ಅನಕ್ಷರಸ್ತರನ್ನು ಅಕ್ಷರಸ್ತರಾಗಿ ಮಾಡಿ: ಭೀಮಸೇನ

0
10

ಕೆರೂರ : ಓದು ಬರಹ ಕಲಿಯದೆ ಇರುವವರಿಗೆ ಗುರುಗಳಾಗಿ ಅವರಿಗೆ ಹೊಸ ಬೆಳಕಿನತ್ತ ತಂದು ಅಕ್ಷರ ಜ್ಞಾನ ತುಂಬಿರಿ ಎಂದು ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಪಟ್ಟಣದ ಕಾಳಿದಾಸ ಪದವಿ ಮಹಾವಿದ್ಯಾಲಯದಲ್ಲಿ ಲೋಕ ಶಿಕ್ಷಣ ನಿರ್ದೆಶನಾಲಯ ಬೆಂಗಳೂರು, ಜಿಲ್ಲಾ ನಗರ ಸಾಕ್ಷರತಾ ಸಮಿತಿ ಬಾಗಲಕೋಟ, ತಾಲೂಕಾ ಸಮಿತಿ ವಾರ್ಡ ಸಾಕ್ಷರತಾ ಸಮಿತಿ,ಕಾಳಿದಾಸ ಜನಸೇವಾ ಟ್ರಸ್ಟ(ರಿ) ಸಹಯೋಗದಲ್ಲಿ೧೮-೧೯ನೇ ನಗರ ಕೊಳಚೆ ಪ್ರದೇಶ ಸಾಕ್ಷರತಾ ಬೋಧಕರ ತರಬೇತಿ ಕಾರ್ಯಗಾರದಲ್ಲಿ ಮಾತನಾಡುತ್ತ ಅಕ್ಷರ ಜ್ಞಾನದಿಂದ ವಂಚಿತರಾದವರಿಗೆ ಅಕ್ಷರ ಜ್ಞಾನ ನೀಡಿ ಅವರಿಗೆ ಓದಲು,ಬರೆಯಲು ಕಲಿಸಿರಿ ಎಂಥಾ ವ್ಯಕ್ತಿಯನ್ನು ಒಂದು ಸುಂದರವಾದ ರೂಪಗೋಳಿಸುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ಆದಕಾರಣ ಅನಕ್ಷರಸ್ತರಿಗೆ ಅಕ್ಷರದ ಬಗ್ಗೆ ವಿದ್ಯೆಯಿಂದ ಆಗುವ ಲಾಭವೇನು? ಎಂಬುದನ್ನು ಬೋಧಕ ತರಬೇತಿದಾರರು ನೀವು ಅವರಿಗೆ ತಿಳಿಹೇಳಬೇಕು ಎಂದು ಹೇಳಿದರು.

ತಾಲೂಕಾ ಸಾಕ್ಷರತಾ ಸಂಯೋಜಕರಾದ ವ್ಹಿ.ಪಿ.ದಾಸರ ಮಾತನಾಡುತ್ತ ಸರ್ಕಾರ ಇಂಥಾ ಯೋಜನೆಯನ್ನು ನೀಡಿದೆ ಇದರಿಂದ ಅಕ್ಷರ ಕಲಿತು ಈ ಯೋಜನೆಯ ಲಾಭ ಪಡೆಯಿರಿ ಎಂದರು.
ಈ ಸಂಧರ್ಬದಲ್ಲಿ ಆರ್.ಎಸ್.ಬಾಗವಾನ, ಎನ್.ಎಂ.ಹೋಟ್ಟಿ ಪ್ರಸ್ತಾವಿಕ ಮಾತನಾಡಿದರು. ಲಕ್ಷö್ಮಣ ಕಾರಿ,ಎಲ್.ಎಚ್.ಹೊಸಮನಿ, ಹುಲೂರ, ಹಡಪದ, ಶ್ರಿÃಧರ ಚಂದರಗಿ, ಮಹಾಂತೇಶ ಅಂಬಿಗೇರ, ದ್ರಾಕ್ಷಾಣಿ ಪೂಜಾರ, ಅಕ್ಷತಾ ಮಾದರ, ಶಾಲಿನಿ ಪೂಜಾರ, ಲಕ್ಷಿö್ಮ ಪೂಜಾರ, ಶಿಲ್ಪ ಗದ್ದನಕೇರಿ, ನೀಲಮ್ಮ ಪೂಜಾರ, ಅರ್ಚನಾ ಮತ್ತಿಕಟ್ಟಿ, ರೂಪಾ ಭಜಂತ್ರಿ, ಚೈತ್ರಾ ಮತ್ತಿಕಟ್ಟಿ, ಲಕ್ಷö್ಮಣ ಮಾದರ, ದಿಲೀಪ ಮಾದರ, ಪ್ರದೀಪ ಮಾದರ, ಸುದೀಪ ಮಾದರ ಇತರರು ಭಾಗವಹಿಸಿದರು.

loading...