ಆಧಾರ ಕಡ್ಡಾಯವೆಂದು ಘೋಷಿಸಲು ನ್ಯಾಯಾಲಯಕ್ಕೆ ಮನವಿ

0
15

ನವದೆಹಲಿ,ಅ.4- ಸರ್ಕಾರಿ ಯೋಜನೆಗಳ

ಸೌಲಭ್ಯಗಳನ್ನು ಪಡೆಯಲು ಸಾರ್ವಜನಿಕರಿಗೆ ಆಧಾರ್

ಕಾರ್ಡ್ ಕಡ್ಡಾಯವಲ್ಲ ಎಂಬ ತನ್ನ ಆದೇಶದಲ್ಲಿ

ಬದಲಾವಣೆ ಮಾಡುವಂತೆ ಕೇಂದ್ರ ಸರ್ಕಾರ ಸರ್ವೋಚ್ಛ

ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದೆ.

ಕೇಂದ್ರ ಸರ್ಕಾರದ ಮನವಿಯನ್ನು ಪರೀಶೀಲಿಸಿದ

ಸವೋಚ್ಛ ನ್ಯಾಯಾಲಯ , ಅರ್ಜಿ ವಿಚಾರಣೆಯನ್ನು

ಕೈಗೆತ್ತಿಕೊಂಡಿದ್ದು, ವಿಚಾರಣೆಯನ್ನು ಮಂಗಳವಾರ

ನಡೆಸುವುದಾಗಿ ಹೇಳಿದೆ.

ಸರ್ವೋಚ್ಛ ನ್ಯಾಯಾಲಯ ಇತ್ತೀಚೆಗೆ ತಾನು

ನೀಡಿದ್ದ ತೀರ್ಪಿನಲ್ಲಿ ಯಾವುದೇ ವ್ಯಕ್ತಿ ಸರ್ಕಾರದ

ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್

ಕಡ್ಡಾಯವಲ್ಲ ಎಂದು ಹೇಳಿತ್ತು.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಗೊಂದಲ

ಉಂಟಾಗಿತ್ತು

loading...

LEAVE A REPLY

Please enter your comment!
Please enter your name here