ಅಸ್ಪøಶ್ಯತಾ ನಿವಾರಣಾ ಬೀದಿ ನಾಟಕ ಮೂಲಕ ಜಾಗೃತಿ ಕಾರ್ಯಕ್ರಮ

0
58

ಕನ್ನಡಮ್ಮ ಸುದ್ದಿ-ಯಲಬುರ್ಗಾ : ಸಮಾಜ ಕಲ್ಯಾಣ ಇಲಾಖೆ ಯಲಬುರ್ಗಾ ಹಾಗೂ ಶ್ರೀ ದುರ್ಗಾಶಕ್ತಿ ಗ್ರಾಮೀಣಾಭಿವೃದ್ಧಿ ಸಾಂಸ್ಕøತಿ ಸೇವಾ ಸಂಸ್ಥೆ ಕುಷ್ಟಗಿ ಇವರ ಸಹಯೋದಲ್ಲಿ ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಸ್ಪøಶ್ಯತಾ ನಿವಾರಣೆ, ಆರೋಗ್ಯ, ಶಿಕ್ಷಣ, ಬಾಲಕಾರ್ಮಿಕ, ಬಾಲ್ಯವಿವಾಹ ಹಾಗೂ ಸರಕಾರಿ ಯೋಜನೆಗಳ ಕುರಿತು ಬೀದಿ ನಾಟಕ ಪ್ರದರ್ಶನ ನೀಡುತ್ತಾ ಜಾಗೃತಿ ಮೂಡಿಸಲಾಯಿತು.
ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮಗಳಾದ ವಜ್ರಬಂಡಿ, ಹಿರೇಮ್ಯಾಗೇರಿ, ಸಂಗನಾಳ, ಕಲ್ಲೂರ, ಬಳೂಟಗಿ, ಕರಮುಡಿ, ಗೆದಿಗೇರಿ, ಜೂಲಕಟ್ಟಿ, ಮುಧೋಳ, ತುಮ್ಮರಗುದ್ದಿ, ಶಿರಗುಂಪಿ, ತಳಕಲ್, ಬಳೀಗೇರಿ, ಕುದ್ರಿಮೋತಿ ಗುತ್ತೂರ, ಬೆಣಕಲ್ ಸೇರಿದಂತೆ ನಾನಾ ಗ್ರಾಮಗಳಲ್ಲಿ ಅಸ್ಪøಶ್ಯತಾ ಜಾಗೃತಿ ನಾಟಕ ನೀಡುತ್ತಾ ತಂಡದ ಮುಖ್ಯಸ್ಥ ಸಿದ್ದಪ್ಪ ಡಿ. ಕಲಾಲಬಂಡಿ ಮಾತನಾಡಿ ನಮ್ಮ ದೇಶ ಜಾತ್ಯಾತೀತ ದೇಶವಾಗಿದ್ದು ಇಲ್ಲಿ ಯಾರೂ ಜಾತಿ ಭೇಧ ಮಾಡದೇ ಎಲ್ಲರೂ ಒಂದೇ ಎಂದು ಬಾಳಬೇಕು. ಹೊಟೆಲ್, ಗುಡಿ ಗುಂಡಾರ, ನಳ ಇತರೆ ಸರಕಾರಿಯ ಕಾರ್ಯಲಯದಲ್ಲಿ ಜಾತಿ ಮಾಡದೇ ಸಮಾನತೆಯಿಂದ ಕಾಣಬೇಕು. ಮೇಲು ಕೀಳು ಎಂದು ಎನ್ನದೇ ಎಲ್ಲರೂ ಮಾನವರಾಗಿ ಸಹೋದರತ್ವ ಭಾವನೆಯಿಂದ ಬದುಕಬೇಕೆಂದು ನಾಟಕದ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಿದರು. ಸ್ವಚ್ಚತೆ, ಆರೋಗ್ಯ, ಶಿಕ್ಷಣ, ಬಾಲಕಾರ್ಮಿಕ, ಬಾಲ್ಯವಿವಾಹ ಹಾಗೂ ಸರಕಾರಿ ಯೋಜನೆಗಳ ಕುರಿತು ಬೀದಿ ನಾಟಕ ಪ್ರದರ್ಶನ ನೀಡಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ನಾಟಕ ಪ್ರದರ್ಶನ ತಂಡದಲ್ಲಿ ಬಸವರಾಜ ಉಪ್ಪಲದಿನ್ನಿ, ದೇವಪ್ಪ ಹೊಸಳ್ಳಿ, ಗೌರಮ್ಮ ಪೊ.ಪಾಟೀಲ, ಎಂ.ಕೆ ಕಲಾವತಿ, ಸಂಗಪ್ಪ ಸಂಗನಾಳ ಹಾಗೂ ಮತ್ತಿತರರು ಇದ್ದರು.

loading...