ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ

0
49

ಕಲಘಟಗಿ : ತಾಲೂಕಿನ ಜಿನ್ನೂರ ಗ್ರಾ.ಪಂ. ಅಧ್ಯಕ್ಷರು ಯಾವುದೇ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲವೆಂದು ಸ್ಪಷ್ಡೀಕರಣ ನೀಡಿದ್ದಾರೆ.

ಜಿನ್ನೂರು ಗ್ರಾ.ಪಂ. ಸದಸ್ಯರು  ತಾವು ಅಧಿಕಾರ ದುರಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ತಮ್ಮ ಆಡಳಿತ ಅವಧಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ತ್ರೀಯ ಉದ್ಯೌಗ ಖಾತ್ರಿ ಯೋಜನೆಯಡಿ  ಗ್ರಾ.ಪಂ. ವ್ಯಾಪ್ತಿಯ ಮಲಕನಕೊಪ್ಪ, ಜಿನ್ನೂರ ಮತ್ತು ದ್ಯಾವನಕೊಂಡ ಗ್ರಾಮಗಳಲ್ಲಿ ಮೂರು ಕೋಟಿ ರೂಪಾಯಿಗಳ ಅನುದಾನದ ಕಾಮಗಾರಿಗಳನ್ನು ಕೈಗೊಂಡು ಕಾಂಕ್ರೀಟ್ ರಸ್ತೆ, ಜಮೀನುಗಳ ರಸ್ತೆ, ಸಮರ್ಪಕ ಶುದ್ಧ ಕುಡಿಯುವ ನೀರಿನ ಪೂರೈಕೆ, ಬೀದಿ ದೀಪಗಳ ವ್ಯವಸ್ಥೆ, ಪಂಚಾಯತ ರಾಜ್ ನಿಯಮನುಸಾರ ವಾರ್ಡ ಸಭೆ, ಗ್ರಾಮ ಸಭೆ, ಸಾಮಾಜಿಕ ಲೆಕ್ಕ ಪರಿಶೋಧನೆಗಳನ್ನು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಒಂದು ನೂರಕ್ಕೂ ಅಧಿಕ ವೈಯಕ್ತಿಕ ಶೌಚಾಲಯ ನಿರ್ಮಿಸಲಾಗಿದೆ. ಎಲ್ಲ ಆಭಿವೃದ್ದಿ ಕಾಮಗಾರಿಗಳು ಪಾರದರ್ಶಕವಾಗಿ ನಡೆದಿದ್ದು, ಸುಳ್ಳು ಬಿಲ್ಲು ಸೃಷ್ಟಿಸಿದ್ದಾರೆ ಎಂದು  ಗ್ರಾ.ಪಂ. ಸದಸ್ಯ ಶ್ರೀಕಾಂತ ಪಾಟೀಲ ಮಾಡಿರುವ ಆರೋಪದಲ್ಲಿ ಯಾವದೇ ಹುರಳಿಲ್ಲ ತಾವು ಎಲ್ಲ ತನಿಖೆಗೆ ಸಿದ್ಧ ಎಂದು ಗ್ರಾ.ಪಂ. ಅಧ್ಯಕ್ಷೆ ಕಮಲವ್ವ ಎನ್ ಕುರಿಯವರ ಸ್ಪಷ್ಟೀಕರಣ ನೀಡಿದ್ದಾರೆ.

loading...

LEAVE A REPLY

Please enter your comment!
Please enter your name here