ಹುಕ್ಕೇರಿ : ವೀರಶೈವ ಪಂಚಪೀಠಗಳಲ್ಲಿ ಒಂದಾದ ಶ್ರೀಶೈಲ ಸುಕ್ಷೇತ್ರದಲ್ಲಿ ಶ್ರೀಶೈಲ ಜಗದ್ಗುರು ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರನ್ನು ಇತ್ತೀಚೆಗೆ ಶಿವರಾತ್ರಿ ಪವಿತ್ರ ದಿನದ ಪೂರ್ವದಲ್ಲಿ ದೇವಸ್ಥಾನ ಆಡಳಿತಾಧಿಕಾರಿ ಅಗೌರವಿಸಿದ್ದು ಖಂಡನೀಯ ತಕ್ಷಣ ಅವನನ್ನು ಕೆಲಸದಿಂದ ವಜಾ ಮಾಡಿ ಪರಂಪರಾಗತ ಆಚರಣೆಗೆ ಗೌರವಿಸಬೇಕೆಂದು ಹುಕ್ಕೇರಿ ಶ್ರೀ ಗುರುಶಾಂತೇಶ್ವರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಆಗ್ರಹಿಸಿದ್ದಾರೆ.
ಘಟನೆಯ ಹಿನ್ನೆಲೆ: ಶಿವರಾತ್ರಿ ಮುನ್ನಾದಿನ ಶತ ಶತಮಾನಗಳಿಂದ ನಡೆದುಕೊಂಡ ಬಂದ ಆಚರಣೆ ಪ್ರಕಾರ ಶ್ರೀಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಜರುಗಿ,ನಂತರ ದೇವಸ್ಥಾನಕ್ಕೆ ಆಗಮಿಸಿ ಶ್ರೀಗಳು ಮಲ್ಲಿಕಾರ್ಜುನ ದೇವರ ದರ್ಶನ ಪಡೆಯುವುದು ವಾಡಿಕೆ.ಆದರೆ ಈ ಸಂದರ್ಭದಲ್ಲಿ ಶ್ರೀಗಳು ದೇವಸ್ಥಾನಕ್ಕೆ ಆಗಮಿಸಿದಾಗ ಆಡಳಿತಾಧಿಕಾರಿ ದೇವಸ್ಥಾನ ಬಾಗಿಲಲ್ಲಿ ಶ್ರೀಗಳನ್ನು ತಡೆದು ಸುಮಾರು 2 ಗಂಟೆಗೆ ಹೆಚ್ಚು ಸಮಯ ದರ್ಶನಕ್ಕೆ ಅವಕಾಶ ಕಲ್ಪಿಸದೆ ಅಗೌರವಿಸಿದ್ದಾನೆ.ಇದು ಕೇವಲ ಶ್ರೀಗಳಿಗೆ ಅಗೌರವಿಸಿದ್ದಲ್ಲ,ಆಚರಣೆಗೆ ಭಂಗ ತಂದ ಹಾಗೂ ವೀರಶೈವ ಸಮಾಜದ ಪರಂಪರಾಗತ ಸಂಪ್ರದಾಯ ವಿರೋಧಿಸಿದಂತಾಗಿದೆ.ಆದ್ದರಿಂದ ಆಂಧ್ರಪ್ರದೇಶ ಸರಕಾರ ತಕ್ಷಣ ಈ ಆಡಳಿತಾಧಿಕಾರಿಯನ್ನು ಕೆಲಸದಿಂದ ವಜಾ ಮಾಡಿ ವೀರಶೈವ ಸಮಾಜದ ಕ್ಷಮಾಪಣೆ ಕೇಳಬೇಕು.ಈ ಘಟನೆ ಕುರಿತು ಕರ್ನಾಟಕ ಸರಕಾರ ಮಧ್ಯ ಪ್ರವೇಶಿಸಿ ನ್ಯಾಯ ದೊರಕಿಸಬೇಕೆಂದು ಕೋರಿದ್ದಾರೆ.
ಭವಿಷ್ಯತ್ತಿನಲ್ಲಿ ಇಂತಹ ಪ್ರಮಾದ ಜರುಗಿದಲ್ಲಿ ಖಂಡಿತ ವೀರಶೈವ ಸಮಾಜ ಉಗ್ರ ಪ್ರತಿಭಟನೆಗೀಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಆಡಳಿತಾಧಿಕಾರಿ ವಜಾಗೆ ಆಗ್ರಹ
loading...