ಅದೆಂಥ ಪವರ್….? ಬೆಳಗಿನ ಜಾವದ ಸಕ್ಕರೆಗನಸೇ…..

0
51

ಚುಮು ಚುಮು ನಸುಕಿನಲ್ಲಿ,ಬೆನ್ನ ಮೂಳೆಯಾಳದಲ್ಲಿ ಚಳಿ ಹೆಪ್ಪುಗಟ್ಟಿ ಹಾಸಿಗೆ ಬಿಟ್ಟು ಎದ್ದೇಳಲಾರದ ಸ್ಥಿತಿಯಲ್ಲಿ ನಾನಿರುವಾಗ, ತಾಯಿ,ಷಿ ಕಾಲೇಜಿಗೆ ಲೇಟಾಯ್ತು ಮಗಾ, ಓದೋ ಹುಡುಗರು ಹೆಚ್ಚು ಹೊತ್ತು ಮಲಗಬಾರದುಷಿ ಎಂಬ ತನ್ನ ಹಳೆಯ ರಾಗವನ್ನೇ ಹೊಸ ಟ್ಯೂನ್ನಲ್ಲಿ ಬಡಬಡಿಸಿದಾಗ, ಹಾಳಾದ ಈ ಬೆಳಗು ಇಷ್ಟು ಬೇಗ ಯಾಕಾದರೂ ಆಗುತ್ತೌ ಎಂದು ಶಪಿಸುತ್ತಾ ಕಾಲೇಜಿಗೆ ರೆಡಿಯಾಗಲು ಅಣಿಯಾಗುತ್ತೇನೆ. ರಾತ್ರಿ ಪೂರಾ ಕನಸಿಗೆ ಬಾರದ ನೀನು ಬೇಳಗಿನ ಜಾವದ ಸಕ್ಕರೆ ನಿದ್ರೆಯಲ್ಲಿ  ಮೆಲ್ಲಗೆ ಇಣುಕಿ, ತೋಳಲ್ಲಿ ಬಂಧಿಯಾಗಿ, ಹೂಮುತ್ತನೊಂದ ಕೆನ್ನೆಗೆ ಕೊಟ್ಟು, ಕಾಲೇಜಿನಲ್ಲಿ ಕಾಯ್ತಾ ಇರ್ತೀನಿ ಬೇಗ ಬಾ ಸೂಚನೆ ನೀಡಿ ಮಾಯವಾದದ್ದನ್ನು ನೆನಪಿಸಿಕೊಂಡು ಯಾವಾಗ ನಿನ್ನ ಮುಖ ಕಂಡೆನೋ ಎಂಬ ಧಾವಂತದಲ್ಲಿ ಕಾಲೇಜಿನತ್ತ ಧಾವಿಸಿ ಬರುತ್ತೇನೆ.

ಎರಡು ಕಂಗಳಿಗೆ ಮುತ್ತು ನೀಡುವೆನು

                                    ನೀನಿಲ್ಲಿ ಬರಬಾರದೆ…

                                    ಎಲ್ಲ ಕನಸನ್ನು ಒಂದೇ ನೆರಳಲ್ಲಿ

                                    ಸಾಲಾಗಿ ಇಡಬಾರದೇ….

ಕಾಲೇಜಿಗೆ ಎದುರಿನ ಕಲ್ಲು ಬೆಂಚುಗಳ ಮೇಲೆ ಎಲ್ಲೆಂದರಲ್ಲಿ, ಜೋಡಿಹಕ್ಕಿಗಳಂತೆ ಕುಳಿತು, ಪಿಸುಮಾತಿನಲ್ಲಿ ಪ್ರೀತಿಗರೆಯುತ್ತಾ ಕುಳಿತ ಹುಡುಗ-ಹುಡುಗಿಯರು ನನ್ನ ಕಂಡು ಹುಸಿ ನಕ್ಕಂತಾಗುತ್ತದೆ. ಲಿನಿನಗೆಲ್ಲಿಂದ ಬರಬೇಕು ಇಂಥ ಧೈರ್ಯಳಿ ಎಂದು ಗೇಲಿ ಮಾಡಿದಂತೆನಿಸುತ್ತದೆ ಅವರ ನಗೆ. ನೀನು ಇದಿರು ಸಿಕ್ಕಾಗ ಕಣ್ಣಿಗೆ ಕಣ್ಣು ಕೂಡಿಸಿ,ಎರಡು ಮಾತು ಆಡುವದರಲ್ಲಿಯೇ ಬೆವರಿ ನೀರಾಗಿರುತ್ತೇನೆ.ಮಾತು ತೊದಲಿಸುತ್ತಿರುತ್ತದೆ,ಕಾಲುಗಳು ನಡಗು ತ್ತಿರುತ್ತದೆ,ಯಾರಾದರೂ ನೋಡಿದರೆ ಏನು ಗತಿ ಎಂಬ ಹೆದರಿಕರ ಒಳಗೊಳಗೆ ನಡುಕ ಹುಟ್ಟಿಸಿರುತ್ತದೆ. ಅದೆಷ್ಟು ಸಲ ನೀನು ಹೇಳಿಲ್ಲ ಶಿಳೊ ಆಕಾಶ್ ಒಂದ್ಸಾರಿ ಯಾದ್ರೂ ನನ್ನ ಜೊತೆ ಕೂತು ಚೆನ್ನಾಗಿ ಮಾತಾಡೋ, ಯಾವುದಾದ್ರು ಒಳ್ಳೇ ಫಿಲ್ಮ್ಗೆ ಹೋಗೋಣ, ಪಾರ್ಕ ನಲ್ಲಿ ಸುತ್ತಾ ಡೋಣ, ಐಸ್ಕ್ತ್ರೀಮ್ ತಿನ್ನೌಣ. ನೀನು ಈ ರೀತಿ ಪುಕ್ಕಲನ ತರಹ ಹೆದರತಾ ಇದ್ರೆ ನಮ್ಮ ಪ್ರೀತಿ ಮುಂದು ವರಿಯೋಕೆ ಹೇಗೆ ಸಾಧ್ಯ?ಷಿ ಅಂತ. ಆದರೆ ಐಶು, ಅವನ್ನೆಲ್ಲ ನೆನಪಿಸಿ ಕೊಂಡರೆ ತುಂಬಾ ಭಯವಾಗುತ್ತೆ ಕಣೇ. ನಮ್ಮಪ್ಪ ಮೊದಲೇ ದೂರ್ವಾಸಮುನಿ ಅವನ ಕಣ್ಣಿಗೇನಾದ್ರೂ ಬಿದ್ರೆ ಅಷ್ಟೇ.ಇರು ಒಂದಲ್ಲ ಒಂದಿವ್ಸ ನಿನ್ನ ಕೈಹಿಡ್ಕೊಂಡು ಊರೆಲ್ಲ ಸುತ್ತಿಸ್ತೀನಿ ಅಂತ ಹೇಳೋವಾಗ ನನ್ನ ಕೊಂಕು ನಗೆ ನನ್ನ ಅಣಕಿಸುತ್ತಿರುತ್ತೆ.

ಅದೊಂದು ದಿನ ನೀನು ಹಿಂಡು ಗೆಳತಿಯರ ಮಧ್ಯೆ ತಮಾಷೆ ಮಾಡುತ್ತಾ ಬರುತ್ತಿರುವಾಗ ಅದೆಲ್ಲಿತ್ತೌ ಧೈರ್ಯ ಲಿ ಐಶ್ ಸ್ವಲ್ಪ ಮಾತಾಡ್ಬೇಕು ಬರ್ತೀಯಾಳಿ ಅಂತ ಕೇಳಿಬಿಟ್ಟೆ. ಗೆಳತಿಯರ ಗುಂಪು ಅಚ್ಚರಿಗೊಂಡಿದ್ದಂತೂ ಸತ್ಯ. ನಿನ್ನಂಥ ನೀನು ಕೂಡಾ ಬೆಕ್ಕಸ ಬೆರಗಾಗಿ ನನ್ನ ಬೆನ್ನು ತಟ್ಟಿದ್ದು ತುಂಬಾ ಖುಷಿ ನೀಡಿತು. ಅವತ್ತು ನೀ ಕೊಟ್ಟ ಮುತ್ತುಗಳಿಗೆ ಲೆಕ್ಕವೇ ಸಿಗಲಿಲ್ಲ. ಅದಾದ ಮೇಲೆ ನೋಡು ಇಡೀ ಕಾಲೇಜೇ ನಮ್ಮನ್ನು ಕಂಡು ಮಾತಾಡಿಕೊಂಡದ್ದು ಸುಳ್ಳಲ್ಲ. ಎಲ್ಲಿ ಹೋದರೂ ನಿನ್ನ ಕೈಗಳನ್ನು ಗಟ್ಟಿಯಾಗಿ ಅವುಚಿಕೊಂಡೇ ಇರುತಿದ್ದ ನಾನು ತುಂಬಾ ಧೈರ್ಯಶಾಲಿಯಾಗಿಬಿಟ್ಟಿದ್ದೆ. ಪ್ರೀತಿ ಇಷ್ಟೆಲ್ಲ ಧೈರ್ಯ ಕೊಡುತ್ತಾ? ಎಂಬ ಪ್ರಶ್ನೆಗೆ ನೀನು ನಕ್ಕು ಮೌನವಾಗಿದ್ದೆ.

ನೋವನ್ನು ನುಂಗೋ ವಿದ್ಯೆ ಕಲಿಸಿ ಹೋದೆ ನೀನು

                        ಏನೆಂದು ನಿನ್ನ ಕರೆಯಲಿ…..

ಕಾಲೇಜು ದಿನಗಳು ಮುಗಿಯುತ್ತಾ ಬಂದ ಹಾಗೆ ನಿನ್ನದೊಂದೇ ವರಾತ. ಮನೆಗೆ ಬಂದು ಅಪ್ಪನ ಹತ್ರ ಮಾತಾಡು. ನೀ ಹೇಳಿದ್ರೆ ಅಪ್ಪ ಖಂಡಿತ ಒಪ್ತಾರೆ. ಐಶು ಈಗ ತಾನೆ ಡಿಗ್ರಿ ಮುಗಿದಿದೆ.ಒಂದೆರಡು ವರ್ಷ ಸುಮ್ಮನಿರು. ಎಲ್ಲಾದ್ರೂ ಜಾಬ್ಗೆ ಅಪ್ಲ್ಯೆ ಮಾಡ್ತೀನಿ. ಕೆಲ್ಸ ಸಿಕ್ಕ ನಂತರ ನಾನೇ ಖುದ್ದಾಗಿ ಬಂದು ನಿನ್ನಪ್ಪನ ಹತ್ತಿರ ಮಾತಾಡ್ತೀನಿ. ನಮ್ಮನೆ ಬೆಳಕನ್ನ ನಮ್ಮನೆಗೆ ಕಳಿಸಿಕೊಡಿ ಎಂದು ಕೇಳ್ತೀನಿ ಅಂತ ನನ್ನ ಒಪ್ಪಿಸೋದರಲ್ಲಿ ಸಾಕುಸಾಕಾಗಿ ಹೋಯ್ತು. ಈಗ ಕೆಲಸದ ಶೋಧನೆಯಲ್ಲಿ ನಾನಿದ್ದೇನೆ. ಕೆಲಸ ಸಿಕ್ಕೇ ಸಿಗುತ್ತದೆಂಬ ನಂಬಿಕೆಯೂ ಕೂಡಾ ನನಗಿದೆ.ಇನ್ನೇನು ನಿಮ್ಮನೆಗೆ ಬರೋದೊಂದೇ ಬಾಕಿ. ಪ್ಲೀಸ್ ಸ್ವಲ್ಪ ಕಾಯು…..

-ನಿನ್ನವನು

ನಾಗೇಶ್ ಜೆ.ನಾಯಕ

ಶಿಕ್ಷಕರು ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆ

ಉಡಿಕೇರಿ-591104ಬೈಲಹೊಂಗಲ ತಾಲ್ಲೂಕು,

 ಬೆಳಗಾವಿ ಜಿಲ್ಲೆ. ಮೊ. 9900817716

 

loading...

LEAVE A REPLY

Please enter your comment!
Please enter your name here