ಅಪೌಷ್ಟಿಕತೆಯಿಂದ ಮಕ್ಕಳ ಸಾವು; ನಿರ್ಲಕ್ಷ್ಯ ತೋರಿದರೆ ನ್ಯಾಯಾಲಯಕ್ಕೆ

0
19

ಅಥಣಿ; 20 ಅಪೌಷ್ಟಿಕತೆಯಿಂದ ಮಕ್ಕಳು ಸಾವನ್ನಪ್ಪಿದಾಗಿ ಅಧಿಕಾರಿಗಳು ಏನಾದರೊಂದು ಸಬೂಬು ಹೇಳುತ್ತ ಜವಾಬ್ದಾರಿಯಿಂದ ನುಣುಚಿಕೊಂಡಲ್ಲಿ ನ್ಯಾಯಾಲದ ಮೊರೆ

ಹೋಗಲಾಗುವುದು ಎಂದು ವಿಮೋಚನಾ ಸಂಸ್ಥೆಯ ಅಧ್ಯಕ್ಷರಾದ ನ್ಯಾಯವಾದಿ ಬಿ.ಎಲ್.ಪಾಟೀಲರು ಎಚ್ಚರಿಕೆ ನೀಡಿದ್ದಾರೆ.    ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ,2011 ರಲ್ಲಿ ರಾಯಚೂರು ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಮುಕ್ಕಳು ಸಾವನ್ನಪ್ಪಿದಾಗ ಹೈಕೋರ್ಟ ನ್ಯಾಯಮೂರ್ತಿಗಳಿಗೆ  ಪತ್ರ ಬರೆದಿದ್ದೆ. ಇದನ್ನು ಸಾರ್ವಜನಿಕ ಹಿತಾಸಕತ್ತಿ ಅರ್ಜಿ ಎಂದು ನೊಂದಾಯಿಸಿಕೊಂಡು ವಿಚಾರಣೆ ನಡೆಸುತ್ತಿದೆ. ನ್ಯಾಯಮೂರ್ತಿ ಎನ್.ಕೆ.ಪಾಟೀಲ ನೇತೃತ್ವದಲ್ಲಿ ಸಮಿತಿ ರಚಿಸಿದ್ದು ಈ ಸಮಿತಿ ರಾಜ್ಯದೆಲ್ಲಡೆ ಸಂಚರಿಸಿ ವರದಿ ತಯಾರಿಸಿ ಸಲ್ಲಿಸಿದೆ. ಈ ಸಮಿತಿ ಸೂಚಿಸಿದ ಮಾರ್ಗಸೂಚಿ ಜಾರಿಗೆ ತರುವುದಾಗಿ ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಫಿಡಿವಿಟ್ನಲ್ಲಿ

ಒಪ್ಪಿಕೊಂಡ ಪ್ರಕಾರ ಕೆಲಸ ಮಾಡದೆ ನಿರ್ಲಕ್ಷ ವಹಿಸಿದೆ. ಇದು ಕೋರ್ಟ ಅದೇಶಕ್ಕೆ ಅವಹೇಳನ ಮಾಡಿದಂತೆ ಆಗಿತ್ತದೆ ಎಂದಿದ್ದಾರೆ. ಹೀಗಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ಸುಧಾರಣೆಗೆ ವರದಿಯಲ್ಲಿ ಹೇಳಿದ ಯೋಜನೆಗಳನ್ನು ಕೂಡಲೆ ಜಾರಿಗೆ ತರಬೇಕು. ಒಂದು ವೇಳೆ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿದರೆ ಈ ಬಗ್ಗೆ ಪುನ: ನ್ಯಾಯಾಲಯದ ಗವುನಕ್ಕೆ ತರುವುದಾಗಿ ಬಿ.ಎಲ್.ಪಾಟೀಲರು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here