ಆಫ್ಘಾನಿಸ್ತಾನದಲ್ಲಿ ಘರ್ಷಣೆ: 8 ಸೈನಿಕರು ಸೇರಿದಂತೆ 15 ಮಂದಿ ಸಾವು

0
4

ಕುಂಡುಜ್‌, ಆಫ್ಘಾನಿಸ್ತಾನ – ಉತ್ತರ ಅಫ್ಘಾನಿಸ್ತಾನದ ಕುಂಡುಜ್ ಪ್ರಾಂತ್ಯದ ಚಾರ್ದಾರ ಜಿಲ್ಲೆಯಲ್ಲಿ ಗುರುವಾರ ನಡೆದ ಘರ್ಷಣೆಗಳಲ್ಲಿ ಎಂಟು ಮಂದಿ ಭದ್ರತಾ ಪಡೆ ಸಿಬ್ಬಂದಿ ಹಾಗೂ ಏಳು ಉಗ್ರರು ಸೇರಿದಂತೆ ಕನಿಷ್ಟ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಭದ್ರತಾ ಅಧಿಕಾರಿ ಅಬ್ದುಲ್ ಹಾದಿ ಜಮಾಲ್ ತಿಳಿಸಿದ್ದಾರೆ.

ತಾಲಿಬಾನ್ ಉಗ್ರರ ಗುಂಪು ಜಿಲ್ಲಾ ಕೇಂದ್ರದ ಸುತ್ತಲಿನ ಭದ್ರತಾ ತಪಾಸಣಾ ಕೇಂದ್ರದ ದಾಳಿ ಮಾಡಿದ್ದು, ಈ ವೇಳೆ, ಭದ್ರತಾ ಸಿಬ್ಬಂದಿ ಪ್ರತಿ ದಾಳಿ ನಡೆಸಿದಾಗು ಗುಂಡಿನ ಕಾಳಗ ನಡೆದು ಏಳು ಉಗ್ರರು ಹತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಘರ್ಷಣೆಯಲ್ಲಿ ಆರು ಮಂದಿ ಉಗ್ರರು ಮತ್ತು 10 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಹೆಚ್ಚಿನ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸುತ್ತಿದ್ದಂತೆ ಉಗ್ರರು ಸ್ಥಳದಿಂದ ಪಲಾಯನಗೈದಿದ್ದಾರೆ ಎಂದು ಅವರು ಹೇಳಿದ್ದಾರೆ.

ಚಾರ್ದಾರ ಜಿಲ್ಲೆಯ ಪ್ರಮುಖ ಭಾಗಗಳನ್ನು ನಿಯಂತ್ರಣಕ್ಕೆ ಪಡೆದಿರುವ ತಾಲಿಬಾನ್ ಉಗ್ರರು ಈ ಕುರಿತಂತೆ ಇನ್ನೂ ಪ್ರತಿಕ್ರಿಯಿಸಿಲ್ಲ.

loading...