ಅವಿರೋಧ :ಅಧ್ಯಕ್ಷರಾಗಿ ಉಪ್ಪಿನ ಆಯ್ಕೆ

0
3

ಬೆಳಗಾವಿ: ಬೆಳಗಾವಿ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷರಾಗಿ ಸೋಮವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವಿರೋಧವಾಗಿ ಶ್ರೀಧರ ಉಪ್ಪಿನ್ ಆಯ್ಕೆಯಾಗಿದ್ದಾರೆ.

ಉಪ್ಪಿನ್ ಈವರೆಗೆ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಇಂಡಸ್ಟ್ರಿ ಸೆಕ್ಟರ್ ಪ್ರತಿನಿಧಿಸುತ್ತಾರೆ.

ಉಪಾಧ್ಯಕ್ಷರಾಗಿ ಪಂಚಾಕ್ಷರಿ ಚೊಣ್ಣದ್, ೨ನೇ ಉಪಾಧ್ಯಕ್ಷರಾಗಿ ಸಿ.ಸಿ.ಹೊಂಡದಕಟ್ಟಿ, ಗೌರವ ಖಜಾಂಚಿಯಾಗಿ ಈರಣ್ಣ ದಯಣ್ಣವರ್, ಗೌರವ ಕಾರ್ಯದರ್ಶಿಯಾಗಿ ಹೇಮೇಂದ್ರ ಪೋರವಾಲ, ಗೌರವ ಜಂಟಿ ಕಾರ್ಯದರ್ಶಿಯಾಗಿ ಸಂತೋಷ ಕಲಘಟಗಿ ಆಯ್ಕೆಯಾಗಿದ್ದಾರೆ. ವಾಣಿಜ್ಯೋದ್ಯಮ ಸಂಘಧ ಕಾರ್ಯಕಾರಿ ಸಮಿತಿಯ ೮ ಸ್ಥಾನಕ್ಕೆ ಪ್ರತಿವರ್ಷ ಚುನಾವಣೆ ನಡೆಯುತ್ತದೆ. ಅಧ್ಯಕ್ಷ ಸ್ಥಾನ ಒಂದು ವರ್ಷ ಅವಧಿಯದ್ದಿರುತ್ತದೆ.

loading...