ಅಪ್ಪಾಜಿ ಕ್ಯಾಂಟೀನ್‌ನಲ್ಲಿ ರಾಗಿ ಮುದ್ದೆ,ರೊಟ್ಟಿ ಊಟ

0
15

ಬೆಂಗಳೂರು:ಅಪ್ಪಾಜಿ ಕ್ಯಾಂಟೀನ್‌ನಲ್ಲಿ ದಕ್ಷಿಣಕರ್ನಾಟಕದ ಊಟದ ಜೊತೆಗೆ ಜೋಳದ ರೊಟ್ಟಿಗೂ ಸ್ಥಾನ ಲಭಿಸಿದ್ದು, ಇನ್ಮುಂದೆ ಅಪ್ಪಾಜಿ ಕ್ಯಾಂಟೀನ್‌ನಲ್ಲಿ ರಾಗಿ ಮುದ್ದೆ ಮತ್ತು ರೊಟ್ಟಿ ಊಟ ಸಿಗಲಿದೆ.
ಗ್ರಾಹಕರಿಗೆ ೧೦ರೂ.ಗೆ ಮುದ್ದೆ ಬಸ್ಸಾರು ಹಾಗೂ ರೊಟ್ಟಿ,ಎಣ್ಣೆಗಾಯಿ,ಪಲ್ಯ ಕೂಡ ಲಭ್ಯವಾಗಲಿದೆ. ಈ ಮೂಲಕ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಆಹಾರಗಳು ಲಭ್ಯವಾಗಲಿವೆ.ಹನುಮಂತನಗರದಲ್ಲಿ ಅಪ್ಪಾಜಿ ಕ್ಯಾಂಟೀನ್ ಸ್ಥಾಪನೆಯಾಗಿ ಒಂದು ವರ್ಷವಾದ ಹಿನ್ನೆಲೆ ಇಂದು ಇಲ್ಲಿ ಊಟದ ಸ್ಪರ್ಧೆಯನ್ನು ಕೂಡ ಏರ್ಪಡಿಸಲಾಗಿದ್ದು, ರಾಗಿ ಮುದ್ದೆ ಜೋಳದ ರೊಟ್ಟಿ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದ್ದು, ವಿಜೇತರಿಗೆ ಬಹುಮಾನ ನೀಡಲು ನಿರ್ಧರಿಸಲಾಗಿದೆ.

loading...