಲ್ಮೀಕಿ ಜಯಂತಿಗೆ ನಿರ್ಧಾರ

0
13

ಅಥಣಿ 12: ಕರ್ನಾಟಕ ಘನಸರ್ಕಾರದ ನಿರ್ದೇಶನದ ಮೇರೆಗೆ ಕಳೆದ ನಾಲ್ಕು ವರ್ಷಗಳಿಂದ ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ನಡೆಸಲು ತಹಶೀಲ್ದಾರ ಕಾರ್ಯಾಲಯದ ವತಿಯಿಂದ ಆಚರಿಸುತ್ತಾ ಬರಲಾಗುತ್ತಿದ್ದು, ಪ್ರತಿವರ್ಷದಂತೆ ಈ ವರ್ಷವೂ ಕೂಡ ಬರುವ ದಿ.18 ರಂದು ಸೀಗೆ ಹುಣ್ಣಿಮೆ ದಿನದಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಓಚಿತ್ಯ ಪೂರ್ಣವಾಗಿ ಆಚರಣೆ ಮಾಡುವ ಕುರಿತು ಪೂರ್ವಭಾವಿ ಸಿದ್ಧತಾ ಸಭೆಯು ಜರುಗಿತು.

ಪಟ್ಟಣದ ಮಿನಿ ವಿಧಾನಸೌಧದ ಸಭಾ ಭವನದಲ್ಲಿ ಗುರುವಾರ ಸಂಜೆ ನಡೆದ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ರಮೇಶ ಸಿಂದಗಿ ಮಾತನಾಡಿ, ಈ ಸಲದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವುದಾಗಿ ತಮ್ಮ ಸಮಾಜದವರು ನಿರ್ಣಯಿಸಿದ್ದು, ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಸ್ಥಳೀಯ ಶಾಸಕರು ಸೇರಿದಂತೆ ಇನ್ನುಳಿದ ಎಲ್ಲ ಪಕ್ಷಗಳ ಮುಖಂಡರುಗಳನ್ನು ದಿ:30 ರಂದು ಆಹ್ವಾನಿಸಿ ಜಯಂತಿಯನ್ನು ಅದ್ದೂ ರಿಯಿಂದ ಆಚರಿಸುವುದಾಗಿ ತಿಳಿಸಿದ ಅವರು, ಈ ಕಾರ್ಯಕ್ರಮಕ್ಕೂ ತಹಶೀಲ್ದಾರ ಕಾರ್ಯಾಲಯದ ಸಹಕಾರ ಕೋರಿದರು.

ಅದೇ ರೀತಿ ಪ್ರತಿ ಗ್ರಾಮ ಪಂಚಾಯತ್ ಮತ್ತು ಸರ್ಕಾರಿ ಹಾಗೂ ಅರೆ ಸರ್ಕಾರಿ ಶಾಲೆಗಳಲ್ಲಿ ವಾಲ್ಮೀಕಿ ಜಯಂತಿಯನ್ನು ಕಡ್ಡಾಯ ವಾಗಿ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಪ್ರಭಾರಿ ತಹಶೀಲ್ದಾರ ಎ.ಎಲ್. ಅದಾಡೆ ಮಾತನಾಡಿ, ಬರುವ 18 ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಾಂಕೇತಿ ಕವಾಗಿ ಆಚರಿಸಲಾಗುವುದುಈ ಸಮ ಯದಲ್ಲಿ ಸ್ಥಳೀಯ ಶಾಸಕರಿಂದ ಪೂಜೆ ನೆರವೇರಿಸಲಾಗುವುದು.

ದಿ:30ರಂದು ಜರುಗಲಿರುವ ಸಮಾರಂಭಕ್ಕೆ ತಾಲ್ಲೂಕಾಡಳಿತ ಪ್ರೌತ್ಸಾಹಿಸುವುದಾಗಿ ಹಾಗೂ ಪ್ರಟೊಕಾಲ್ ಪ್ರಕಾರ ಜರುಗಿಸುವಂತೆ ವಿನಂತಿಸಿದರು.

ಪ್ರತಿ ಇಲಾಖೆಯಲ್ಲಿ ಮಹರ್ಷಿ ವಾಲ್ಮೀಕಿಯ ಭಾವಚಿತ್ರವನ್ನಿಟ್ಟು ಕಡ್ಡಾಯವಾಗಿ ಪೂಜೆ ಸಲ್ಲಿಸದೆ ಹೋದರೆ ಅಂತಹ ಇಲಾಖೆಗಳ ಅಧಿಕಾರಿಗಳಿಂದ ಮೇಲಾಧಿಕಾರಿಗಳಿಗೆ ತಿಳಿಸಿ ಅವರ ಮೇಲೆ ಯೋಗ್ಯ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಪಾಂಡುರಂಗ ಐಹೊಳೆ, ಸಹದೇವ ನಾಯಿಕ, ಗುರುಬಸವ ನಾಗಪ್ಪಗೋಳ, ಅಪ್ಪಾಸಾಬ ದನದಮನಿ, ಬಾಳು ನಾಯಿಕ, ಶ್ರೀಧರ ಭೋಜಣ್ಣವರ, ಭೀಮಶಿ ನಾಯಿಕ, ಬಿ.ವಾಯ್. ಯಾದವಾಡ, ಆರ್.ಪಿ. ಖಾನಾಪೂರೆ, ಪಿ.ಪಿ. ನೀಲಕಂಠಮಠ, ಸಿದ್ದಾರ್ಥ ಸಿಂಗೆ ಸೇರಿದಂತೆ ಅನೇಕರು ಇದ್ದರು.

loading...

LEAVE A REPLY

Please enter your comment!
Please enter your name here