ಅನುದಾನ ದುರುಪಯೋಗ: ಗ್ರಾಮಸ್ಥರಿಂದ ಪ್ರತಿಭಟನೆ

0
51

ನರಗುಂದ: ತಾಲೂಕಿನ ಚಿಕ್ಕನರಗುಂದ ಗ್ರಾಮದ ರೇವಣ ಸಿದೇಶ್ವರ ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಅನುದಾನವನ್ನು ಅಲ್ಲಿನ ಕಾರ್ಯದರ್ಶಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಸರ್ಕಾರದ ಹಾಗೂ ನಿಗಮದ ಲಕ್ಷಾತಂರ ರೂಪಾಯಿಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾಮದ ನೂರಾರು ಸದಸ್ಯರು, ಸಾರ್ವಜನಿಕರು ಸಂಘದ ಕಚೇರಿಗೆ ಮುತ್ತಿಗೆ ಹಾಕಿ ಕಾರ್ಯದರ್ಶಿ ಎಂ.ಎಸ್.ಕಲಹಾಳ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.

೧೯೫೦ ರಲ್ಲಿ ಸ್ಥಾಪಿತಗೊಂಡ ಈ ಸಂಘದಲ್ಲಿ ಈ ಮೊದಲು ೨೭೨ ಜನ ಷೇರು ಸದಸ್ಯರಿದ್ದರು. ೨೦೧೯ ರ ಜನೆವರಿ,೨೨ ರಂದು ಸಂಘದ ವ್ಯಾಪ್ತಿಯ ಬೇನಕನಕೊಪ್ಪ, ಸಂಕಧಾಳ, ಹಿರೇಕೊಪ್ಪ, ಕುರುಗೋವಿನಕೊಪ್ಪ ಗ್ರಾಮಗಳ ಒಟ್ಟು,೪೫೬ ಜನರಿಂದ ತಲಾ ೧೨೫ ರೂಪಾಯಿಗಳನ್ನು ಪಡೆದು ಹೊಸ ಷೇರು ಸದಸ್ಯರನ್ನು ಈ ಸಂಘಕ್ಕೆ ನೊಂದಣಿ ಮಾಡಿಸಿಕೊಳ್ಳಲಾಗಿದೆ.

ಆದರೆ, ಹೊಸದಾಗಿ ನೇಮಕಗೊಂಡ ಯಾವೊಬ್ಬ ಸದಸ್ಯರಿಗೂ ಷೇರು ಹೂಡಿಕೆ ಮಾಡಿಸಿಕೊಂಡ ಕುರಿತು ಯಾವುದೇ ದಾಖಲಾತಿ ಆದೇಶದ ಪ್ರತಿಯನ್ನು ನೀಡಿಲ್ಲ. ಸರ್ಕಾರದ ಉಣ್ಣೆ ಉತ್ಪಾದಕರ ನಿಗಮದಿಂದ ನೀಡುವ ಮೂರು ತಿಂಗಳ ಉದ್ಯೊÃಗ ತರಬೇತಿ ಮತ್ತು ಪ್ರತಿ ತಿಂಗಳು ನೀಡುವ ೪೫೦೦ ರೂಪಾಯಿ ಗೌರವಧನ, ಸ್ವ,ಉದ್ಯೊÃಗ ಕೈಗೊಳ್ಳುವ ಸದಸ್ಯರಿಗೆ ಉಣ್ಣೆ ಮತ್ತು ಉಣ್ಣೆ ನೇಯುವ ಚರಕದ ಯಂತ್ರಗಳನ್ನು ಕೊಟ್ಟಿಲ್ಲ.

ಷೇರು ಸದಸ್ಯತ್ವ ಹೊಂದಿದ ಸದಸ್ಯರಿಗೆ ಕುರಿ ಸಾಕಾಣಿಕೆಗೆ ಸಹಾಯಧನ, ಆಶ್ರಯ ಮನೆ, ಚುನಾವಣೆಯ ಗುರುತಿನ ಚೀಟಿ ಹಾಗೂ ಸಂಘದಿಂದ ೨೦ ಸಾವಿರ ರೂಪಾಯಿ ಸಾಲವನ್ನು ನೀಡುವಂತೆ ಅನೇಕ ನಿಯಮಗಳಿವೆ. ಆದರೆ, ಯಾವೊಬ್ಬ ಹೊಸ ಸದಸ್ಯರಿಗೂ ಈ ಸಂಘದ ಯೋಜನೆಗಳನ್ನು ನೀಡಿಲ್ಲ. ಯಾವುದಾದರೂ ಯೋಜನೆಯ ಸೌಲಭ್ಯವನ್ನು ಕೇಳಿದರೆ ಅಲ್ಲಿನ ಕಾರ್ಯದರ್ಶಿ ಎಂ.ಎಸ್.ಕಲಹಾಳ ನೀವು ಈ ಸಂಘದಲ್ಲಿ ಇನ್ನೂ ಸದಸ್ಯತ್ವವನ್ನೆÃ ಪಡೆದಿಲ್ಲ. ಸಂಘದಲ್ಲಿ ಯಾವುದೇ ಸಹಾಯ ಸೌಲಭ್ಯಗಳಿಲ್ಲ ಎಂದು ಅಮಾಯಕ ಜನರನ್ನು ದಬಾಯಿಸುತ್ತಾ ಕೇವಲ ತಮ್ಮ ಸಂಬಂಧಿಕರು ಮತ್ತು ಕೆಲ ಆಡಳಿತ ಮಂಡಳಿಯ ಸದಸ್ಯರಿಗೆ ಎಲ್ಲ ಸೌಲಭ್ಯಗಳ ಸಹಾಯಧನವನ್ನು ಅನೇಕ ವರ್ಷಗಳಿಂದ ನಿರಂತರವಾಗಿ ನೀಡುತ್ತಿದ್ದಾರೆ.

ಆದರೆ, ಚಿಕ್ಕನರಗುಂದ ಗ್ರಾಮದಲ್ಲಿ ಈ ಸಂಘದಿಂದ ಯಾರೊಬ್ಬರು ಉಣ್ಣೆ ನೇಯುವುದು, ಕುರಿ ಸಾಕಾಣಿಕೆ, ಕಂಬಳಿ ಮಾರಾಟ ಸೇರಿ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ. ಆದರೂ, ಇಲ್ಲಿನ ಕಾರ್ಯದರ್ಶಿ ಎಲ್ಲವೂ ಸರಾಗವಾಗಿ ನಡೆಯುತ್ತಿವೆ ಎಂದು ವರದಿಯಲ್ಲಿ ಉಲ್ಲೆÃಖಿಸಿದ್ದಾರೆ. ಇದರಿಂದ ಸರ್ಕಾರದ ಲಕ್ಷಾಂತರ ಹಣವನ್ನು ದುರಪಯೋಗ ಪಡಿಸಿಕೊಂಡಿದ್ದಾರೆಂದು ಪ್ರತಿಭಟನೆ ನಿರತ ಸದಸ್ಯರು ಆರೋಪಿಸಿದರು.
ಈ ಸಹಕಾರಿ ಸಂಘದ ಎರಡು ಎಕರೆ ಪ್ರದೇಶದ ಒಂದು ಎಕರೆ ವ್ಯಾಪ್ತಿಯಲ್ಲಿ ೭ ವರ್ಷದ ಹಿಂದೆ ಕೌಶಲ್ಯಾಭಿವೃದ್ದಿ ಸಂಘದ ಕಟ್ಟಡ, ಸಾಮರ್ಥ್ಯ ಸೌಧವನ್ನು ನಿರ್ಮಿಸಲಾಗಿದೆ. ಅಲ್ಲಿರುವ ಉಣ್ಣೆ ಉತ್ಪಾದನೆ ಯಂತ್ರ ಮತ್ತು ಚರಕಗಳು, ಉಣ್ಣೆ ಕಂಬಳಿ ಸಾಗಾಟದ ಬ್ಯೂಲೇರೋ ವಾಹನಗಳು ಧೂಳು ತಿನ್ನುತ್ತಿವೆ.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ಕಾರ್ಯದರ್ಶಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಪ್ರತಿಭಟಣೆಯಲ್ಲಿ ಪಡಿಯಪ್ಪ ಮರಿಯಣ್ಣವರ, ಬಸ್ಸು ಹಳಕಟ್ಟಿ, ಯಲ್ಲಪ್ಪ ಹಳಕಟ್ಟಿ, ನೀಲವ್ವ ಮರಿಯಣ್ಣವರ, ಯಲ್ಲವ್ವ ಹಳಕಟ್ಟಿ, ಸಿದ್ದಪ್ಪ ಕಳಸಣ್ಣವರ, ಶಿವಾನಂದ ಹಳಕಟ್ಟಿ, ಬಸವರಾಜ ಕಲಹಾಳ, ರತ್ನವ್ವ ಕುರಿ, ನೀಲಪ್ಪ ಕಳಸಣ್ಣವರ, ಪಿ.ಡಿ.ಕುರಿ, ಎನ್.ಎಂ. ಚೌರಿ, ಶಿವಪ್ಪ ಕಲಹಾಳ, ಬಸಪ್ಪ ವಿಠಪ್ಪನವರ, ಸಿದ್ದಪ್ಪ ಕಲಹಾಳ, ರೇಖಾ ಕಲಹಾಳ, ಭರಮವ್ವ ಹುಣಸೀಕಟ್ಟಿ, ಮಂಜವ್ವ ಲಕ್ಕನ್ನವರ ಅನೇಕರು ಉಪಸ್ಥಿತರಿದ್ದರು.

 ಎಂ.ಎಸ್.ಕಲಹಾಳ ಸಂಘದ ಕಾರ್ಯದರ್ಶಿ.
ಚಿಕ್ಕನರಗುಂದ ಸಹಕಾರಿ ಸಂಘದಲ್ಲಿ ೧೯೯೪ ರಿಂದ ನಾನು ಯಾವುದೇ ಲೋಪದೋಷವಾಗದಂತೆ ಕಾರ್ಯ ನಿರ್ವಹಿಸುತ್ತಿದ್ದೆÃನೆ. ಕೆಲವರು ವಿನಾಕಾರಣ ನನ್ನ ಹಾಗೂ ಆಡಳಿತ ಮಂಡಳಿ ವಿರುದ್ದ ಭ್ರಷ್ಟಾಚಾರದ ಆರೋಪವನ್ನು ಮಾಡುತ್ತಿದ್ದು, ಇದೆಲ್ಲವೂ ಸತ್ಯಕ್ಕೆ ದೂರವಾದ ಮಾತಾಗಿದೆ. ಸರ್ಕಾರ ಹಾಗೂ ಸಂಘದಿಂದ ದೊರೆಯುವ ಕೆಲವೊಂದು ಸಹಾಯ ಸೌಲಭ್ಯಗಳನ್ನು ಒಂದು ವಾರದಲ್ಲಿ ನೀಡುತ್ತೆÃನೆ.

loading...