ಆನೆಗಳ ಮಹಾಪ್ರಯಾಣ ಕುರಿತ ಆರು ಕಿರು ಚಿತ್ರಗಳ ಸರಣಿ ಅನಾವರಣ

0
10

ಬೆಂಗಳೂರು- ವಿಶ್ವ ಆನೆ ದಿನ 2019ರ ಅಂಗವಾಗಿ ದಿ ಬೀರ್ಸ್ ಸಮೂಹದ ವಜ್ರದ ಬ್ರಾಂಡ್ ಆಗಿರುವ ಫಾರೆವರ್ ಮಾರ್ಕ್ ಈಗ ಆನೆಗಳ ಮಹಾಪ್ರಯಾಣವನ್ನು ಕುರಿತ ಹಾಗೂ ಅವು ಹಿಡಿದಿಡುವಂತಹ ಆರು ಕಿರುಚಿತ್ರಗಳ ಸರಣಿ (ಮೂವಿಂಗ್ ಜೈಂಟ್ಸ್)ಯನ್ನು ಅನಾವರಣಗೊಳಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ಕೈಗೊಂಡ ವಿಶ್ವದ ಅತ್ಯಂತ ದೊಡ್ಡ ಪ್ರಮಾಣದ ಮತ್ತು ಸುದೀರ್ಘವಾದ ಸ್ಥಳಾಂತರಗಳಲ್ಲಿ ಒಂದರ ಭಾಗವಾಗಿ ಈ ಜಗತ್ತಿನ ಅತ್ಯಂತ ಪ್ರಮುಖ ಪ್ರಬೇಧಗಳಾಗಿರುವ ಆನೆಗಳು ನಡೆಸುವ ಮಹಾಪ್ರಯಾಣವನ್ನು ಇಲ್ಲಿ ತೋರಿಸಲಾಗಿದೆ.

ಮೂವಿಂಗ್ ಜೈಂಟ್ಸ್ ಎಂಬ ಹೆಸರಿನಡಿ ಪ್ರಮುಖ ಸಂರಕ್ಷಣಾ ಉಪಕ್ರಮವನ್ನು ಆರಂಭಿಸುತ್ತಿರುವು ದಾಗಿ 2018ರಲ್ಲಿ ಡಿ ಬೀರ್ಸ್ ಸಮೂಹ ಪ್ರಕಟಿಸಿತ್ತು. ಇದರಡಿ ಸುಮಾರು 200 ಆನೆಗಳನ್ನು ದಕ್ಷಿಣ ಆಫ್ರಿಕಾದಲ್ಲಿನ ವೆನೆಷಿಯ ಲಿಂಪೊಪೊ ನೇಚರ್ ರಿಸರ್ವ್ (ವಿಎಲ್‍ಎನ್‍ಆರ್)ನಿಂದ ಮುಜಾಂಬಿಕ್‍ನ ರಾಷ್ಟ್ರೀಯ ಉದ್ಯಾನಕ್ಕೆ ಸ್ಥಳಾಂತರಿಸುವುದಾಗಿ ಹೇಳಿತ್ತು. ಎನ್‍ಜಿಒ ಪೀಸ್ ಪಾರ್ಕ್ ಫೌಂಡೇಷನ್ ಮತ್ತು ಮುಜಾಂಬಿಕ್ ಸರ್ಕಾರಗಳು ಈ ಕಾರ್ಯದ ಸಹ ನಿರ್ವಹಣೆ ಕೈಗೊಂಡಿದ್ದವು. ಮುಗಿಯಲು ಮೂರು ವರ್ಷ ಹಿಡಿಯುವ ಈ ಉಪಕ್ರಮದ ಉದ್ದೇಶ ಎಂದರೆ ವಿಎಲ್‍ಎನ್‍ಆರ್ ನಲ್ಲಿ ತಾವು ಬೆಂಬಲಿಸುವ ಪ್ರಾಣಿಗಳು ಮತ್ತು ಸಸ್ಯಗಳು ಭವಿಷ್ಯದಲ್ಲಿ ಉಳಿದುಕೊಳ್ಳುವಂತೆ ಮಾಡಲು ಅವುಗಳ ನೈಸರ್ಗಿಕ ವಾಸ ಪ್ರದೇಶವನ್ನು ಸಂರಕ್ಷಿಸಿ, ಸುಸ್ಥಿರವಾಗಿ ಉಳಿಸುವುದಾಗಿತ್ತು. ಜೊತೆಗೆ ಮೊಜಾಂಬಿಕ್‍ನಲ್ಲಿ ಆನೆಗಳ ಸಂಖ್ಯೆಯನ್ನು ಉಳಿಸಲು ಅವಕಾಶ ಮಾಡುಕೊಡುವ ಉದ್ದೇಶವೂ ಸೇರಿತ್ತು.
ಆರು ಭಾಗಗಳ ಈ ಕಿರುಚಿತ್ರಗಳ ಸರಣಿಯಲ್ಲಿ 1700 ಕಿಲೋಮೀಟರ್ ದೂರದಲ್ಲಿರುವ ಜಿನಾವೆ ರಾಷ್ಟ್ರೀಯ ಉದ್ಯಾನಕ್ಕೆ ಈ ಗಾಂಭೀರ್ಯ ತುಂಬಿದ 48 ಬೃಹತ್ ಜೀವಿಗಳನ್ನು ಸ್ಥಳಾಂತರಿಸುವ ಮನಕಲಕುವ ಕಥೆಯನ್ನು ಹೇಳಲಾಗಿದೆ. ಪ್ರತಿ ಕಂತಿನಲ್ಲಿ ಈ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ವಿವಿಧ ಪರಿಣತರು, ಪಾಲುದಾರರು ಮತ್ತು ಸಹಭಾಗಿತ್ವ ಹೊಂದಿರುವವರ ದೃಷ್ಟಿಯ ಹಾಗೂ ಅನುಭವಗಳ ಮೂಲಕ ಕಥೆಯನ್ನು ಹೇಳಲಾಗಿದೆ.
ಇವರಲ್ಲಿ ಆನೆಗಳ ಸ್ಥಳಾಂತರ ತಜ್ಞ ಕೆಸ್ಟರ್ ವಿಕೆರಿ, ಪ್ರಾಣಿ ವೈದ್ಯ ಡಾ. ಆಂಡ್ರೆ ಉಯ್ಸ್, ಇಕಾಲಜಿ ಮತ್ತು ಡಿಬಿಸಿಎಂ ಪ್ರಾಪರ್ಟೀಸ್‍ನ ಹಿರಿಯ ವ್ಯವಸ್ಥಾಪಕ ಪೀಟ್ ಊಸ್ತುಯ್‍ಜೆನ್ ಮತ್ತು ಜಿನಾವೆ ರಾಷ್ಟ್ರೀಯ ಉದ್ಯಾನದ ರೇಂಜರ್ ಎಸ್ಟೆವೊಚಿವ್ರೆ ಸೇರಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿನ ತನ್ನ ವೆನೆಷಿಯೊ ಲಿಂಪೊಪೊ ನೇಚರ್ ನಿಂದ ಸಂರಕ್ಷಿತ ಅರಣ್ಯದಿಂದ ಮೊಜಾಂಬಿಕ್‍ನ ಜಿನಾವೆ ರಾಷ್ಟ್ರೀಯ ಉದ್ಯಾನಕ್ಕೆ 53 ಆನೆಗಳ ಎರಡನೇ ಗುಂಪನ್ನು ಯಶಸ್ವಿಯಾಗಿ ಸ್ಥಳಾಂತರಗೊಳಿಸಿರುವುದಾಗಿ ಜುಲೈ 2019ರಲ್ಲಿ ಡಿ ಬೀರ್ಸ್ ಸಮೂಹವು ಪ್ರಕಟಿಸಿತ್ತು.
ಡಿ ಬೀರ್ಸ್ ಸಮೂಹದ ಭಾಗವಾಗಿ ಫಾರೆವರ್‍ಮಾರ್ಕ್ ಈ ಅತ್ಯಾಧುನಿಕ ಸಂರಕ್ಷಣಾ ಯೋಜನೆಯ ಭಾಗವಾಗಿರಲು ಮತ್ತು ಡಿ ಬೀರ್ಸ್ ಸಮೂಹ ಹಾಗೂ ಪೀಸ್ ಪಾರ್ಕ್ ಫೌಂಡೇಷನ್ ಜೊತೆಗೆ ಪಾಲುದಾರಿಕೆ ಕುರಿತು ಹೆಮ್ಮೆ ಪಡುತ್ತದೆ. ಮುಂದಿನ ಪೀಳಿಗೆಗಳಿಗೆ ವಿಎಎಲ್‍ಎನ್‍ಆರ್ ಅನ್ನು ಸಂರಕ್ಷಿಸಿ, ಉಳಿಸುವುದು ಅಲ್ಲದೇ ಅದರಿಂದ ಮೊಜಾಂಬಿಕ್‍ನ ಆನೆಗಳ ಸಂಖ್ಯೆಯನ್ನು ಪುನರ್ ಸ್ಥಾಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಫಾರೆವರ್ ಮಾರ್ಕ್ ಪ್ರಕಟಣೆಯಲ್ಲಿ ತಿಳಿಸಿದೆ.

loading...