ಆನೆ ಹಿಂಡಿನಿಂದ ತಪ್ಪಿಸಿಕೊಂಡ ಆನೆ ಮರಿ

0
18

ಮುಂಡಗೋಡ: ಸುಮಾರು 1 ತಿಂಗಳ ಪ್ರಾಯದ ಮರಿ ಆನೆಯೊಂದು ಅರಣ್ಯ ಪ್ರದೇಶ ಅಂಚಿನ ಕೃಷಿ ಹೊಂಡದಲ್ಲಿ ಬಿದ್ದು ಆನೆ ಹಿಂಡಿನಿಂದ ತಪ್ಪಿಸಿಕೊಂಡು ಪರದಾಡಿದ ಘಟನೆ ತಾಲೂಕಿನ ಮೈನಳ್ಳಿ ಗ್ರಾಮದ ಬಳಿ ನಡೆದಿದೆ.
ಆನೆ ಮರಿ ಕೃಷಿ ಹೊಂಡದಲ್ಲಿ ಬಿದ್ದು ಪರದಾಡುವುದನ್ನು ಕಂಡ ಸ್ಥಳಿಯ ಗೌಳಿಗರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಿಯರ ನೆರವಿನಿಂದ ಆನೆ ಮರಿಯನ್ನು ಹೊರ ತೆಗೆದು ಉಪಚಾರ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಆನೆ ಹಿಂಡಿನಿಂದ ತಪ್ಪಿಸಿಕೊಂಡಿರುವ ಮರಿ ಆನೆಯನ್ನು ಗದ್ದೆಗಳಿಗೆ ಲಗ್ಗೆ ಇಡಲು ಆಗಮಿಸುವ ಆನೆ ಹಿಂಡಿನಲ್ಲಿ ಬಿಡುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ತಾಲೂಕಿನ ವಿವಿದ ಭಾಗಗಳಲ್ಲಿ ಬೆಳೆದು ನಿಂತಿರುವ ಭತ್ತದ ಗದ್ದೆಗಳಿಗೆ ಲಗ್ಗೆ ಇಡುತ್ತಿರುವ ಆನೆಗಳು, ಮಂಗಳವಾರ ಮೈನಳ್ಳಿ ಭಾಗದ ರೈತರೊಬ್ಬರ ಗದ್ದೆಯಲ್ಲಿ ಭತ್ತ ಸೇವಿಸಿ ಮರಳುತ್ತಿರುವ ವೇಳೆ ಈ ಮರಿಯಾನೆ ಗುಂಡಿಗೆ ಉರುಳಿ ಆನೆಗಳ ತಂಡದಿಂದ ತಪ್ಪಿಸಿಕೊಂಡಿದೆ.
ವಲಯ ಅರಣ್ಯಾಧಿಕಾರಿ ವೀರೇಶ ಕಬ್ಬಿನ, ಉಪ ಅರಣ್ಯಾಧಿಕಾರಿ ನಾಗರಾಜ ಕಲಾಲ, ವನರಕ್ಷಕ ನಿಂಗಪ್ಪ ಹಾಗೂ ಸ್ಥಳಿಯ ರೈತರು ಕಾರ್ಯಾಚರಣೆ ನಡೆಸಿದ್ದಾರೆ.

loading...

LEAVE A REPLY

Please enter your comment!
Please enter your name here