ಅಮೆರಿಕದೊಡನೆ ಹೊಸ ಸಶಸ್ತ್ರ ನಿಯಂತ್ರಣ ಒಪ್ಪಂದ ಕುರಿತ ಗಂಭೀರ ಚರ್ಚೆಗೆ ಸಿದ್ಧ : ರಷ್ಯಾ

0
8

ವಾಷಿಂಗ್ಟನ್- ಹೊಸ ಸಶಸ್ತ್ರ ನಿಯಂತ್ರಣ -ಸ್ಟಾರ್ಟ್ ಒಪ್ಪಂದವನ್ನು ಈ ವರ್ಷದ ಅಂತ್ಯದ ಮೊದಲು ಮತ್ತು ಯಾವುದೇ ಸಮಯದಲ್ಲಿ ವಿಸ್ತರಿಸಲು ರಷ್ಯಾ ಸಿದ್ಧವಾಗಿದೆ ಎಂದು ಅಧ್ಯಕ್ಷವ್ಲಾಡಿಮಿರ್ ಪುಟಿನ್ ಪುನರುಚ್ಚರಿಸಿದ್ದಾರೆ
“ಹೊಸ ವಿಸ್ತರಣೆಯನ್ನು ಬೆಂಬಲಿಸುವ ಅಧ್ಯಕ್ಷ ಪುಟಿನ್ ಅವರ ಅಭಿಪ್ರಾಯಗಳನ್ನು ನಾನು ಸ್ವಾಗತಿಸುತ್ತೇನೆ” ಎಂದು ಅಮೆರಿಕ ಸೆನೆಟರ್ ಡಯೆನ್ನೆ  ಫೆಯಿನ್ಸ್ಟೈನ್ ಸೋಮವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಅಧ್ಯಕ್ಷ ಟ್ರಂಪ್ ಅವರು ರಷ್ಯಾದೊಂದಿಗೆ ಸುಮಾರು ೩೦ ವರ್ಷಗಳ ಯಶಸ್ವಿ ಶಸ್ತ್ರಾಸ್ತ್ರ ನಿಯಂತ್ರಣವನ್ನು ಮುಂದುವರಿಸಲು ಗಂಭೀರ ಮಾತುಕತೆಗಳನ್ನು ಪ್ರಾರಂಭಿಸುವ ಸಮಯ ಇದೀಗ ಒದಗಿ ಬಂದಿದೆ ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ರಷ್ಯಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ಜಾರಿಯಲ್ಲಿರುವ  ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದಕ್ಕೆ ೨೦೧೦ ರಲ್ಲಿ ಸಹಿ ಮಾಡಲಾಗಿದೆ.   ಈ ಒಪ್ಪಂದವು ಕಾರ್ಯತಂತ್ರದ ಪರಮಾಣು ಕ್ಷಿಪಣಿ ಉಡಾವಣೆಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿತಗೊಳಿಸಬೇಕು ಮತ್ತು ನಿಯೋಜಿಸಲಾದ ಕಾರ್ಯತಂತ್ರದ ಪರಮಾಣು ಸಿಡಿತಲೆಗಳ ಸಂಖ್ಯೆಯನ್ನು ೧,೫೫೦ ಕ್ಕೆ ಸೀಮಿತಗೊಳಿಸಬೇಕು ಎಂದು ಷರತ್ತು ವಿಧಿಸುತ್ತದೆ.

loading...