ಅಸ್ಸಾಂ ಹಿಂಸಾಚಾರ: ಮೃತಪಟ್ಟವರ ಸಂಖ್ಯೆ 5 ಕ್ಕೆ  ಏರಿಕೆ

0
5

ಗುವಾಹಟಿ-  ಅಸ್ಸಾಂನಲ್ಲಿ  ಪೌರತ್ವ ಕಾಯ್ದೆ ವಿರುದ್ಧ  ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರದ ಘಟನೆಯಲ್ಲಿ  ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಕಳದೆ 12 ರಂದು ಪೊಲಿಸರ  ಗಂಡೇಟಿನಿಂದ ಗಾಯಗೊಂಡಿದ್ದ ಪ್ರತಿಭಟನಾಕಾರ ಪೈಕಿ ಒಬ್ಬರು ಇಂದು ಮೃತಪಟ್ಟಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಸಹ ಹಿಂಸಾಚಾರ ಭುಗಿಲೆದ್ದಿದೆ.  ರೈಲ್ವೆ ನಿಲ್ದಾಣಗಳು ಮತ್ತು ಹಳಿಗಳು, ಮತ್ತು  ಕನಿಷ್ಠ 25 ಬಸ್ಸುಗಳಿಗೆ ಬೆಂಕಿ ಹಚ್ಚಲಾಗಿದೆ.
ಅಸ್ಸಾಂನಾದ್ಯಂತ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿದೆ.  ದಿಬ್ರುಗರ್ , ಗುವಾಹಟಿ ಮತ್ತು ಮೇಘಾಲಯದ ಕೆಲವು ಭಾಗಗಳಲ್ಲಿ ಕರ್ಫ್ಯೂ ಸಡಿಲಿಸಲಾಗಿದೆ. ಅಸ್ಸಾಂ ಮತ್ತು ಮೇಘಾಲಯದಲ್ಲಿ ಯುಜಿಸಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ಇದೆ ಕಾರಣಕ್ಕಾಗಿ ಮುಂದೂಡಲಾಗಿದೆ.

loading...