ಆನಂದ ಅಪ್ಪುಗೋಳ ಮತ್ತೆ ಜೈಲುಪಾಲು

0
45

ಕನ್ನಡಮ್ಮ ಸುದ್ದಿ-ಬೆಳಗಾವಿ: ಬೆಳಗಾವಿ: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯಿಂದ ಬಹುಕೋಟಿ ಠೇವಣಿ ವಂಚನೆ ಪ್ರಕರಣ ಸಂಬಂಧ ಸೊಸೈಟಿ ಅಧ್ಯಕ್ಷ ಹಾಗೂ ನಿರ್ಮಾಪಕ ಆನಂದ ಅಪ್ಪುಗೋಳ ಬುಧವಾರ ಮತ್ತೆ ಜೈಲು ಪಾಲಾಗಿದ್ದಾರೆ.

ಠೇವಣಿ ಹಣ ಮರಳಿಸದೇ ವಂಚಿಸಿದ ಆರೋಪದಡಿ ಆನಂದ ಅಪ್ಪುಗೋಳ, ವ್ಯವಸ್ಥಾಪಕರಾದ ಮಹಾಂತೇಶ ಅಂಗಡಿ, ಶಿವಾಜಿ ಕಲ್ಲೂರ ಅವರನ್ನು ಮಾ. 7ರವರೆಗೆ ನ್ಯಾಯಂಗ ಬಂಧನಕ್ಕೆ ನೀಡಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶ ಸತೀಶ ಸಿಂಗ್ ತೀರ್ಪು ನೀಡಿದರು. ಆನಂದ ಅಪ್ಪುಗೋಳ ಹಾಗೂ ಇಬ್ಬರು ವ್ಯವಸ್ಥಾಪಕರನ್ನು ಕೋರ್ಟ್‍ನಿಂದ ನೇರವಾಗಿ ಹಿಂಡಲಗಾ ಜೈಲಿಗೆ ಹಾಕಿದ್ದಾರೆ.

loading...