ಅಮೆರಿಕ ಶಿಖರವೇರಿ ವಿಶ್ವ ದಾಖಲೆ ನಿರ್ಮಿಸಿದ  ಮುಂಬೈ  ವಿದ್ಯಾರ್ಥಿನಿ

0
7

ನವದೆಹಲಿ:-ಮುಂಬೈನ ನೌಕಾಪಡೆಯ ರೆಸಿಡೆನ್ಸಿ  ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಕಾಮ್ಯ ಕಾರ್ತಿಕೇಯನ್  ಅಮೆರಿಕದ ಅತ್ಯುನ್ನತ ಶಿಖರ ಮೌಂಟ್ ಅಕೋಂಕೋವಾ ಹತ್ತುವ  ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಈ ಶಿಖರ ಏರಿದ ಅತಿ ಚಿಕ್ಕ  ವಯಸ್ಸಿನ ಬಾಲಕಿ ಎಂಬ ಅಪರೂಪದ, ಹೆಗ್ಗಳಿಕೆಗೆ   ಅವರು ಪಾತ್ರರಾಗಿದ್ದಾರೆ  ಎಂದೂ ನೌಕಾಪಡೆ ಅಧಿಕಾರಿಗಳು ಹೇಳಿದ್ದಾರೆ.
6962 ಮೀಟರ್ ಎತ್ತರದ ಮೌಂಟ್ ಅಕೋಂಕೋವಾ ಪರ್ವತ ಏಷ್ಯಾದ  ಹೊರಗಿನ  ಅತಿ ಎತ್ತರದ ಪರ್ವತವಾಗಿದೆ. ಕಾಮ್ಯಾ ಫೆಬ್ರವರಿ 1ರಂದು ಈ ಪರ್ವತ ಏರಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾಳೆ ಎಂದೂ ಅಧಿಕಾರಿಗಳು ವಿವರಿಸಿದ್ದಾರೆ.
ಹಲವು ವರ್ಷಗಳ ಮಾನಸಿಕ ಹಾಗೂ ದೈಹಿಕ ಸಿದ್ಧತೆಯಿಂದ, ನಿರಂತರವಾಗಿ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದಾರೆ ಎಂದೂ  ಆಕೆಯ, ಸಾಧನೆ,  ಸಾಹಸವನ್ನೂ   ಮುಕ್ತ ಕಂಠದಿಂದ  ಕೊಂಡಾಡಿದ್ದಾರೆ.

loading...