ಅಳಿವಿನಂಚಿನಲ್ಲಿ ನವೇಭಾವನೂರ ಆಶ್ರಮ ವಸತಿ ಶಾಲೆ !

0
88

ಭೂಮಿ ದಾನ ಮಾಡಿದವರೆ ಶಾಲೆಯ ಸರ್ವಾಧಿಕಾರಿ | ಮಳೆ ಬಂದರೆ ಶಾಲೆ ಒಳಗಡೆ ನೀರು
| ಚಂದ್ರಶೇಖರ ಸೋಮಣ್ಣವರ
ಶಿರಹಟ್ಟಿ: ತಾಲೂಕಿನ ನವೇಭಾವನೂರ ಗ್ರಾಮದಲ್ಲಿ ಸರಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಪರಿಶಿಷ್ಟ ಜಾತಿ, ಪಂಗಡದ ಬಡ ವಿದ್ಯಾರ್ಥಿಗಳಿಗೆ ಆಶ್ರಮ ಶಾಲೆಯನ್ನು ಸ್ಥಾಪಿಸಿರುವುದು ಬಹಳ ಒಳ್ಳೆಯ ವಿಚಾರ ಆದರೆ ಈ ಶಾಲೆಯ ಅವ್ಯವಸ್ಥೆಯಿಂದಾಗಿ ನೂರು ಮಕ್ಕಳಿದ್ದ ಸಂಖ್ಯೆ ಈಗ ದಿನದಿಂದ ದಿನಕ್ಕೆ ಕಡಿಮೆಯಾಗಿ ಮುಚ್ಚುವ ಹಂತಕ್ಕೆ ಬಂದಿರುವುದು ಅಲ್ಲಿನ ಜನತೆಯ ದೌರ್ಭಾಗ್ಯವೆ ಸರಿ.
ಈ ಶಾಲೆಯಲ್ಲಿ ಒಂದರಿಂದ ಐದನೇಯ ತರಗತಿವರೆಗಿನ ಎಲ್ಲಾ ವರ್ಗಗಳ ಮಕ್ಕಳು ಸೇರಿ ಒಟ್ಟು 63 ವಿದ್ಯಾರ್ಥಿಗಳಿದ್ದು ಗುತ್ತಿಗೆ ಆಧಾರದ ಮೇಲೆ ನಾಲ್ಕು ಜನ ಶಿಕ್ಷಕರು ಒಬ್ಬ ವಾರ್ಡನ್ ಒಬ್ಬ ಕಾವಲುಗಾರ ಸೇರಿದಂತೆ ಅಡುಗೆ ಕೆಲಸ, ಕಸಗೂಡಿಸುವುದು, ಬಟ್ಟೆ ತೊಳೆಯುವುದು ಹೀಗೆ ಇತ್ಯಾದಿ ವಿದ್ಯಾರ್ಥಿಗಳ ಕೆಲಸ ಕಾರ್ಯಗಳಿಗಾಗಿ ಒಟ್ಟು ನಾಲ್ಕು ಜನ ಮಹಿಳೆಯರು ಸಹ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವಸತಿ ಶಾಲೆಯಲ್ಲಿ ಗುಣಮಟ್ಟದ ಆಹಾರದ ಕೊರತೆ: ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ನೀಡುವುದಿರಲಿ ಉತ್ತಮ ಶಿಕ್ಷಣದಿಂದಾನು ವಂಚಿತರಾಗಿದ್ದಾರೆ. ಈ ಕುರಿತು ಅಲ್ಲಿನ ಶಿಕ್ಷಕರಿಗೆ ಮಾತನಾಡಿದರೆ ಯಾವುದೇ ಪ್ರತಿಕ್ರಯೆ ಅವರಲ್ಲಿ ದೊರೆಯುತ್ತಿಲ್ಲ ಈ ವ್ಯವಸ್ಥೆಯಿಂದಾಗಿ ಪ್ರತಿವರ್ಷ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ.
ಮೆನು ಚಾರ್ಟ್ ಪ್ರಕಾರ ಆಹಾರ ವಿತರಣೆಯಾಗುತ್ತಿಲ್ಲ: ವಸತಿ ನಿಲಯದಲ್ಲಿ ಇರುವ ಮಕ್ಕಳಿಗೆ ಪ್ರತಿದಿನ ಶಾಲೆಯಲ್ಲಿ ಮಕ್ಕಳಿಗೆ ಮೆನು ಚಾರ್ಟ ಪ್ರಕಾರ ಆಹಾರ ವಿತರಣೆ ಮಾಡಬೇಕು ಅದನ್ನು ಇಲ್ಲಿನ ಕೆಲಸಗಾರರು ಆ ಚಾರ್ಟ್ ಅಂದರೆ ಗೊತ್ತಿಲ್ಲದ ವ್ಯಕ್ತಿಗಳು ಇಲ್ಲಿ ಕೆಲಸಮಾಡುತ್ತಿದ್ದಾರೆ. ಮಕ್ಕಳಿಗೆ ದೊರೆಯಬೇಕಾದ ಹಲವು ಸೌಲಭ್ಯಗಳು ಕಳ್ಳ ಮಾರ್ಗದ ಮೂಲಕ ಮತ್ತೊಬ್ಬರ ಮನೆ ಸೇರಿ ದುರುಪಯೋಗವಾಗುತ್ತಿವೆ ಎಂದು ಅಲ್ಲಿನ ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಶಾಲೆಯ ಆವರಣದಲ್ಲಿ ಸ್ವಚ್ಚತೆ ಇಲ್ಲ: ಶಾಲೆಯ ವಸತಿ ನಿಲಯದ ಪೂರ್ವ ಭಾಗದಲ್ಲಿ ಗಿಡಗಂಟಿಗಳು ಕಸದ ರಾಶಿಗಳು ಹಾಗೂ ಗಲೀಜುಗಳನ್ನು ನೋಡಿದರೆ ಅಲ್ಲಿನ ಸಿಬ್ಬಂದಿಗಳ ಸ್ವಚ್ಚತೆಗೆ ಹಿಡಿದ ಕೈಗನ್ನಡಿಯಾಗಿದೆಯಲ್ಲದೇ ಇಲ್ಲಿನ ಮಕ್ಕಳ ಆರೋಗ್ಯ ಸ್ಥಿತಿ ಹೇಗಿರಬಹುದೆಂದು ನಾಗರಿಕರಲ್ಲಿ ಪ್ರಶ್ನೆ ಮೂಡುವಂತಾಗಿದೆ.
ಮಳೆ ಬಂದರೆ ಶಾಲೆ ಒಳಗೆ ನೀರು: ಶಾಲೆ ಹಾಗೂ ವಸತಿ ನಿಲಯದ ಬಹಳಷ್ಟು ಕಿಟಕಿಗಳ ಗ್ಲಾಸ್ ಒಡೆದು ಹೋಗಿದ್ದು ಮಳೆ ಬಂದರೆ ನೀರು ಒಳಗೆ ಬರುತ್ತಿದ್ದರೂ ಸಹ ದುರಸ್ಥಿಗೊಂಡಿಲ್ಲ ಹಾಗೂ ಸರಕಾರದ ಆದೇಶದ ಪ್ರಕಾರ ಈ ಶಾಲೆಗೆ ಮಕ್ಕಳಿಗಾಗಿಯೇ ಒಂದು ಪ್ರತ್ಯೇಕವಾದ ಶುದ್ಧ ನೀರಿನ ಘಟಕ ಸ್ಥಾಪಿಸಬೇಕು ಅದು ಸಹ ಇಲ್ಲ.
ಶಾಲೆಗೆ ಭೂಮಿ ದಾನ ನೀಡಿದವರೆ ಶಾಲೆಯ ಸರ್ವಾಧಿಕಾರಿಯಂತೆ: ಶಾಲೆಗೆ ಭೂಮಿಯನ್ನು ದಾನ ಮಾಡಿದ ಹನುಮಂತಗೌಡ ಪಾಟೀಲ ಎಂಬುವರೇ ಈ ಶಾಲೆಯ ಸರ್ವಾಧಿಕಾರಿಯಾಗಿದ್ದು, ಇವರ ಮಗ ಕಾವಲುಗಾರನಾಗಿ ಹಾಗೂ ಇವರ ಸೊಸೆ ಅಡುಗೆಯ ಕೆಲಸದವಳಾಗಿ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರಣ ಮಕ್ಕಳ ಹಿತ ದೃಷ್ಟಿಯಿಂದ ಈ ಆಶ್ರಮ ಶಾಲೆಯಲ್ಲಿ ಯಾವುದು ಸರಿಯಿಲ್ಲ ಎನ್ನುವುದು ಪಾಲಕರ ಹಾಗೂ ಸಾರ್ವಜನಿಕರ ಆರೋಪವಾಗಿದೆ.
ಒಟ್ಟಾರೆಯಾಗಿ ಶಾಲೆಯು ಹಲವಾರು ಸಮಸ್ಯೆಗಳ ಆಗರವಾಗಿದ್ದು ಈ ಆಶ್ರಮ ಶಾಲೆಯಲ್ಲಿರುವ ನಮ್ಮ ಮಕ್ಕಳು ಎಷ್ಟು ಸುರಕ್ಷಿತ ಹಾಗೂ ಮಕ್ಕಳ ಸ್ಥಿತಿಗತಿಯ ಬಗ್ಗೆ ಪಾಲಕರಲ್ಲಿ ಈಗ ಚಿಂತೆ ಮೂಡುತ್ತಿದೆ. ಸರಕಾರ ಈ ಆಶ್ರಮ ವಸತಿ ಶಾಲೆಗೆ ಕೋಟಿಗಟ್ಟಲೇ ಖರ್ಚು ಮಾಡಿದ ಹಣ ವ್ಯರ್ಥವಾಗಿ ಅಳಿವಿನಂಚಿಗೆ ಬಂದಿರುವ ಶಾಲೆಯ ಆಸ್ತಿತ್ವವನ್ನು ಉಳಿಸಿಕೊಳ್ಳಲು ಚುನಾಯಿತ ಜನಪ್ರತಿನಿಧಿಗಳು ಶಿಕ್ಷಣ ಪ್ರೇಮಿಗಳು ಹಾಗೂ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕಿದೆ.
ಬಾಕ್ಸ್:
ಈ ವಿಷಯ ಈಗಾಗಲೇ ನನ್ನ ಗಮನಕ್ಕೆ ಬಂದಿದ್ದು ಈ ಶಾಲೆ ಉಳಿಯುವಿಗಾಗಿ ನಾನು ಎಲ್ಲಾ ರಿತಿಯಿಂದಲೂ ಸಹ ಪ್ರಯತ್ನ ಮಾಡಿದ್ದು ಈಗಿರುವ ಸಮಸ್ಯಗಳನ್ನು ಸಹ ಸರಿಪಡಿಸಲು ಖಂಡಿತಾ ಕ್ರಮ ಕೈಗೊಳ್ಳುವೆನು.
-ಎಸ್ ಬಿ. ಹರ್ತಿ, ತಾಲೂಕಾ ಸಮಾಜ ಕಲ್ಯಾಣಾಧಿಕಾರಿಗಳು ಶಿರಹಟ್ಟಿ 

loading...