ಅಭಿವೃದ್ಧಿ ಬಗ್ಗೆ ಡಿ.ಆರ್.ಪಾಟೀಲ ಮಾತನಾಡುತ್ತಿರುವದು ಹಾಸ್ಯಾಸ್ಪದ : ಮೋಹನ

0
36

ಗದಗ: ಗದಗ ಮತಕ್ಷೆÃತ್ರದಲ್ಲಿ ನಾಲ್ಕು ಬಾರಿಗೆ ಶಾಸಕರಾಗಿದ್ದ ಕಾಂಗ್ರೆÃಸ್‌ನ ಡಿ.ಆರ್.ಪಾಟೀಲ ತಾವು ಅಧಿಕಾರದಲ್ಲಿ ಇದ್ದಾಗ ಅಭಿವೃದ್ಧಿ ಮಾಡದಿರುವದನ್ನು ಇದೀಗ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿರುವದು ಹಾಸ್ಯಾಸ್ಪದವಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಮಾಳಶೆಟ್ಟಿ ತೀಕ್ಷ÷್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಐದಾರು ದಶಕಗಳ ಕಾಲ ತಮ್ಮ ಕುಟುಂಬವೇ ಗದಗ ಜಿಲ್ಲೆಯಲ್ಲಿ ಆಳ್ವಿಕೆ ನಡೆಸಿ ಕನಿಷ್ಠ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾಗಿರುವ ಹಾವೇರಿ ಲೋಕಸಭೆ ಚುನಾವಣೆಯಲ್ಲಿ ಆರಿಸಿ ಬಂದರೆ ಅಭಿವೃದ್ಧಿ ಪರ್ವ ಹರಿಸಲಾಗುವುದು ಎಂದು ಕಾಂಗ್ರೆÃಸ್ ಅಭ್ಯರ್ಥಿ ಡಿ.ಆರ್.ಪಾಟೀಲರು ಹೇಳುತ್ತಿರುವದು ಹಾಸ್ಯಾಸ್ಪದವಾಗಿದೆ.
ಕಳೆದ ವಿಧಾಸಭಾ ಚುನಾವಣೆ ಮುಖ್ಯಮಂತ್ರಿಗಳನ್ನು ಕರೆಸಿ ಚುನಾವಣೆ ಗೆಲ್ಲಲು ತರಾತುರಿಯಲ್ಲಿ ಉದ್ಘಾಟನೆ ೨೪*೭ ನಿರಂತರ ಕುಡಿಯುವ ನೀರಿನ ಯೋಜನೆಯು ಇದೂವರೆಗೂ ಮನೆಗೆ ತಲುಪದೇ ಕೇವಲ ಅಂಕಿ ಅಂಶಗಲ್ಲಿ ಯೋಜನೆಗಳನ್ನು ಮುಕ್ತಾಯಗೊಳಸಿದ್ದು ಯಾವ ಪುರುಷಾರ್ಥಕ್ಕಾಗಿ ಮತದಾರರನ್ನು ಸೆಳೆಯಲು ತಪ್ಪು ತಪ್ಪು, ಸುಳ್ಳು ಮಾಹಿತಿ ನೀಡುತ್ತಿರುವದು ಕಾಂಗ್ರೆÃಸ್‌ನ ಸೋಲಿನ ಭೀತಿಯನ್ನು ಎದುರಿಸುತ್ತಿದೆ ಎಂಬ ಭಾವನೆ ಮೂಡುತ್ತಿದೆ ಎಂದಿದ್ದಾರೆ.
ಬಿಜೆಪಿಯ ಹಾವೇರಿ ಲೋಕಸಭಾ ಅಭ್ಯರ್ಥಿ ಶಿವಕುಮಾರ ಉದಾಸಿ ಅವರು ವಿವಿಧ ಸಂಘ-ಸಂಸ್ಥೆಗಳಿಗೆ ಒದಗಿಸುವ ಅನುದಾನ ಬಿಡುಗಡೆ ಮಾಡುವಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಐದು ವರ್ಷದಲ್ಲಿ ಗದಗ-ಬೆಟಗೇರಿ ನಗರಸಭೆಗೆ ಅಮೃತ ಸಿಟಿ ಯೊಜನೆ ರೂ ೨೦೦ ಕೋಟಿ ಅಧಿಕ ಹಣ ತಂದಿದ್ದಾರೆ. ೧೨ ಸಾವಿರಕ್ಕೂ ಹೆಚ್ಚು ವಸತಿ ಮನೆಗಳ ಯೋಜನೆಗಳನ್ನು ಗದಗಿಗೆ ನೀಡಿರುವ ಕೀರ್ತಿ ಹೊಂದಿದ್ದು ಅವುಗಳನ್ನು ತಾವೆ ತಂದಿದ್ದು ಎಂದು ಜನರಿಗೆ ಸುಳ್ಳು ಮಾಹಿತಿ ನೀಡುತ್ತಾ ಬಂದಿರುವ ಕಾಂಗ್ರೆÃಸ್ ಯಾವ ಹಂತಕ್ಕೆ ತಲುಪಿದೆ ಎಂಬುದನ್ನು ಸಾರ್ವಜನಿಕರು ಗಮನಿಸುತ್ತಿದ್ದು ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವ ಮೂಲಕ ಕಾಂಗೇಸ್ ಉತ್ತರ ನೀಡಲಿದ್ದಾರೆ ಎಂದಿದ್ದಾರೆ.
ಗದಗ-ಬೆಟಗೇರಿ ಅವಳಿ ನಗರದ ಮತದಾರರ ಋಣದಲ್ಲಿ ದಿ.ಕೆ.ಹೆಚ್.ಪಾಟೀಲರಿಂದ ಹಿಡಿದು ಅವರ ಸುಪುತ್ರ ಹೆಚ್.ಕೆ.ಪಾಟೀಲ ಹಾಗೂ ಸ್ವತಃ ಡಿ.ಆರ್ ಪಾಟೀಲ ಐದಾರು ದಶಕಗಳ ಕಾಲ ವಿವಿಧ ಉನ್ನತ ಹುದ್ದೆ ಸಚಿವ ಸ್ಥಾನ ಅಧಿಕಾರ ಹೊಂದಿದ್ದರೂ ಗದಗಿಗೆ ಹೇಳುವಂತ ದೊಡ್ಡ ಮಟ್ಟದ ಕೊಡುಗೆಯನ್ನು ನೀಡದೆ ಕೇವಲ ಭಯದ ವಾತಾವರಣ ನಿರ್ಮಿಸಿ, ಮತದಾರರಿಗೆ, ಸಾರ್ವಜನಿಕರಿಗೆ ಪ್ರತಿ ಚುನಾವಣೆಯಲ್ಲಿಯೂ ಇಲ್ಲದ ಆಸೆ ಆಮಿಷೆಯನ್ನು ಹುಟ್ಟಿಸಿ ಸುಳ್ಳು ಮಾಹಿತಿಗಳನ್ನು ನೀಡುತ್ತಾ ಚುನಾವಣೆಗಳನ್ನು ಬಂದಿದ್ದು. ಇದೀಗ ತಮ್ಮ ಎಲ್ಲಾ ನಡೆನುಡಿಗಳನ್ನು ಅರಿತಿರುವ ಮತದಾರ ಬಾಂಧವರು ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಸೋಲಿನ ರುಚಿಯ ಹತ್ತಿರ ಒಯ್ದು ಬಿಟ್ಟಿದ್ದು. ಅಸ್ತಿತ್ವ ಕಾಪಾಡಿಕೊಳ್ಳಲು ಈಗ ಲೋಕಸಭಾ ಚುನಾವಣೆಯನ್ನು ಆಧಾರವನ್ನಾಗಿ ಮಾಡಿಕೊಂಡಿರುವ ಡಿ.ಆರ್.ಪಾಟೀಲರು ಗೆಲ್ಲಲು ಇಲ್ಲ ಸಲ್ಲದ ತಂತ್ರಗಳನ್ನು ತಮ್ಮ ಹಿಂಬಾಲಕರ ಮೂಲಕ ಮಾಡಿಸುತ್ತಿದ್ದು. ಬ್ರಿಟಿಷ್ ಪಾಲಿಸಿಯಂತೆ ವಿವಿಧ ಸಮಾಜಗಳನ್ನು ಒಡೆಯಲು ವಿಫಲ ಯತ್ನ ಮಾಡುವದರ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಕಳೆದ ಐದಾರು ದಶಕಗಳ ಕಾಲ ತಮ್ಮ ಕೊಡುಗೆಗಳು ಎಂಬುದನ್ನು ಸಾರ್ವಜನಿಕರಿಗೆ ತಿಳಿಯ ಪಡಿಸದೆ ಕೇವಲ ಅಭಿವೃದ್ಧಿ ಮಾಡಿದ್ದೆÃವೆ ಎಂದು ಬೋಗಳೆ ಬಿಡುತ್ತಿರುವ ಇವರು ಅಹಿಂದ ವರ್ಗಕ್ಕೆ ಯಾವದೇ ಕಾರ್ಯಗಳನ್ನು ಮಾಡದೇ ಅವರಿಗೆ ಸೂಕ್ತ ಸ್ಥಾನಮಾನವನ್ನು ನೀಡದೆ ಶಾಸ್ವತವಾಗಿ ತುಳಿಯುತ್ತಾ ಬಂದಿದ್ದು ಇದೀಗ ಬೇರೆ ಬೇರೆ ಅಹಿಂದ ನಾಯಕರನ್ನು ಕರೆಸಿ ಪ್ರಚಾರ À ಮಾಡಿ ಅವರ ಮೇಲೆ ಅವಲಂಬನೆ ಆಗಿದ್ದು. ಚುನಾವಣೆಯನ್ನು ತಾವೇ ಗೆಲವು ಸಾಧಿಸುತ್ತೆÃವೆ ಎಂಬ ಹಗಲಗನಸನ್ನು ಕಾಣುತ್ತಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಮಾಳಶೆಟ್ಟಿ ಪ್ರತಿಕ್ರಿಯೆಸಿದ್ದಾರೆ.

loading...