ಅರಣ್ಯ ಹಕ್ಕು ಕಾಯಿದೆ ಜಾಗೃತಾ ಅಭಿಯಾನ

0
62

29kmt1

ಕುಮಟಾ,29: ಅರಣ್ಯ ಹಕ್ಕು ಕಾಯಿದೆ ಮಂಜೂರಿಗೆ ಕೇಂದ್ರ ಸರ್ಕಾರವು ಡಿಸೆಂಬರ್ 31 ಕಾಲಮಾನದಂಡ ನಿಗದಿಗೊಳಿಸಿರುವ ಹಿನ್ನೆಲೆಯಲ್ಲಿ ಗ್ರಾಮ ಅರಣ್ಯ ಹಕ್ಕು ಸಮಿತಿ ತೀವ್ರತರದ ಕಾರ್ಯ ಪ್ರವೃತ್ತರಾಗುವ ದಿಶೆಯಲ್ಲಿ ಹೋರಾಟ ಸಮಿತಿಯು ಹೆಚ್ಚಿನ ಒತ್ತು ನೀಡುವುದು. ಈ ಹಿನ್ನೆಲೆಯಲ್ಲಿ ವ್ಯಾಪಕ ಜಾಗೃತೆ ಮೂಡಿಸಲು ಅತಿಕ್ರಮಣದಾರ ಹೋರಾಟಗಾರರ ವೇದಿಕೆಯು ಜಿಲ್ಲೆಯಲ್ಲಿ 150 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅರಣ್ಯ ಹಕ್ಕು ಕಾಯಿದೆ ಜಾಗೃತಾ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ ಎ ರವೀಂದ್ರ ನಾಯ್ಕ ಹೇಳಿದರು.
ಅವರು ಪಟ್ಟಣದ ನೆಲ್ಲಿಕೇರಿ ಮಾಹಾಸತಿ ಸಭಾಂಗಣದಲ್ಲಿ ಬುಧವಾರ ತಾಲೂಕು ಹೋರಾಟಗಾರರ ಪದಾಧಿಕಾರಿ ಹಾಗೂ ಗ್ರಾಮ ಅರಣ್ಯ ಹಕ್ಕು ಸಮಿತಿ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ರಾಜ್ಯ ಸರ್ಕಾರವು ಅರಣ್ಯವಾಸಿಗಳ ಪರವಾದ ನಿಲುವನ್ನು ಹೊಂದಿದ್ದು, ಮಂಜೂರಿಗೆ ನಿರ್ದಿಷ್ಟವಾದ ನಿರ್ದೇಶನ ನೀಡಿದ್ದಾಗ್ಯೂ ಸಹಿತ ಮಂಜೂರಿ ಪ್ರಕ್ರಿಯೆಯಲ್ಲಿ ಸಾಗುವಳಿ ಹಕ್ಕನ್ನು ಪಡೆಯುವ ದಿಶೆಯಲ್ಲಿ ನಿರೀಕ್ಷಿಸಿದ ಫಲಿತಾಂಶ ದೊರಕದೇ ಇರುವುದು ವಿಷಾದಕರ. ಜಿಲ್ಲೆಯಲ್ಲಿ 96 ಸಾವಿರ ಅರ್ಜಿಗಳು ಮಂಜೂರಿ ಸಂಬಂಧ ಪ್ರಕ್ರಿಯೆಯಲ್ಲಿ ಇದ್ದು, ಇವುಗಳಲ್ಲಿ ಕೇವಲ 1291 ಹಕ್ಕನ್ನು ನೀಡಲು ಮಾತ್ರ ಸಾಧ್ಯವಾಗಿದ್ದು, ಸ್ವೀಕೃತವಾಗಿರುವ ಅರ್ಜಿಗಳಲ್ಲಿ ಶೇ.1.34 ರಷ್ಟು ಕುಟುಂಬಗಳು ಮಾತ್ರ ಜಿಲ್ಲೆಯಲ್ಲಿ ಹಕ್ಕನ್ನು ಪಡೆಯಲು ಸಾಧ್ಯವಾಗಿದೆ. ಈ ದಿಶೆಯಲ್ಲಿ ಹೋರಾಟ ಸಮಿತಿಯು ಮುಂದಿನ ದಿನಗಳಲ್ಲಿ ವ್ಯಾಪಕ ಜಿಲ್ಲಾದ್ಯಂತ ಮಂಜೂರಿ ಅಭಿಯಾನ ಸಂಘಟಿಸಲು ನಿರ್ಧರಿಸಲಾಗಿದೆ.

ಕಾಯಿದೆ ಅನುಷ್ಠಾನದಲ್ಲಿ ಸರ್ಕಾರದ ಇಚ್ಛಾಶಕ್ತಿ ಪ್ರದರ್ಶನ:
ನಿರ್ದಿಷ್ಟ ಕಾಲಮಾನದಂಡ ನಿಗದಿಗೊಳಿಸಿದ್ದಾಗ್ಯೂ, ಅಧಿಕಾರಿಗಳು ಅರಣ್ಯ ಹಕ್ಕು ಸಮಿತಿಗೆ ಕಾನೂನಾತ್ಮಕ ಸಬಲೀಕರಣ, ಮೂಲಭೂತ ಸೌಲಭ್ಯ ನೀಡುವಲ್ಲಿ ವಿಫಲವಾಗಿದ್ದಾರೆ. ಪದೇ ಪದೇ ಮಂಜೂರಿ ವಿಧಿ-ವಿದಾನಗಳ ನಿಯಮಾವಳಿಗಳನ್ನು ಬದಲಿಸುವುದರಿಂದ, ಅರಣ್ಯ ಹಕ್ಕು ಸಮಿತಿಯ ಕಾರ್ಯವಿಧಾನದಲ್ಲಿ ಅನಾವಶ್ಯಕ ಹಸ್ತಕ್ಷೇಪ ಮಾಡುವುದರಿಂದ ಇಂದು ಗ್ರಾಮ ಅರಣ್ಯ ಹಕ್ಕು ಸಮಿತಿಗಳಿಗೆ ಗೊಂದಲಕ್ಕೆ ಕಾರಣವಾಗಿದೆ.

ಅರಣ್ಯ ಹಕ್ಕು ಕಾಯಿದೆ: 5ಲಕ್ಷ ಕರಪತ್ರ:
ಅನುಸೂಚಿತ ಬುಡಕಟ್ಟು ಮತ್ತು ಇತರೇ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕುಗಳ ಕಾಯಿದೆ ಮಂಜೂರಿಗೆ ಸಂಬಂಧಪಟ್ಟಂತೆ ಕಾನೂನು ಅಂಶವನ್ನು ಪ್ರಸ್ತುತ ಪಡಿಸುವ ಉದ್ದೇಶದಿಂದ 5 ಲಕ್ಷ ಕರಪತ್ರ ಮುದ್ರಿಸಿ ರಾಜ್ಯಾದ್ಯಂತ ಬಿತ್ತರಿಸಲಾಗುತ್ತಿದೆ. ಸರ್ಕಾರೇತರ ಸಂಸ್ಥೆಯಿಂದ, ಸರ್ಕಾರ ಮತ್ತು ಸಾರ್ವಜನಿಕರಿಂದ ಹಣ ಸಂಗ್ರಹಿಸದೇ ಕಾಯಿದೆ ಜಾಗೃತೆ ಮೂಡಿಸುತ್ತಿರುವುದು ವಿಶೇಷವಾಗಿದೆ. ಮಂಜೂರಿಗೆ ಸಂಬಂಧಿಸಿದ ಕಾಯಿದೆ ಅಂಶಗಳು, ಮಂಜೂರಿ ವಿಧಿ-ವಿಧಾನವು ಕರಪತ್ರದಲ್ಲಿ ಪ್ರಕಟಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಂಜುನಾಥ ತಿಮ್ಮಾ ಮರಾಠಿ ಅಧ್ಯಕ್ಷತೆ ವಹಿಸಿದ್ದರು. ಶ್ಯಾಮಲಾ ಪಟಗಾರ. ರಾಮಾ ಮೊಗೇರ, ಹರಿಶ್ಚಂದ್ರ ಪಟಗಾರ, ಗಿರಿ ಗೌಡ, ಲೋಕೇಶ್ ಗೌಡ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here