ಆಧುನಿಕ ಭರಾಟೆಯಲ್ಲಿ ಬಡವರ ಫ್ರೀಜ್

0
88

ಯಲಬುರ್ಗಾ : ಹಿಂದಿನ ಕಾಲದಲ್ಲಿ ಕುಂಬಾರಿಕೆಗೆ ಬಾರಿ ಬೆಡಿಕೆಯಿತ್ತು ಈ ವೃತ್ತಿಯನ್ನೆ ನಂಬಿಕೊಂಡು ಹಲವಾರು ಕುಟಂಬಗಳು ಬದಕುತಿದ್ದವು.ಆ ಕಾಲದಲ್ಲಿ ಕುಂಬಾರ ಮಾಡಿದ ಮಡಿಕೆ,ಕುಡಿಕೆ,ಗಡಿಗೆ,ಪರಣ,ಪಾತ್ರೆ ,ತಟ್ಟೆಗಳಲ್ಲಿ ಜನರು ಅಡುಗೆ ಊಟವನ್ನು ಮಾಡುತ್ತಿದ್ದರು ಆದರೆ ಮನುಷ್ಯ ಆಧುನಿಕತೆಗೆ ಮಾರು ಹೋಗಿರುವದರಿಂದ ಆಧುನಿಕೆ ಭರಾಟೆಯಲ್ಲಿ ಕುಂಬಾರಿಕೆ ನಶಿಸುತ್ತಿರುವದರಿಂದ ಕುಂಬಾರರ ಕುಟಂಬ ತಮ್ಮ ತುತ್ತಿನ ಚೀಲವನ್ನು ತುಂಬಿಸಿಕೊಳ್ಳಲು ಬೇರೆ ವೃತ್ತಿಯಲ್ಲಿ ತೊಡಗಿರುವದು ಕಂಡುಬರುತ್ತದೆ.ಹಾಗೆ ಹಿರಿಯ ತಲೆಗಳು ಈಗಲು ಕೂಡ ಕುಂಬಾರಿಕೆ ಮಾಡುವದರಲ್ಲಿ ತೋಡಗಿ ಕಷ್ಟದ ಜೀವನ ಬಂಡಿ ಸಾಗಿಸುತಿದ್ದಾರೆ.
ಬೇಡಿಕೆ ಕಡಿಮೆಯಾಗಿರುವದು : ಆಧುನಿಕತೆಗೆ ಜನರು ಮಾರು ಹೋಗಿ ಸ್ಟಿಲ್ ಪಾತ್ರೆಯತ್ತ ಸಾಗಿರುವದರಿಂದ ತಮ್ಮ ಗೃಹ ಉಪಯೋಗಿ ಬಳಕೆಗೆ ಸ್ಟಿಲ್,ಹಿತ್ತಾಳೆ,ಕಂಚು, ಅಲ್ಯೂಮಿನಿಯಮ್ ಪಾತ್ರೆ ಬಳಸುವದರಿಂದ ಕುಂಬಾರ ಮಾಡಿದ ಮಡಿಕೆ ,ಗಡಿಗಿಗೆ ಬೆಡಿಕೆ ಕಡಿಮೆಯಾಗಿರುವದರಿಂದ ಕುಂಬಾರ ತನ್ನ ಬದಕು ನಡೆಸುವದು ಕಷ್ಟವಾಗಿದೆ.
ಬಡವರ್ ಫ್ರೀಜ್ : ಬೇಸಿಗೆಯಲ್ಲಿ ಶ್ರೀಮಂತರ ತಣ್ಣ ನೀರಿಗೋಸ್ಕರ ಫ್ರೀಜ್ ಖರೀದಿಸಿ ನೀರು ಕುಡಿಯುತ್ತಾರೆ. ಆದರೆ ಬಡವರು ಫ್ರೀಜ್ ಬದಲು ಗಡಿಗೆ ಖರೀದಿಸಿ ತಣ್ಣನಯ ನೀರು ಕುಡಿಯುತ್ತಾರೆ.ಕುಂಬಾರ ಮನೆತನದವರು ತಮ್ಮ ತಾತ ಮುತ್ತಾನ ಕಾಲದಿಂದಲು ಇದೆ ವೃತ್ತಿಯನ್ನೆ ನಂಬಿಕೊಂಡು ಬಂದಿರುವದರಿಂದ ಕಷ್ಟದ ಬದಕು ಸಾಗಿಸುತಿದ್ದವೆ ಎಂದು ಕುಂಬಾರ ಮನೆತನದ ಹಿರಿಯರು ತಮ್ಮ ಅಳಲನ್ನು ತೊಡಿಕೊಳ್ಳುತ್ತಾರೆ. ಇವರು ಸುಮಾರು 4ರಿಂದ 5 ಕಿ,ಮಿ,ದೂರಹೋಗಿ ಮಡಿಕೆ ತಯಾರಿಕೆಗೆ ಜೇಡಿಮಣ್ಣನ್ನು ತರಲಾಗುತಿದೆ .ಹೀಗೆ ತಂದ ಮಣ್ಣನ್ನು ಕೆಂಚಮ್ಮ ಮತ್ತು ಮಕ್ಕಳು ಸೇರಿ ಚೆನ್ನಾಗಿ ಕುಟ್ಟಿ ಪುಡಿಮಾಡಿ ಜರಡಿ ಮಾಡಿದಾಗ ನುಣಪಾಗುತ್ತದೆ ಆ ವೇಳೆಗೆ ಮಣ್ಣಿನಲ್ಲಿದ್ದ ಕಲ್ಲು,ಕಸ,ಕಡ್ಡಿ ಬೇರ್ಪಡೆಯಾಗಿ ಉತ್ತಮ ಮಣ್ಣನ್ನು ಮಾತ್ರ ಮಡಿಕೆ ತಯಾರಿಕೆಗೆ ಬಳಸುತ್ತಾರೆ.ಮಣ್ಣಿಗೆ ನೀರು ಹಾಕಿ ಕಲಿಸಿದಾಗ ,ಅದು ಅಂಟು ಅಂಟಾದ ಗುಣ ಹೊಂದಿರುವುದು ಅಗತ್ಯ ಅದನ್ನು ಚಕ್ರದ ಮೇಲಿಟ್ಟು ಬೇಕಾದ ಆಕಾರದ ಮಡಿಕೆಗಳನ್ನು ತಯಾರಿಸುತ್ತಾರೆ ದಿನವೂಂದಕ್ಕೆ ಗರಿಷ್ಠ 25 ರಿಂದ 30 ಮಡಿಕೆಗಳನ್ನು ತಯಾರಿಸಿ ,ಸ್ಪಷ್ಟವಾದ ಆಕಾರ ನಿಡಲಾಗುತ್ತದೆ .ನಂತರ ಸುಮಾರು 12 ಘಂಟೆಗಳ ಕಾಲ ಬಿಸಲಿನಲ್ಲಿ ಒಣಗಿಸಿ ಒಳಭಾಗದಲ್ಲಿರುವ ಒಲೆಯ ಸುತ್ತ ಹಾಕಿ ಬೆಂಕಿ ಹಾಕಲಾಗುತ್ತದೆ ಹೀಗೆ 12ರಿಂದ 18 ಘಂಟೆಗಳ ಕಾದ ಮೇಲೆ ಮಡಿಕೆಗಳು ಬಣ್ಣ ಬದಲಿಸಿ ಗಟ್ಟಿ ಮುಟ್ಟಾಗುತ್ತವೆ.ಇವರು ಮಣ್ಣಿನಲ್ಲಿಯೆ ಹಣತೆ,ರೋಟ್ಟಿ ಕಾವಲಿ,ಹೂಜಿ,ಅನ್ನಬಸಿಯುವ ಮಡಿಕೆ,ಹ್ಯಾಂಗಿಂಗ್ ಪಾಟ್,ಹೂವಿನಕುಂಡ,ಅಸ್ತ್ರೊಲೆ,ಕಾಣಿಕೆ ಡಬ್ಬ,ಸೇರಿದಂತೆ 40ಕ್ಕೂ ಹೆಚ್ಚು ರೀತಿಯಲ್ಲಿ ಮಣ್ಣಿನ ಪಾತ್ರೆಗಳನ್ನು ಇವರು ತಯಾರಿಸುತ್ತಾರೆ.ಈ ರೀತಿಯಲ್ಲಿ ಕುಂಬಾರ ತಯಾರಿಸಿದ ಮಡಿಕೆಗೆ ಬೆಲೆಯಿಲ್ಲದೆ ಮತ್ತು ಇವಗಳ ಬೇಡಿಕೆ ಕಡಿಮೆಯಾಗುವದರಿಂದ ಒಂದು ಕಾಲದಲ್ಲಿ ಬದುಕಿನ ಭಾಗವಾಗಿದ್ದ ಕುಂಬಾರಿಕೆ ಇಂದು ವಿನಾಶದ ಅಂಚಿಗೆ ತಲುಪಿದೆ.ಹೋಟ್ಟೆಪಾಡಿಗಾಗಿ ಕುಲಕಸುಬ ನಡೆಸುತ್ತಿದೇವೆ ಲಾಭ ಅಂತೇನಿಲ್ಲ.ಶನಿವಾರ ಸಂತೆಯಲ್ಲಿ ಮಡಿಕೆಗಳನ್ನು ಮಾರಾಟ ಮಾಡುತ್ತೇವೆ ಎನ್ನುತ್ತಾರೆ. ಇತ್ತಿಚಿನ ದಿನಮಾನಗಳಲ್ಲಿ ಕುಂಬಾರಿಕೆ ಗುಡಿಕೈಗಾರಿಕೆ ನಶಿಸುತಿದ್ದರೂ ಇದೂವರೆಗು ಸರ್ಕಾರದಿಂದ ಯಾವುದೇ ಸಾಲ ಸೌಲಭ್ಯವನ್ನು ನೀಡದೆ ಹೊದರೆ ಮುಂದಿನ ದಿನಮಾನಗಳಲ್ಲಿ ಕುಂಬಾರಿಕೆ ಮರೆಯಾಗುತ್ತದೆ.

loading...

LEAVE A REPLY

Please enter your comment!
Please enter your name here