ಆಧುನಿಕತೆ ಬಿರುಗಾಳಿಗೆ ಸಿಕ್ಕಿ ಜಾನಪದ ಲೋಕ ದೂಳಿಪಟ: ಕುರಕುರಿ

0
82

ಬೆಳಗಾವಿ:21 ಸಮೃದ್ಧವಾದ ಜಾನಪದ ಲೋಕ ಆಧುನಿಕತೆಯ ಬಿರುಗಾಳಿಯ ಸುನಾಮಿಗೆ ಸಿಕ್ಕು ದೂಳಪಟವಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ ಪ್ರೊ. ಧರಣೇಂದ್ರ ಕುರಕುರಿ ಕಳವಳವ್ಯಕ್ತಪಡಿಸಿದರು.
ಅವರು ರವಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಹಿರಿಯ ಸಾಹಿತಿ, ಚಿಂತಕ ಪೆÇ್ರ.ಜ್ಯೋತಿ ಹೊಸೂರ ಅವರ ಬದುಕು ಬರಹ ಕುರಿತು ಅವಲೋಕನ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಉತ್ತರ ಕರ್ನಾಟಕದಲ್ಲಿ ದೊಡ್ಡಾಟ, ಸಣ್ಣಾಟ, ಸಂಗ್ಯಾಬಾಳ್ಯಾ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕ ಜಾನಪದಗಳನ್ನು ನಾಟಕ, ಕಲೆ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಚಿಕ್ಕವರಾಗಿದ್ದಾಗ ಎಲ್ಲವನ್ನು ನೋಡಿ ಆನಂದಿಸಿದ್ದೇವು. ಆದರೆ ಇಂದಿನ ಮಕ್ಕಳಿಗೆ ಜಾನಪದ ರುಚಿ ಗೊತ್ತಿಲ್ಲ. ಅಲ್ಲದೇ ಬಾಲ್ಯದ ಸಮಯವನ್ನು ಸರಿಯಾಗಿ ಬಳಸಿಕೊಳ್ಳದೇ ಇರುವುದು ಬೇಸರದ ಸಂಗತಿ ಎಂದರು.
ಜನರ ಜೀವನದ ಕುರಿತು ಜಾನಪದಗಳನ್ನು ಹಿರಿಯರು ರಚಿಸಿದ್ದು, ಅದೂ ತಮ್ಮ ಮುದಂದಿನ ಪೀಳಿಗೆಗೂ ಹೇಳುತ್ತಿದ್ದರು. ಅಲ್ಲದೇ ನೆಲಗಡಲೆ ಹಾಗೂ ಬೆಲ್ಲ ಇವು ಜಾನಪದ ಸತ್ವಗಳು. ದೇಶ ಪ್ರಗತಿಯಲ್ಲಿ ಜಾನಪದ ಸತ್ವಗಳೂ ಮರೆಯಾಗುತ್ತಿವೆ. ದೇಶದ ಪ್ರಗತಿ ಇರಬೇಕು. ಆದರೆ ಸಂಸ್ಕøತಿ ಸಂಪತ್ತನ್ನು ಕಳೆದುಕೊಂಡು ಮಕ್ಕಳಿಗೆ ಬಾಲ್ಯದ ಜೀವನದ ಆಟ ಮರೆಯಾಗುತ್ತಿವೆ ಎಂದು ತಿಳಿಸಿದರು.
ಅಂದು ಗಂಡನ ಹೆಸರು ಪತ್ನಿ ಹೇಳಬೇಕಾದರೆ ನಾಚಿಕೆ ಪಡುತ್ತಿದ್ದಳು. ಆದರೆ ಇಂದು ಗಂಡನನ್ನೇ ಹೆಸರಿಟ್ಟು ಕರೆಯುವ ಪತ್ನಿಯರು ಹೆಚ್ಚುತ್ತಿದ್ದು, ಒಗಟು ಎನ್ನುವ ಪದಗಳಿಗೆ ಅರ್ಥವಿಲ್ಲದಂತ್ತಾಗಿದೆ. ಜಾನಪದ ಕಲೆ, ಸಂಸ್ಕøತಿ ಹಾಗೂ ವೈ`Àವವನ್ನು ಮೇಲೆತ್ತರಕ್ಕೆ ಒಯ್ಯುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದು ಸಲಹೆ ನೀಡಿದರು.
ಇಂದಿನ ದಿನಮಾನಗಳಲ್ಲಿ ಯಂತ್ರಿಕರಣ ವಸ್ತುಗಳು ಹೆಚ್ಚಾದಂತೆ ಒಂದು ಕಡೆ ಹೊಸದನ್ನು ಪಡೆದುಕೊಳ್ಳುತ್ತಿದ್ದರೇ ಇನ್ನೊದೆಡೆ ಹಳೆಯ ವಸ್ತುಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಇದೇ ರೀತಿ ಹಳೆಯ ಸಾಮಗ್ರಿಗಳನ್ನು ಕಳೆದುಕೊಳ್ಳುತ್ತಾ ಸಾಗಿದರೆ ಮುಂದಿನ ಪೀಳಿಗೆಗೆ ಜಾನಪದ ಹಾಗೂ ನಮ್ಮ ಸಂಸ್ಕøತಿಯ ಮಹತ್ವ ನಶಿಸಿಹೊಗುತ್ತವೆ ಎಂಬ ಭಯ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಡಾ.ರಾಮಕೃಷ್ಣ ಮರಾಠೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಜಿನದತ್ತ ದೇಸಾಯಿ, ಪೆÇ್ರ.ಸೋಮಶೇಖರ ಬಳೋಜಿ, ಡಾ.ಸಿ.ಕೆ.ನಾವಲಗಿ, ಡಾ.ಅಶೋಕ ನರೋಡೆ,ಬಾಬುರಾವ ನಡೋಣಿ, ಕನ್ನಡ ಮತ್ತು ಸಂಸ್ಕøತ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಎ.ಎ. ಸನದಿ, ಎ.ವಾಯ್. ಮೆಣಸಿನಕಾಯಿ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here