ಆಧುನಿಕ ಭರಾಟೆಯಲ್ಲಿ ಇಂದು ಗುರು-ಶಿಷ್ಯರ ಅವಿನಾಭಾವ ಸಂಬಂಧ ಹದಗೇಡುವಿತ್ತೇವೆ: ಬ್ರಹ್ಮಾನಂದ ಮಹಾಸ್ವಾಮಿಗಳು

0
36

ಮೋಳೆ : – ಆಧುನಿಕ ಭರಾಟೆಯಲ್ಲಿ ಇಂದು ಗುರು-ಶಿಷ್ಯರ ಅವಿನಾಭಾವ ಸಂಬಂಧ ಹದಗೇಡುವಿತ್ತೇವೆ ಎಂದು ಪರಮಾನಂದವಾಡಿ ಪೀಠಾಧ್ಯಕ್ಷರಾದ ಡಾ.ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ವಿಷಾದ ವ್ಯಕ್ತಪಡಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಾಗವಾಡ ಇವುಗಳ ಸಂಯುಕ್ತಾಶ್ರಮದಲ್ಲಿ ಸಪ್ಟೆಂಬರ್ 18 ರಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ರ ಜನ್ಮ ದಿನಾಚರಣೆಯನ್ನು ಅಥಣಿ ತಾಲೂಕಿನ ಉಗಾರ ಖುರ್ದ ಗ್ರಾಮದ ಜೈನ ಸಮಾಜ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದು ಅದರ ಅಂಗವಾಗಿ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರ ಹಾಗೂ ಪ್ರಶಸ್ತಿ ವಿಜೇತರ ಸನ್ಮಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ಇಂದು ಶಿಕ್ಷಕರಲ್ಲಿ ಅಧ್ಯಯನದ ಕೊರತೆ ಎದ್ದು ಕಾಣುತ್ತಿದ್ದು, ಶಿಕ್ಷಕರಾದವರು ಸತತ ಅಧ್ಯಯನಶೀಲರಾಗಿರಬೇಕು. ಅವರು ಮಕ್ಕಳಿಗೆ ಅದ್ಭುತವಾದ ಜ್ಞಾನ ನೀಡಲು ಅವರ ಮನಸ್ಸು, ಹೃದಯ ಶುದ್ಧವಾಗಿರಿಸಿಕೊಂಡು ಮಕ್ಕಳ ಅಂತರಂಗದಾಳಕ್ಕೆ ತಲುಪುವಂತೆ ಬೋಧಿಸಬೇಕೆಂದರು.

ಮಕ್ಕಳ ಮನಸ್ಸು ಹೂವಿನಂತದ್ದು, ಅವರಿಗೆ ಪಾಠ ಮಾಡುವಾಗ ಜಾತಿ, ಧರ್ಮವನ್ನು ಸೇರಿಸದೇ ಮುಕ್ತವಾಗಿ ಶಿಕ್ಷಣ ನೀಡಬೇಕು. ಒಬ್ಬ ವ್ಯಕ್ತಿ ಎಷ್ಟೇ ಉನ್ನತ ಸ್ಥಾನಕ್ಕೇರಿದರು. ಆತ ತನ್ನ ಸ್ವಂತ ಬಲದಿಂದ ಆ ಸ್ಥಾನಕ್ಕೇರಲು ಸಾಧ್ಯವಿಲ್ಲ. ಆತನು ಗುರುವಿನ ಮಾರ್ಗದರ್ಶನ ಪಡದೇ ಇರುತ್ತಾನೆ. ಉನ್ನತ ಹುದ್ದೆ ಅಲಕಂರಿಸಿದ ಮಾತ್ರಕ್ಕೆ ಜ್ಞಾನ ನೀಡಿದ ಗುರುವನ್ನು ಎಂದಿಗೂ ಮರೆಯಬಾರದೆಂದು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರಾಜು ಕಾಗೆ ವಹಿಸಿ ಶಿಕ್ಷಣದ ಜತೆಗೆ ಜ್ಞಾನ, ಮಾನವೀಯ ಮೌಲ್ಯಗಳು, ಸಂಸ್ಕಾರವನ್ನು ನೀಡಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಿ ಆ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಹತ್ವ ಪಾತ್ರ ವಹಿಸಬೇಕೆಂದ ಅವರು ದೀಪ ತಾನು ಉರಿದು ಇತರರಿಗೆ ಬೆಳಕು ನೀಡುವಂತೆ ಶಿಕ್ಷಕರು ಸದಾ ಮಕ್ಕಳಿಗೆ ಜ್ಞಾನ ಹಂಚುತ್ತಾ ವೃತ್ತಿ ಧರ್ಮ ಪಾಲಿಸಬೇಕೆಂದು ಕರೆ ನೀಡಿದರು.

ಈ ವೇಳೆ ಜಮಖಂಡಿ ಸರ್ಕಾರಿ ಡಯಟ್‍ನ ಉಪನ್ಯಾಸಕ ಎಂ.ಬಿ.ಪಡೆಯಣ್ಣನವರ, ಜಿಪಂ ಸದಸ್ಯರಾದ ರವೀಂದ್ರ ಪೂಜಾರಿ, ಅಲ್ಕಾ ಕೋಳೆಕರ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಗುರುನಾಥ ಹೂಗಾರ, ತಾಪಂ ಸದಸ್ಯ ರುಸ್ತುಂ ಸುತಾರ, ಸುವರ್ಣಾ ವಾಘಮೋಡೆ, ಹೊಳೆಪ್ಪ ಪೂಜಾರಿ, ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಡಿ.ಸೋಲಂದಕರ, ಎಸ್.ಎಸ್.ಶೇಡಶ್ಯಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಮಾತನಾಡಿದರು.

ಇದೇ ವೇಳೆ ನಿವೃತ್ತ ಶಿಕ್ಷಕರು ಹಾಗೂ ಆದರ್ಶ ಶಿಕ್ಷಕರನ್ನು ಸನ್ಮಾನಿಸಲಾಯಿತು.

loading...

LEAVE A REPLY

Please enter your comment!
Please enter your name here