ಅಪ್ರಾಪ್ತೆ ಅಪರಹಣ ಮಾಡಿ ಕೊಲೆ ಮಾಡಿದ ಆರೋಪಿಗಳ ಬಂಧನ

0
16

ಬೆಳಗಾವಿ

ಅಪ್ರಾಪ್ತೆಯನ್ನು ಅಪಹರಣ ಮಾಡಿ ಕೊಲೆ ಮಾಡಿರುವ ಘಟನೆ ಸಂಬAಧಿಸಿದAತೆ ಮೂವರನ್ನು ಬಂಧಿಸಿ, ಅವರಿಂದ ಮೊಬೈಲ್, ದ್ವಿಚಕ್ರ ವಾಹನ ಹಾಗೂ ಮಚ್ಚು ಸೇರಿದಂತೆ ಹತ್ಯೆ ಬಳಕೆ ಮಾಡಿದ್ದ ಇನ್ನೀತರ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಆದರ್ಶ ದತ್ತು ಪಾರ್ಥನಳ್ಳಿ (24), ಕಿರಣ ಕೆಂಚಪ್ಪ ಜಗದಾಳ (24) ಹಾಗೂ ಅಪ್ರಾಪ್ತ ಬಾಲಕ ಸೇರಿ ಮೂವರನ್ನು ಬಂಧಿಸಲಾಗಿದೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ 2019ರ ನವೆಂಬರನಲ್ಲಿ ಅಪ್ರಾಪ್ತ ಬಾಲಕಿಯ ಅಪರಣದ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ತಂಡ ರಚನೆ ಮಾಡಲಾಗಿತ್ತು. ತನಿಖೆ ಆರಂಭಿಸಿದ್ದ ಪೊಲೀಸರು ಅಪ್ರಾಪ್ತ ಬಾಲಕಿಯೊಂದಿಗೆ ಸಲುಗೆ ಹೊಂದಿದ್ದ ಮಾಹಿತಿ ಪಡೆದುಕೊಂಡು ಆದರ್ಶ ಪಾರ್ಥನಳ್ಳಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕ ಸೇರಿ ಬಂಧಿತ ಮೂವರು ಜತೆಯಾಗಿರುವ ಕುರಿತು ಬೆಳಕಿಗೆ ಬಂದಿದೆ. ತಕ್ಷಣ ಅಪ್ರಾಪ್ತ ಬಾಲಕ ಮತ್ತು ಕಿರಣ ಜಗದಾಳ ಸೇರಿ ಮೂವರನ್ನು ಬಂಧಿಸಿದ್ದಾರೆ.

ಈ ಮೂವರನ್ನು ತನಿಖೆಗೆ ಒಳಪಡಿಸಿದಾಗ ಆದರ್ಶ ಪಾರ್ಥನಳ್ಳಿ ಮತ್ತು ಅಪ್ರಾಪ್ತ ಬಾಲಕಿ ಪ್ರೀತಿಸುತ್ತಿದ್ದರು. ಆದರ್ಶ ಮತ್ತು ಆತನ ಗೆಳೆಯ ಅಪ್ರಾಪ್ತ ಬಾಲಕನ್ನು ಬಾಲಕಿಯನ್ನು ಅಪಹರಣ ಮಾಡಿಕೊಂಡು ಧಾರವಾಡಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರ್ಶ ಎಂಬಾತನು ಧಾರವಾಡದಲ್ಲಿ ಶಿಕ್ಷಣ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ 2019ರ ನವೆಂಬರನಿAದ 2020ರ ಮೇ ವರೆಗೆ ಧಾರವಾಡದಲ್ಲಿ ಅಪ್ರಾಪ್ತ ಬಾಲಕಿ ಮತ್ತು ಆದರ್ಶ ಪಾರ್ಥನಳ್ಳಿ ವಾಸವಾಗಿದ್ದರು.

2020ರ ಮೇನಲ್ಲಿ ನಿಪ್ಪಾಣಿ ಸಮೀಪದ ಗ್ರಾಮವೊಂದರ ಆದರ್ಶ ಪಾರ್ಥನಳ್ಳಿ ಸ್ನೇಹಿತನ ಸಂಬAಧಿಕರ ಮನೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಇರಿಸಿದ್ದರು. ಈ ವೇಳೆ ಅಪ್ರಾಪ್ತ ಬಾಲಕಿ ಆದರ್ಶನನ್ನು ಬಿಟ್ಟು ಬೇರೆಯವರೊಂದಿಗೆ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಆದ್ದರಿಂದ ಆಕ್ರೋಶಗೊಂಡಿದ್ದ ಆದರ್ಶ ಸೇರಿದಂತೆ ಬಂಧಿತ ಮೂವರು ಅಪ್ರಾಪ್ತ ಬಾಲಕಿಯನ್ನು 2020ರ ಜೂ.9 ರಂದು ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕರೆತಂದು ಅಪ್ರಾಪ್ತ ಬಾಲಕಿಗೆ ಮದ್ಯ ಕುಡಿಸಿದ್ದಾರೆ. ನಂತರ ಅಪ್ರಾಪ್ತ ಬಾಲಕಿ ಮಚ್ಚಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾರೆ. ಅಪ್ರಾಪ್ತ ಬಾಲಕಿಯ ಶವವನ್ನು ಅರಣ್ಯ ಪ್ರದೇಶದಲ್ಲಿ ಹೂತು ಹಾಕಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಮೂವರನ್ನು ಕಣಕುಂಬಿಯ ಕೊಲೆ ಮಾಡಿರುವ ಸ್ಥಳ ಕರೆದುಕೊಂಡು ಹೋಗಿ ತಪಾಸಣೆ ನಡೆಸಿದಾಗ ಬಾಲಕಿಯ ಕಳೆಬರಹಗಳು ಪತ್ತೆಯಾಗಿದೆ.

ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಅಥಣಿ ಡಿವೈಎಸ್‌ಪಿ ಎಸ್.ವಿ.ಗಿರೀಶ್, ರಾಯಬಾಗ ಸಿಪಿಐ ಕೆ.ಎಸ್.ಹಟ್ಟಿ, ಹಾರುಗೇರಿ ಪಿಎಸ್‌ಐ ಯಮನಪ್ಪ ಮಾಂಗ, ಸಿಬ್ಬಂದಿಗಳಾದ ಕೆ.ಎಚ್.ಪವಾರ, ಪಿ.ಕೆ.ಡೋಣಿ, ರಾಜು ಕಟೇಕರಿ, ಪುರುಷೋತ್ತಮ ನಾಯಿಕ, ಹಣಮಂತ ಅಂಬಿ, ಎಚ್.ಎನ್.ಮೋಮಿನ, ಸದಾಶಿವ ಡಾಬೋಳಿ, ಶಿವಾನಂದ ಬಡಿಗೇರ ತಂಡ ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.

 

loading...