ಆದಿತ್ಯನಾಥ್ ರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ

0
30

ಬೆಳಗಾವಿ: ಕಾನೂನು ಸುವ್ಯವಸ್ಥೆ ಕುರಿತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬೆಳಗಾವಿಯ ಸರ್ಕಾರಿ ಅತಿಥಿ ಗೃಹದಲ್ಲಿ ರೈತ ಮುಖಂಡರ ಜೊತೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದಷ್ಟು ಎಲ್ಲಿಯೂ ಹಾಳಾಗಿಲ್ಲ. ಹೀಗಿರುವಾಗ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಲ್ಲಿಗೆ ಬಂದು ನಮಗೆ ಪಾಠ ಹೇಳುವುದು ಏನಿದೆ? ಎಂದು ತಿರುಗೇಟು ನೀಡಿದ್ದಾರೆ.
ನನ್ನ ಹೆಸರಿನಲ್ಲಿಯೇ ರಾಮನಿದ್ದಾನೆ. ನಾವು ಟಿಪ್ಪು ಜಯಂತಿಯಷ್ಟೇ ಅಲ್ಲ, ಹನುಮ ಜಯಂತಿ, ರಾಮನವಮಿಯನ್ನು ಮಾಡುತ್ತೇವೆ. ಜೊತೆಗೆ ಬಸವ, ವಾಲ್ಮೀಕಿ, ಕನಕದಾಸರು, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಮಾಡುತ್ತೇವೆ. ಎಲ್ಲರೂ ಸೌಹಾರ್ದದಿಂದ ಇರುವ ಪ್ರಯತ್ನ ನಮ್ಮದಾಗಿದೆ. ಕೋಮುಗಲಭೆ ಸೃಷ್ಟಿಕರ್ತರೇ ಬಿಜೆಪಿಯವರು. ನಾವು ಕೋಮುಸೌಹಾರ್ದ ಕಾಪಾಡುವ ಕೆಲಸವನ್ನು ಮಾಡುತ್ತೇವೆ. ಅವರಿಂದ ಪಾಠ ಕಲಿಯುವ ಅಗತ್ಯ ನಮಗಿಲ್ಲ ಎಂದು ತಿಳಿಸಿದರು

loading...