ಆಟೋ‌ ಮೀಟರ್ ಆದೇಶಕ್ಕೆ ಕೇವಲ ಮೂರು ದಿನ ಬಾಕಿ – ಆಟೋಗಳಿಗೆ ರಾಜಕಾರಣಿಗಳ ಶ್ರೀರಕ್ಷೆ – ನೆನೆಗುದಿಗೆ ಬಿದ್ದ ಕಾಯಾ೯ಚರಣೆ

0
411

ಕನ್ನಡಮ್ಮ ಸುದ್ದಿ
ಬೆಳಗಾವಿ: 14 ನಗರದಲ್ಲಿ ಸಂಚರಿಸುವ ಆಟೋಗಳಿಗೆ ತಿಂಗಳೊಳಗಾಗಿ‌ ಮೀಟರ್ ಅಳವಡಿಸದಿದ್ದರೆ ಆರ್ ಟಿಓ ಹಾಗೂ ಪೊಲೀಸ್ ಇಲಾಖೆಯ ಮೇಲೆ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ಎನ್.ಜಯರಾಮ್ ಅವರು ಆದೇಶ ನೀಡಿ ಇಂದಿಗೆ 27 ದಿನ ಕಳೆದರೂ ಮೀಟರ್ ಕಾಯಾ೯ಚರಣೆ ನೆನೆಗುದಿಗೆ ಬಿದ್ದಿದೆ.
ನಗರದಲ್ಲಿರುವ ಆಟೋ ಚಾಲಕರು ಪ್ರಯಾಣಿಕರ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ‌. ಆದ್ದರಿಂದ ಕಳೆದ ಮೂರುವರೆ ವಷ೯ದಿಂದ ಜಿಲ್ಲಾಡಳಿತ ಆದೇಶ ನೀಡುತ್ತದೆ. ಆರ್ ಟಿಓ ಪೊಲೀಸ್ ಇಲಾಖೆ ಮೀಟರ್ ಅನುಷ್ಠಾನಗೊಳಿಸಲು ವಿಫಲರಾಗಿದ್ದಾರೆ. ಆದ್ದರಿಂದ ತಿಂಗಳೊಗೆ ಮೀಟರ್ ಅಳವಡಿಸಬೇಕೆಂದು‌ ಆದೇಶ ನೀಡಿದರೂ ಪೊಲೀಸ್ ಇಲಾಖೆ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಕಾಯಾ೯ಚರಣೆ ಸ್ಥಗಿತಗೊಳಿಸಿದ್ದಾರೆ.
ಕಳೆದ ಮೂರುವರೇ ವಷ೯ದಿಂದ ಜಿಲ್ಲಾಧಿಕಾರಿಗಳು ಆದೇಶ ನೀಡುತ್ತಿದ್ದಾರೆ. ಈ ಬಾರಿಯಾದರೂ ನಗರದಲ್ಲಿ ಸಂಚರಿಸುವ ಆಟೋಗಳಿಗೆ‌ ಮೀಟರ್ ಅಳವಡಿಸುತ್ತಾರೆ. ಪ್ರಯಾಣಿಕರ ಸುಲಿಗೆ ತಪ್ಪುತ್ತದೆ ಎಂದು ಕೊಂಡಿದ್ದ ಸಾವ೯ಜನಿಕರಿಗೆ ಮತ್ತೇ ನಿರಾಸೆಯಾಗಿದೆ.
ಜಿಲ್ಲಾಧಿಕಾರಿಗಳು ಆದೇಶ ನೀಡಿ‌ದ ನಾಲ್ಕನೇ ದಿನಕ್ಕೆ ಸಂಚಾರಿ ಪೊಲೀಸರು ಮೀಟರ್ ಇಲ್ಲದ ಸುಮಾರು 210 ಆಟೋಗಳನ್ನು ಸೀಜ್ ಮಾಡಿದ ಸಂದಭ೯ದಲ್ಲಿ ಪ್ರಭಾವಿ ಶಾಸಕರು ಡಿಸಿಪಿ ಅವರ ಮುಖಾಂತರ ಸೀಜ್ ಮಾಡಿದ ಆಟೋಗಳಿಗೆ ದಂಡ ಭರಿಸಿ‌ ಬಿಡುಗಡೆಗೊಳಿಸಿದರು.
ನಂತರ ಕೆಲ ದಿನಗಳಲ್ಲಿ ಆಟೋ ಚಾಲಕರು ಜಿಲ್ಲಾಡಳಿತಕ್ಕೆ ಸಡ್ಡು‌ ಹೊಡೆದು.ಕಳೆದ ಮೂರುವರೆ ವಷ೯ಗಳಿಂದ ನಡೆಯುತ್ತಿರುವ ಆಟೋ ಮೀಟರ್ ಅಳವಡಿಕೆಯ ಆದೇಶ ನಿತ್ಯವೂ ಹೊಸ ತಿರುವ ಪಡೆಯುತ್ತಿದೆ. ಕಳೆದ ಕೇಲವು ದಿನಗಳ ಹಿಂದೆ ಜಿಲ್ಲಾಡಳಿತ ಒಂದು ತಿಂಗಳಲ್ಲಿ ಆಟೋ ಮೀಟರ್ ಅಳವಡಿಸಬೇಕೆಂಬ ಆದೇಶ ನೀಡಿದ ಮೇಲೆ ಹೊಸ‌ ಮೀಟರ್ ಪದ್ದತಿ ಆಟೋ ಚಾಲಕರು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು.
ಜಿಲ್ಲಾಧಿಕಾರಿಗಳ ಆದೇಶಕ್ಕೆ ಮೂರೇ ದಿನ ಬಾಕಿ ಉಳಿದಿದ್ದು‌ ಮೀಟರ್ ಅನುಷ್ಠಾನ ಕಡ್ಡಾಯವಾಗುತ್ತೋ ಅಥವಾ ಕೇವಲ ಆದೇಶಕ್ಕೆ‌ ಮಾತ್ರ ಮೀಟರ್ ಅಳವಡಿಕೆ ಸಿಮೀತವಾಗುತ್ತೋ ಕಾದು‌ ನೋಡಬೇಕಷ್ಟೆ.

loading...