ಅನಂತಕುಮಾರ ಹೆಗಡೆ ನಿಜವಾದ ಪೈರ್ ಬ್ರಾಂಡ್: ನಟಿ ತಾರಾ

0
5

ಕನ್ನಡಮ್ಮ ಸುದ್ದಿ-ಮುಂಡಗೋಡ: ಕರ್ನಾಟಕದ ನಿಜವಾದ ಪೈರ್ ಬ್ರಾಂಡ್ ಅನಂತಕುಮಾರ ಹೆಗಡೆ ಎಂದು ಚಿತ್ರ ನಟಿ ತಾರಾ ಹೇಳಿದರು.
ಶನಿವಾರ ಸಂಜೆ ಇಲ್ಲಿಯ ವಿವೇಕಾನಂದ ಬಯಲು ರಂಗಮಂದಿರದಲ್ಲಿ ಉತ್ತರಕನ್ನಡ ಲೋಕಸಭಾ ಕ್ಷೆÃತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಅವರ ಪರವಾದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಭಾಷಣದಲ್ಲಿ ಅನಾಚಾರ, ಅತ್ಯಾಚಾರ ಹಾಗೂ ದೌರ್ಜನ್ಯವನ್ನು ಖಂಡಿಸುವ ನಿಟ್ಟಿನಲ್ಲಿ ಅನಂತಕುಮಾರ ಮಾತನಾಡಿದರೆ ಅದು ವಿವಾದಿತ ಭಾಷಣ ಎಂದು ಬಿಂಬಿಸಲಾಗುತ್ತದೆ. ಧರ್ಮದ ಭಾಷಣ ಮಾಡುತ್ತಾರೆ ಎಂಬ ಆಪಾದನೆ ಮಾಡಲಾಗುತ್ತದೆ. ನಮ್ಮ ಧರ್ಮದ ಬಗ್ಗೆ ಭಾಷಣವನ್ನು ಹಿಂದುಸ್ತಾನದಲ್ಲಿ ಬಿಟ್ಟು ಪಾಕಿಸ್ಥಾನಕ್ಕೆ ಹೋಗಿ ಮಾಡಲಾಗುತ್ತದೆಯೇ? ನಮ್ಮ ಧರ್ಮದ ಬಗ್ಗೆ ನಮಗೆ ಅಭಿಮಾನ ಇರಲೇಬೇಕು ಎಂದ ಅವರು, ಉತ್ತರಕನ್ನಡ ಮಲೆನಾಡು, ಬಯಲು ನಾಡು ಹಾಗೂ ಕಡಲ ನಾಡಿನಿಂದ ಕೂಡಿದೆ. ಇಲ್ಲಿಂದಲೇ ಗೆಲುವಿನ ನಗೆ ಬೀರಬೇಕು. ಮತ ಹಾಕುವುದು ಒಂದು ಕ್ಷಣ ದೇಶಕ್ಕಾಗಿ ಮತ ಹಾಕಬೇಕು. ಈ ಜಿಲ್ಲೆಯಲ್ಲಿ ಕಾಂಗ್ರೆಸ ತನ್ನ ಚಿಹ್ನೆಯನ್ನೆÃ ಕಳೆದುಕೊಂಡಿದೆ. ಅನಂತಕುಮಾರ ವಿರುದ್ದ ಗೆಲ್ಲಲಾಗದು ಎಂದು ತಿಳಿದೇ ಈ ಕ್ಷೆÃತ್ರವನ್ನು ಜೆಡಿಎಸ್ ಗೆ ಧಾರೆ ಎರೆದಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು. ಅರಣ್ಯ ಕಾಯ್ದೆ ಬಗ್ಗೆ ಸಂಸದನಲ್ಲಿ ಪ್ರತಿಪಾದಿಸಿದವರೇ ಅನಂತಕುಮಾರ ಹೆಗಡೆಯವರು ಅದನ್ನು ಯಾರು ಹೇಳುವುದಿಲ್ಲ. ಏನು ಸಾದನೆ ಮಾಡಲಾಗದವರು ನೆಲ ಡೊಂಕು ಎಂಬಂತೆ ವಿರೋದ ಪಕ್ಷದವರಿಂದ ಕೇವಲ ಅಪಪ್ರಚಾರ ಮತ್ರ ಮಾಡಲಾಗುತ್ತಿದೆ. ಈ ಬಾರಿ ಕೂಡ ಅನಂತಕುಮಾರ ಹೆಗಡೆ ಅತಿ ಹೆಚ್ಚು ಅಂತರದಿಂದ ಗೆಲುವು ಸಾದಿಸಿ ಸಿಕ್ಸರ ಹೊಡೆಯಲಿದ್ದಾರೆ ಎಂದು ಹೇಳಿದರು.

ಅನಂತಕುಮಾರ ಹೆಗಡೆ ಮಾತನಾಡಿ, ಈ ಚುನಾವಣೆ ಕೇವಲ ಭಾಷಣದಿಂದ ನಡೆಯುತ್ತಿಲ್ಲ. ಬದಲಾಗಿ ಜನರ ಭಾವನೆಗಳಿಂದ ನಡೆಯುತ್ತಿದೆ. ಸಾಮಾನ್ಯ ಜನ ಕೂಡ ದೇಶಕ್ಕಾಗಿ ಮತ ಹಾಕಲು ಮುಂದಾಗಿದ್ದಾರೆ. ಇದಕ್ಕಿಂತ ಹೆಚ್ಚಿನ ಬದಲಾವಣೆ ದೇಶದಲ್ಲಿ ಇನ್ನಾವುದಿಲ್ಲ. ಇಲ್ಲಿವರೆಗೆ ಜಾತಿ, ಹಣದಿಂದ ರಾಜಕಾರಣ ನಡೆಯುತ್ತಿತ್ತು. ಆದರೆ ಈಗ ಎಲ್ಲ ಬದಲಾಗಿದೆ. ದೇಶಕ್ಕಾಗಿ ಮತದಾನ ನಡೆಯುತ್ತಿದೆ. ಇಂದಿನ ಪತ್ರಿಕೆಯಲ್ಲಿ ನಿಂಬೆ ಹಣ್ಣಿನ ಬೆಲೆ ಜಾಸ್ತಿಯಾಗಿದೆ ಎಂಬುವುದನ್ನು ಪತ್ರಿಕೆಯಲ್ಲಿ ಓದಿದೆ. ರಾಜ್ಯದಲ್ಲಿ ನಿಂಬೆ ಹಣ್ಣಿನ ಕುಟುಂಭದ ರಾಜಕಾರಣ ನಡೆಯುತ್ತದೆ. ೧೦೪ ಸ್ಥಾನ ಗಳಿಸಿದವರು ಹೊರಗೆ ಕುಳಿತರೆ ೩೭ ಸ್ಥಾನ ಗಳಿಸಿದವರು ಅಧಿಕಾರ ನಡೆಸುತ್ತಾರೆ. ೭೦ ವರ್ಷದಿಂದ ಹಣ ಹಾಗೂ ಜಾತಿ ಹೆಸರಿನಲ್ಲಿ ಪ್ರಜಾಪ್ರಭುತ್ವದ ಕತ್ತು ಹಿಸುಕಿ ಕಾಂಗ್ರೆಸ ಹಾಗೂ ಜನತಾ ದಳದವರು ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದ ಮೋದಿಯವರು ಇವರಿಗೆ ವಿರೋದಿಯಾಗಿದ್ದಾರೆ.
ಕಾರವಾರ ಕ್ಷೆÃತ್ರದ ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕ ವಿ.ಎಸ್.ಪಾಟೀಲ, ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ ನಾಯ್ಕ, ಮಹಿಳಾ ಮೋಚಾಧ್ಯಕ್ಷೆ ರೇಖಾ ಹೆಗಡೆ, ದುರೀಣ ಸಂತೋಷ ರಾಯ್ಕರ, ಪ್ರಮೋದ ಹೆಗಡೆ, ಬಸವರಾಜ ಓಶಿಮಠ, ಗುಡ್ಡಪ್ಪ ಕಾತೂರ, ಉಮೇಶ ಬಿಜಾಪುರ, ನಾಗಭೂಷಣ ಹಾವಣಗಿ, ರಾಮಕೃಷ್ಣ ಮೂಲಿಮನಿ, ರೇಖಾ ಅಂಡಗಿ, ಸುಮನ ಕುಲಕರ್ಣಿ, ಶಾಮಿಲಿ ಪಾಟಣಕರ, ಶಾಮಲಾ ಹೆಗಡೆ, ಗಣಪತಿ ಉಳವೇಕರ, ಉಷಾ ಹೆಗಡೆ, ಮಹೇಶ ಹೊಸಕೊಪ್ಪ, ರವಿ ಹಾವೇರಿ ಮುಂತಾದವರಿದ್ದರು. ಅಶೋಕ ಚಲವಾದಿ ನಿರೂಪಿಸಿದರು.

loading...