ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಆರೋಪ

0
13

ಕನ್ನಡಮ್ಮ ಸುದ್ದಿ-ತೇರದಾಳ: ನಗರದ ಅಭಿವೃದ್ಧಿಗೆ ಕೈಗೊಂಡ ಕಾಮಗಾರಿಗಳ ಕ್ರಿಯಾಯೋಜನೆ ವಿಷಯವಾಗಿ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹಾಗೂ ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆದ ಘಟನೆ ಸೋಮವಾರ ಸಂಜೆ ನಡೆದಿದೆ.
೨೦೧೯-೨೦ನೇ ಸಾಲಿನ ಎಸ್‌ಎಫ್‌ಸಿ ಹಾಗೂ ೧೪ನೇ ಹಣಕಾಸು ಯೋಜನೆಯಡಿ ಪುರಸಭೆಗೆ ೧.೯೧ ಕೋಟಿ ಅನುದಾನ ಮಂಜುರಾಗಿದೆ. ನಗರದ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾಯೋಜನೆ ತಯಾರಿಸಿದ್ದು, ಇದರಲ್ಲಿ ಬಿಜೆಪಿಯ ಹಾಗೂ ಬಿಜೆಪಿ ಬೆಂಬಲಿತ ಪಕ್ಷೆÃತರ ಸದಸ್ಯರ ವಾರ್ಡ್ಗಳಲ್ಲಿ ಅನುದಾನ ಹಂಚಿಕೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಹಾಗೂ ಕಿರಿಯ ಅಭಿಯಂತರ ತಾರತಮ್ಯ ಮಾಡುತ್ತಿದ್ದಾರೆ. ಸಿಸಿ ರಸ್ತೆ, ಚರಂಡಿ, ಪೈಪ್‌ಲೈನ್, ಬೀದಿ ದೀಪ ಹಾಗೂ ಜಲಕುಂಭಗಳನ್ನು ಅಳವಡಿಸಲು ಅನುದಾನ ಮೀಸಲಿಡುವಂತೆ ಮನವಿ ಮಾಡಿದ್ದೆÃವೆ. ಆದರೆ ಮುಖ್ಯಾಧಿಕಾರಿ ಹಾಗೂ ಜೆಇ ಅವರು ತಮಗೆ ಮನಬಂದಂತೆ ಅನುದಾನ ಹಂಚಿಕೆ ಮಾಡುವ ಮೂಲಕ ಬಿಜೆಪಿ ಸದಸ್ಯರುಗಳ ವಾರ್ಡ್ಗಳಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ನೀವು ಇನ್ನು ಅಧಿಕೃತ ಸದಸ್ಯರುಗಳು ಅಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆಂದು ಬಿಜೆಪಿ ಸದಸ್ಯರಾದ ರೂಪಾ ಕುಂಬಾರ, ವಿನಾಯಕ ಬಂಕಾಪುರ, ಕಾಶಿನಾಥ ರಾಠೋಡ, ಸಂತೋಷ ಜಮಖಂಡಿ, ಕುಸುಮಾಂಡಿನಿ ಬಾಬಗೊಂಡ, ಸಂಗೀತಾ ಕೇದಾರಿ ಪಾಟೀಲ ಸೇರಿದಂತೆ ಉಳಿದ ಸದಸ್ಯರ ಆರೋಪವಾಗಿದೆ. ಇನ್ನು ಬಿಜೆಪಿ ಸದಸ್ಯರ ಆರೋಪಕ್ಕೆ ಮಾತನಾಡಿರುವ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಎಸ್‌ಎಫ್‌ಸಿ ಹಾಗೂ ೧೪ನೇ ಹಣಕಾಸು ಯೋಜನೆಯಡಿ ಬಂದ ಅನುದಾನದಲ್ಲಿ ಒಳಚರಂಡಿ ಕಾಮಗಾರಿಗಾಗಿ ೧೦ ಲಕ್ಷ ಹಣವನ್ನು ಡಿಪಾಜಿಟ್ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಇಲಾಖೆಯ ಮಾರ್ಗಸೂಚಿಯಂತೆ ಅನುದಾನವನ್ನು ಮೀಸಲಿಡಲಾಗಿದ್ದು, ಘನತ್ಯಾಜ್ಯ ವಿವೇವಾರಿ ಘಟಕ್ಕೆ ೬೭ ಲಕ್ಷ ಅನುದಾನ ಮೀಸಲಿಡಲಾಗಿದೆ. ಉಳಿದ ಅನುದಾನದಲ್ಲಿ ಅಗತ್ಯ ಕಾಮಗಾರಿಗಳನ್ನು ಹಾಕಿಕೊಳ್ಳಲಾಗಿದೆ. ಸದಸ್ಯರುಗಳು ಹೇಳಿದ ಕೆಲ ಕಾಮಗಾರಿಗಳನ್ನು ಕ್ರಿಯಾಯೋಜನೆಯಲ್ಲಿ ಹಾಕಿಕೊಳ್ಳಲು ಅನುದಾನ ಸಾಕಾಗಿಲ್ಲ. ಹೊರತು ಯಾವುದೇ ತಾರತಮ್ಯ ಮಾಡಿಲ್ಲ. ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಬಳಿಕವೇ ಆಯ್ಕೆಗೊಂಡ ಸದಸ್ಯರುಗಳು ಪುರಸಭೆಗೆ ಅಧಿಕೃತರಾಗುತ್ತಾರೆ. ಉಳಿದ ಕೆಲಸಗಳನ್ನು ಮುಂದಿನ ಅನುದಾನದಲ್ಲಿ ಹಾಕಿಕೊಳ್ಳಲಾಗುವುದು ಎಂದು ಸದಸ್ಯರಿಗೆ ಹೇಳಿದ್ದೆÃನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಮಂಗಳವಾರ ಬಿಜೆಪಿ ಸದಸ್ಯರು ಆಡಳಿತಾಧಿಕಾರಿ ಆಗಿರುವ ಉಪವಿಭಾಗಾಧಿಕಾರಿ ಇಕ್ರಂ ಅವರಿಗೆ ಮುಖ್ಯಾಧಿಕಾರಿ ಹಾಗೂ ಜೆಇ ವಿರುದ್ಧ ದೂರು ಸಲ್ಲಿಸಿದ್ದಾರೆ. ಮುಖ್ಯಾಧಿಕಾರಿ ಹಾಗೂ ಜೆಇ ಸದಸ್ಯರುಗಳಿಗೆ ಸರಿಯಾಗಿ ಸ್ಪಂಧಿಸುವುದಿಲ್ಲ. ಮತ್ತು ಪ್ರತಿಯೊಂದು ವಿಷಯದಲ್ಲಿ ತಮಗೆ ಮನಬಂದತೆ ವರ್ತಿಸುತ್ತಾರೆ. ಆದ್ದರಿಂದ ಆಡಳಿತಾಧಿಕಾರಿ(ಎ.ಸಿ) ಆಗಿರುವ ತಾವು ಪುರಸಭೆಗೆ ಬೇಟಿ ನೀಡಬೇಕು ಮತ್ತು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಎ.ಸಿಯವರಿಗೆ ಸಲ್ಲಿಸಿದ ಮನವಿಯ ಪ್ರತಿಯೊಂದನ್ನು ಅಪರ್ ಜಿಲ್ಲಾಧಿಕಾರಿ ದುರಗೇಶ ರುದ್ರಾಕ್ಷಿಯವರಿಗೂ ತಲುಪಿಸಿದ್ದಾರೆ.

loading...