ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿ ಬಂಧನ

0
2


ಬೆಳಗಾವಿ

ಅಪ್ರಾಪ್ತೆಯನ್ನು ಅಪಹರಿಸಿ‌ ಎಂಟು ದಿನಗಳ ಕಾಲ ಬಾಲಕಿ ಮೇಲೆ‌ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ‌ ಕಿರಾತಕನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಅಂಬೇಡ್ಕರ್‌ ಗಲ್ಲಿಯ ವಸಿಮ್ ಅಲ್ಲಾಭಕ್ಷ ಬಾಗಿ (22) ಬಂಧಿತ ಆರೋಪಿ. ಅರೋಪಿಯ ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.
ಆರೋಪಿ ಅಲ್ಲಾಭಕ್ಷ ಕಲ ತಿಂಗಳಗಳಿಂದ ಬಾಲಕಿಗೆ ಪ್ರಿತಿಸುವಂತೆ ಪೀಡಿಸುತ್ತಿದ್ದ, ಆದರೆ ಇದಕ್ಕೆ ಬಾಲಕಿ ನಿರಾಕರಿಸಿದ್ದಾಳೆ. ಇದರಿಂದ ಆಕ್ರೋಶಗೊಂಡಿದ್ದ ಕಾಮುಕ‌ ಜ. 13 ರಂದು ಸಂಜೆ ವೇಳೆಯಲ್ಲಿ ಹೊರಗಡೆ ಬಂದಿದ್ದ ಬಾಲಕಿಗೆ ಚಾಕು ತೊರಿಸಿ ಹೆದರಿಸಿ ಅಪಹರಿಸಿದ್ದಾನೆ. ನಂತರ ಖಲಕಾಂಬ ಗ್ರಾಮಕ್ಕೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ನಡೆಸಿದ್ದಾಗಿ ಆರೋಪಿ ವಿರುದ್ದ ಬಾಲಕಿಯ ಮನೆಯವರು ಪೊಲೀಸ‌ ಠಾಣೆಯಲ್ಲಿ‌ ದೂರು ನೀಡಿದ್ದರು. ‌ಈ ದೂರಿನ್ವಯ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಆರೋಪಿಯನ್ನು‌ ಬಂಧಿಸಿದ್ದಾರೆ. ಈ‌ ಕುರಿತು ಕಾಕತಿ ಪೊಲೀಸ ‌ಠಾಣೆಯಲ್ಲಿ ದಾಖಲಿಸಲಾಗಿದೆ.

loading...