ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣ ಮೂವರನ್ನು ಅಪರಾಧಿ ಎಂದು ತೀರ್ಪು ನೀಡಿದ ನ್ಯಾಯಾಲಯ

0
8

ಬೆಳಗಾವಿ
ಅಪ್ರಾಪ್ತೆ ಮೇಲೆ ಅತ್ಯಾಚಾರ ಹಾಗೂ ಜೀವ ಬೇದರಿಕೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮೂವರನ್ನು ಅಪರಾಧಿಗಳೆಂದು ಪರಿಗಣಿಸಿ ಹಾಗೂ ಏ.8 ಕ್ಕೆ ಶಿಕ್ಷೆ ಪ್ರಮಾಣವನ್ನು ಕಾಯ್ದಿರಿಸಿ ಇತ್ತೀಚೆಗೆ ನಗರದ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ. ನಂಜುಡಯ್ಯ ತೀರ್ಪು ನೀಡಿದ್ದಾರೆ.
ಅಥಣಿ ತಾಲೂಕಿನ ಕಿರಣಿ ಗ್ರಾಮದ ಸಿದ್ದಪ್ಪ ಮಲ್ಲಪ್ಪ ನಂದಗಾಂವ (23), ರಮೇಶ ರಾವಸಾಬ ನಂದಗಾಂವ (24) ಹಾಗೂ ಅಶೋಕ ಬಸಪ್ಪಾ ನಂದಗಾಂವ (24) ಇನ್ನೊರ್ವ ಆರೋಪಿಗಳ ವಿರುದ್ಧ ಅಪರಾಧ ಸಾಬೀತಾಗಿದೆ. 2016ರ ಫೆ. 27 ರಂದು ಮನೆಯಲ್ಲಿ ಜಗಳ ಮಾಡಿಕೊಂಡು ಮನೆಯಿಂದ ಹೊರಗೆ ಬಂದು ನಿಂತಿದ್ದ ಬಾಲಕಿಯನ್ನು ಅಪಹರಿಸಿದ್ದ ಸಿದ್ದಪ್ಪ ನಂದಗಾಂವಿ ಮತ್ತು ರಮೇಶ ನಂದಗಾವಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅಶೋಕ ನಂದಗಾಂವ ಅಪರಾಧಿ ಅತ್ಯಚಾರ ನಡೆಸುವ ಸಂದರ್ಭದಲ್ಲಿ ಕಾವಲು ನಿಂತು ಸಹಾಯ ಮಾಡಿದ್ದನು. ನಂತರ ಮನೆಗೆ ಬಿಟ್ಟು ಬರುವುದಾಗಿ ಕರೆದೊಯ್ಯುವ ಸಂದರ್ಭದಲ್ಲೂ ಜೀವ ಬೆದರಿಕೆ ಹಾಕಿ ಮತ್ತೊಂದು ಬಾರಿ ಸಾಮೂಹಿಕ ಅತ್ಯಾಚಾರವೇಸಗಿದ್ದರು.
ಘಟನೆ ನಡೆದು ಮೂರು ತಿಂಗಳ ನಂತರ 2016ರ ಮೇ 11 ರಂದು ಸಂತೆಗೆ ಹೋಗಿದ್ದ ಬಾಲಕಿಯನ್ನು ಹಿಂಬಾಲಿಸಿ, ಹಿಂದಿನ ಘಟನೆ ಬಗ್ಗೆ ಎಲ್ಲರಿಗೂ ಹೇಳುತ್ತವೆ. ಇಲ್ಲವಾದಲ್ಲಿ ಈ ಹಿಂದೆ ನಡೆದ ಘಟನೆ ಸ್ಥಳಕ್ಕೆ ಬರುವಂತೆ ಬ್ಲ್ಯಾಕ್‍ಮೇಲ್ ಮಾಡಿದ್ದಾರೆ. ಅತ್ಯಾಚಾರ ವಿಷಯ ಬಾಯಿ ಬಿಟ್ಟರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದರು. ಗಾಬರಿಗೊಂಡ ಬಾಲಕಿ ಮನೆಯಲ್ಲಿ ವಿಷಯ ತಿಳಿಸಿದಾಗ ಕುಟುಂಬ ಸದಸ್ಯರು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ಕೈಗೊಂಡ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಫೋಕ್ಸೋ ನ್ಯಾಯಾಲಯ ಆರೋಪಿತರ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಏ.8ರಂದು ಶಿಕ್ಷೆ ಪ್ರಮಾಣ ಘೋಷಣೆ ಕಾಯ್ದಿರಿಸಿ ಶುಕ್ರವಾರ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರ ಪರವಾಗಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು.

loading...